ಇಂದ್ರಜಿತ್ ಯಾರೆಂದು ಗೊತ್ತಿಲ್ಲ: ರಾಗಿಣಿ ಸ್ನೇಹಿತೆ, ಆದ್ರೆ 8 ತಿಂಗಳಿಂದ ಸಂಪರ್ಕಿಸಿಲ್ಲ-ನಿಧಿ

ಇಂದ್ರಜಿತ್ ಯಾರೆಂದು ಗೊತ್ತಿಲ್ಲ: ರಾಗಿಣಿ ಸ್ನೇಹಿತೆ, ಆದ್ರೆ 8 ತಿಂಗಳಿಂದ ಸಂಪರ್ಕಿಸಿಲ್ಲ-ನಿಧಿ

[lazy-load-videos-and-sticky-control id=”Xc145Jvoq7c”]

ಮೈಸೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಅಂಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ನಟಿ ನಿಧಿ ಸುಬ್ಬಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಿದ್ದಾರೆ..
ಪಾರ್ಟಿಗಳನ್ನು ಮಾಡುವವರೆಲ್ಲಾ ಕೆಟ್ಟವರಾಗುವುದಿಲ್ಲ, ಹಾಗಂತ ಪೂಜೆ ಮಾಡುವವರೆಲ್ಲಾ ಒಳ್ಳೆಯವರಾಗುವುದಿಲ್ಲ. ನಾನು ಡ್ರಗ್ಸ್ ತೆಗೆದುಕೊಳ್ಳುವವರ ಪರವಾಗಿ ಇಲ್ಲ, ಈ ಡ್ರಗ್ ಮಾಫಿಯಾ ಎಲ್ಲಾ ಕ್ಷೇತ್ರದಲ್ಲಿಯೂ ಇದೆ, ಆದರೆ ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

ರಾಗಿಣಿಯನ್ನ 8 ತಿಂಗಳಿಂದ ಸಂಪರ್ಕಿಸಿಲ್ಲ..
ಇನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನಿಧಿ ಸುಬ್ಬಯ್ಯ ಹೇಳಿಕೆ ನೀಡಿದ್ದು, ಇಂದ್ರಜಿತ್ ಲಂಕೇಶ್ ಯಾರೆಂದು ನನಗೆ ಗೊತ್ತಿಲ್ಲ. ನಟಿ ರಾಗಿಣಿ ದ್ವಿವೇದಿ ನನ್ನ ಸ್ನೇಹಿತೆ ಆದರೆ ಅವರನ್ನು 8 ತಿಂಗಳಿಂದ ಸಂಪರ್ಕ ಮಾಡಿಲ್ಲ, ಅವರಿಗೆ ನೋಟಿಸ್ ನೀಡಿದ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸೂರ್ಯ ಮುಳುಗಿದ ಬಳಿಕವೇ ಪಾರ್ಟಿ ನಡೆಯೋದು..
ಕಿಂಗ್‌ಪಿನ್ ಅನಿಕಾ ಯಾರೆಂದು ನನಗೆ ಗೊತ್ತಿಲ್ಲ. ಪಾರ್ಟಿಗಳು ಕೇವಲ ನಮ್ಮ ಚಿತ್ರರಂಗದಲ್ಲಿ ಮಾತ್ರ ನಡೆಯಲ್ಲ, ಮೈಸೂರು, ಮಂಡ್ಯ, ಕೊಡಗಿನಲ್ಲೂ ನಡೆಯುತ್ತದೆ. ಸೂರ್ಯ ಮುಳುಗಿದ ಬಳಿಕವೇ ಪಾರ್ಟಿ ನಡೆಯೋದು, ನಾನು ಕೂಡ ಹಲವು ಪಾರ್ಟಿಗಳನ್ನು ಮಾಡಿದ್ದೇನೆ. ಆದರೆ ನಾನು ಯಾವತ್ತೂ ಡ್ರಗ್ಸ್ ನೋಡಿಲ್ಲ ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ.