‘ಥ್ಯಾಂಕ್ ಗಾಡ್’ ಸಿನಿಮಾ ಚಿತ್ರೀಕರಣಕ್ಕೆ ಕ್ಷಣಗಣನೆ

ಸ್ಲೈಸ್ ಆಫ್ ಲೈಫ್ ಎಂಬ ಹಾಸ್ಯದ ಕಥಾವಸ್ತುವಿಗೆ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅಶೋಕ್ ಠಾಕೇರಿಯಾ, ಸುನೀರ್ ಖೇಟರ್ಪಾಲ್, ದೀಪಕ್ ಮುಕುತ್, ಆನಂದ್ ಪಂಡಿತ್ ಹಾಗೂ ಇಂದ್ರ ಕುಮಾರ್ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಯಶ್ ಶಾ ಸಹನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಥ್ಯಾಂಕ್ ಗಾಡ್’ ಸಿನಿಮಾ ಚಿತ್ರೀಕರಣಕ್ಕೆ ಕ್ಷಣಗಣನೆ
ಅಜಯ್ ದೇವ್‌ಗನ್, ರಕುಲ್ ಪ್ರೀತ್ ಸಿಂಗ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ
sandhya thejappa

|

Jan 07, 2021 | 2:10 PM

ಮುಂಬೈ: ಬಾಲಿವುಡ್ ನಟರಾದ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಕುಲ್ ಪ್ರೀತ್ ಸಿಂಗ್​ರವರು ಇಂದ್ರ ಕುಮಾರ್ ನಿರ್ದೇಶನದ ಥ್ಯಾಂಕ್ ಗಾಡ್ ಚಿತ್ರದಲ್ಲಿ ನಟಿಸಲಿದ್ದು, ಚಿತ್ರೀಕರಣವು ಜನವರಿ 21ರಿಂದ ಆರಂಭವಾಗುತ್ತಿದೆ ಎಂಬ ಮಾಹಿತಿ ಚಿತ್ರ ತಂಡದಿಂದ ತಿಳಿದುಬಂದಿದೆ.

ಸ್ಲೈಸ್ ಆಫ್ ಲೈಫ್ ಎಂಬ ಹಾಸ್ಯ ಕಥಾವಸ್ತುವಿಗೆ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅಶೋಕ್ ಠಾಕೇರಿಯಾ, ಸುನೀರ್ ಖೇಟರ್ಪಾಲ್, ದೀಪಕ್ ಮುಕುತ್, ಆನಂದ್ ಪಂಡಿತ್ ಹಾಗೂ ಇಂದ್ರ ಕುಮಾರ್ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಯಶ್ ಶಾ ಸಹನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಥ್ಯಾಂಕ್ ಗಾಡ್ ಸಿನಿಮಾವು ಹೆಚ್ಚು ಆಸಕ್ತಿದಾಯಕ ಮತ್ತು ಮನರಂಜನೆಯಿಂದ ಕೂಡಿರುವ ಚಿತ್ರವಾಗಿ ಮೂಡಿಬರಲಿದೆ. ಅಭಿಮಾನಿಗಳ ಇಚ್ಚೆಗೆ ತಕ್ಕಂತೆ ನಿರ್ದೇಶನ ಮಾಡುತ್ತಿರುವ ಮಾಸ್ತಿ ಮತ್ತು ಧಮಾಲ್​ನಂತಹ ಹಾಸ್ಯ ಚಲನಚಿತ್ರ ಸರಣಿಗಳಿಗೆ ಹೆಸರುವಾಸಿಯಾದ ಇಂದ್ರ ಕುಮಾರ್​ರವರೊಂದಿಗೆ ಕೆಲಸ ನಿರ್ವಹಿಸುವುದಕ್ಕೆ ನನಗೆ ತುಂಬಾ ಸಂತೋಷವಿದೆ ಎಂದು ಟಿ ಸೀರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ತಿಳಿಸಿದರು.

ಚಿತ್ರೀಕರಣವು ಜನವರಿ 21ರಿಂದ ಆರಂಭವಾಗುತ್ತಿದ್ದು, ಹೆಚ್ಚು ಉತ್ಸುಕನಾಗಿ ಕೆಲಸ ಪ್ರಾರಂಭಿಸಲು ಕಾಯುತ್ತಿದ್ದೇನೆ. ಚಿತ್ರೀಕರಣಕ್ಕೆ ಬೇಕಾಗುವ ಎಲ್ಲಾ ಯೋಜನೆಗಳ ತಯಾರಿ ನಡೆದಿದೆ. ಈ ಸಿನಿಮಾ ಒಂದು ಉತ್ತಮ ಸಂದೇಶ ನೀಡುವ ಜೊತೆಗೆ ಹೆಚ್ಚು ಹಾಸ್ಯಮಯವಾಗಿ ಕೂಡಿರುತ್ತದೆ ಎಂದು ಚಿತ್ರ ನಿರ್ದೇಶಕ ಇಂದ್ರ ಕುಮಾರ್ ತಿಳಿಸಿದರು.

ಹಿರಿಯ ನಟಿ ಜಯಂತಿಗೆ ಹುಟ್ಟುಹಬ್ಬದ ಸಂಭ್ರಮ; ಸಿನಿ ಅಂಗಳದಲ್ಲಿ ಇವರ ಹೆಜ್ಜೆ ಗುರುತು ಅಳಿಸಲಾಗದ್ದು..

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada