ಈಗ್ಲಾದ್ರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ -ರಾಗಿಣಿ ಬಿಡುಗಡೆಯ ನಿರೀಕ್ಷೆಯಲ್ಲಿರುವ ತಂದೆ ರಾಕೇಶ್​ ಸಂತಸ

ಮಗಳು ರಾಗಿಣಿ ಬಿಡುಗಡೆ ಆಗ್ತಿರುವುದು ಸಂತಸ ತಂದಿದೆ. ನನ್ನ ಮಗಳು ರಾಗಿಣಿ ಜಾಮೀನಿನ ಮೇಲೆ ಈಗ ಮನೆಗೆ ಬರ್ತಿದ್ದಾಳೆ. ಈಗಲಾದರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಕೇಶ್​ ತಮ್ಮ ಸಂತಸ ಹಂಚಿಕೊಂಡರು.

  • TV9 Web Team
  • Published On - 19:00 PM, 25 Jan 2021
ಈಗ್ಲಾದ್ರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ -ರಾಗಿಣಿ ಬಿಡುಗಡೆಯ ನಿರೀಕ್ಷೆಯಲ್ಲಿರುವ ತಂದೆ ರಾಕೇಶ್​ ಸಂತಸ
ರಾಕೇಶ್ ದ್ವಿವೇದಿ

ಬೆಂಗಳೂರು: ಕೆಲ ಹೊತ್ತಿನಲ್ಲೇ ಜೈಲಿನಿಂದ ರಾಗಿಣಿ ದ್ವಿವೇದಿ ಬಿಡುಗಡೆಯಾಗಲಿರುವ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ನಟಿಯ ತಂದೆ ರಾಕೇಶ್ ದ್ವಿವೇದಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಮಗಳು ರಾಗಿಣಿ ಬಿಡುಗಡೆ ಆಗ್ತಿರುವುದು ಸಂತಸ ತಂದಿದೆ. ನನ್ನ ಮಗಳು ರಾಗಿಣಿ ಜಾಮೀನಿನ ಮೇಲೆ ಈಗ ಮನೆಗೆ ಬರ್ತಿದ್ದಾಳೆ. ಈಗಲಾದರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಕೇಶ್​ ತಮ್ಮ ಸಂತಸ ಹಂಚಿಕೊಂಡರು.

ಸಹಜವಾಗಿ ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದೆ.ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ನನ್ನ ಮಗಳು ಇರಲಿಲ್ಲ. ಹೀಗಾಗಿ ಅವಳು ಹೊರಬಂದ ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸುತ್ತೇವೆ. ನಂತರ, ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ರಾಕೇಶ್ ದ್ವಿವೇದಿ ಹೇಳಿದ್ದಾರೆ.

‘ಬಹಳ ದಿನಗಳ ಬಳಿಕ ಮಗಳನ್ನು ನೋಡ್ತಿದ್ದೇವೆ’
ಜೊತೆಗೆ, ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಸಹ ಮಾತನಾಡಿದ್ದು ಬಹಳ ದಿನಗಳ ಬಳಿಕ ಮಗಳನ್ನು ನೋಡ್ತಿದ್ದೇವೆ. ನಮಗೂ ಸಂತೋಷವಾಗಿದೆ. ಸುಮಾರು 144 ದಿನಗಳಾಗಿತ್ತು. ಮಗಳನ್ನು ರಿಸೀವ್ ಮಾಡಿಕೊಳ್ಳೋದಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಸಾಕಷ್ಟು ಕಷ್ಟದ ದಿನಗಳನ್ನು ಕಳೆಯಬೇಕಾಯ್ತು. ಆದರೆ, ಸತ್ಯಕ್ಕೆ ಕೊನೆಗೂ ಗೆಲುವಿದೆ ಎಂಬ ನಂಬಿಕೆ ಇದೆ. ಈ ಘಟನೆಯಿಂದ ಅವಳು ಹೊರಗೆ ಬರ್ತಾಳೆ ಅಂತಾ ನಂಬಿಕೆ ಇದೆ. ರಾಗಿಣಿ ಸ್ಟ್ರಾಂಗ್ ಇದ್ದಾಳೆ ಎಂದು ಹೇಳಿದರು.

ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಬೆನ್ನುಹುರಿ ಸಮಸ್ಯೆ, ಉಸಿರಾಟದ ಸಮಸ್ಯೆ ಇದೆ. ಡಾಕ್ಟರ್ ಬಳಿ ಈಗಾಗಲೇ ಮಾತಾಡಿದ್ದೇವೆ. ನಾಳೆ ವೈದ್ಯರ ಬಳಿ ಕರೆದುಕೊಂಡು ಹೋಗ್ತೇವೆ. ಮುಂದೇನು ಅಂತಾ ಇನ್ನೂ ಯೋಚನೆ ಮಾಡಿಲ್ಲ. ಬಹಳ ದಿನಗಳ ಬಳಿಕ ಮಗಳನ್ನು ನೋಡುತ್ತಿದ್ದೇವೆ. ಹೀಗಾಗಿ, ಅವಳೊಂದಿಗೆ ಸಮಯ ಕಳೆಯಬೇಕಿದೆ ಎಂದು ಹೇಳಿದರು.

ಸದ್ಯ, ಪರಪ್ಪನ ಅಗ್ರಹಾರ ಜೈಲಿಗೆ ಕೋರ್ಟ್ ಅಮೀನ್ ಆಗಮಿಸಿದ್ದಾರೆ. ನಟಿಯ ಬಿಡುಗಡೆ ಆದೇಶ ಪ್ರತಿ ತಂದಿರುವ ಕೋರ್ಟ್ ಅಮೀನ್ ಅಂತಿಮ ಹಂತದ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಪ್ರಕ್ರಿಯೆ ಬಳಿಕ ನಟಿ ರಾಗಿಣಿ ಸೆಂಟ್ರಲ್‌ ಜೈಲಿನಿಂದ ರಿಲೀಸ್ ಆಗಲಿದ್ದಾರೆ.

ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್​ ಹೆರಕಲ್​