ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ

ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್​ನಿಂದ ಜಾಮೀನು ಮಂಜೂರಾಗಿದೆ.

  • TV9 Web Team
  • Published On - 11:43 AM, 21 Jan 2021
ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ
ನಟಿ ರಾಗಿಣಿ ದ್ವಿವೇದಿ

ಬೆಂಗಳೂರು: ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್​ನಿಂದ ಜಾಮೀನು ಮಂಜೂರಾಗಿದೆ. 140 ದಿನಗಳ ಜೈಲು ವಾಸದಿಂದ ಮಿಂದೆದ್ದು ಬರಲಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಎ2 ಆರೋಪಿಯಾಗಿ ಕಳೆದ 140 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಕೊನೆಗೂ ಇಂದು ಸುಪ್ರೀಂ ಕೋರ್ಟ್​ನಿಂದ ಸ್ಯಾಂಡಲ್​ವುಡ್ ತುಪ್ಪದ ಹುಡುಗಿ ರಿಲೀಫ್ ಸಿಕ್ಕಿದೆ. ಈ ಹಿಂದೆ ರಾಗಿಣಿ ಸಲ್ಲಿಸಿದ ಬೇಲ್​ ಅರ್ಜಿ 2 ಬಾರಿ ರಿಜೆಕ್ಟ್​ ಆಗಿತ್ತು.

ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕಿದ್ದು ಸಂತಸ ತಂದಿದೆ. ಜಾಮೀನು ಸಿಕ್ಕಿರೋ ಬಗ್ಗೆ ಈಗಷ್ಟೇ ಮಾಹಿತಿ ಬಂತು. ಮುಂದಿನ ಕಾನೂನು ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ತೇವೆ ಎಂದು ಟಿವಿ9ಗೆ ನಟಿ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಸಂತಸ ಹಂಚಿಕೊಂಡ್ರು.

ಜಾಮೀನು ಸಿಕ್ಕರೂ ಇಂದು ಬಿಡುಗಡೆ ಡೌಟ್.. ಏಕೆ?
ನಟಿ ರಾಗಿಣಿಗೆ ಇಂದು ಜಾಮೀನು ಸಿಕ್ಕರೂ ಇಂದೇ ಜೈಲಿನಿಂದ ಬಿಡುಗಡೆ ಆಗೋದು ಡೌಟ್. ಏಕೆಂದರೆ ದೆಹಲಿಯಲ್ಲಿರುವ ಸುಪ್ರೀಂಕೋರ್ಟ್ ನಿಂದ NDPS ಕೋರ್ಟ್ ಗೆ ಆರ್ಡರ್ ಕಾಪಿ ಬರಬೇಕು. ಬಳಿಕ ಇಲ್ಲಿ ಜಾಮೀನು ಷರತ್ತು ಪೂರೈಕೆ ಮಾಡಬೇಕಾಗುತ್ತೆ. ಇದೆಲ್ಲವೂ ಇಂದೇ ಪೂರೈಕೆ ಮಾಡಿದರೆ ಇಂದು ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ನಾಳೆ ನಟಿ ರಾಗಿಣಿ ಜೈಲಿನಿಂದ ಬಿಡುಗಡೆಯಾಗ್ತಾರೆ.