ಕಚೇರಿಯಲ್ಲಿ ಹೈಡ್ರಾಮಾ; ಸಿಡಿಪಿಒ ಕುಟುಂಬಸ್ಥರಿಂದ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

ಸಿಡಿಪಿಒ ಜೈಕಿರಣ ಸಂಬಂಧಿಕರು ಹೊರಗುತ್ತಿಗೆ ನೌಕರನ ಮೇಲೆ ದರ್ಪ ತೋರಿಸಿದ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • TV9 Web Team
  • Published On - 15:01 PM, 8 Jan 2021
ಕಚೇರಿಯಲ್ಲಿ ಹೈಡ್ರಾಮಾ; ಸಿಡಿಪಿಒ ಕುಟುಂಬಸ್ಥರಿಂದ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ಸಿಡಿಪಿಒ ಕುಟುಂಬಸ್ಥರ ಹೈಡ್ರಾಮ

ಹಾಸನ: ಜಿಲ್ಲೆಯ ಸಿಡಿಪಿಒ ಕಚೇರಿಯಲ್ಲಿ ಹೈಡ್ರಾಮಾ ನಡೆದಿದೆ. ಸಿಡಿಪಿಒ ಜೈಕಿರಣ ಸಂಬಂಧಿಕರು ಹೊರಗುತ್ತಿಗೆ ನೌಕರನ ಮೇಲೆ ದರ್ಪ ತೋರಿಸಿದ್ದು, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಾಸನದ ಸಿಡಿಪಿಒ (Child Development Project Officer ) ಜೈಕಿರಣ ಅಂಧರಾಗಿರುವ ಕಾರಣಕ್ಕೆ ಅವರಿಗೆ ಸಹಾಯಕರು ಬೇಕೆಂಬ ನೆಪದಲ್ಲಿ ಅವರ ಸಂಬಂಧಿಕರು ಕಚೇರಿಯಲ್ಲಿರುತ್ತಾರೆ. ಈ ವೇಳೆ ಜೈಕಿರಣ ಅವರ ತಮ್ಮ ಶಿವಕುಮಾರ್‌ ನಿನ್ನೆ ಹೊರಗುತ್ತಿಗೆ ನೌಕರ ಶರತ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ ಜೈಕಿರಣ ಅವರ ತಮ್ಮ ಶಿವಕುಮಾರ್, ತಂದೆ, ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಜೆ. ದಿಲೀಪ್ ಮೇಲೂ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರ ಎದುರಲ್ಲೇ ಸಿಡಿಪಿಒ ಜೈಕಿರಣ್ ಹಾಗೂ ಸಂಬಂಧಿಕರು ಹೈಡ್ರಾಮಾ ಮಾಡಿದ್ದಾರೆ. ಕಚೇರಿಯಲ್ಲಿ ಅಧಿಕಾರಿ ಕುಟುಂಬ ಸದಸ್ಯರ ದರ್ಬಾರ್ ಹೆಚ್ಚಾಗಿದೆ. ಸದ್ಯ ಜಿ.ಪಂ. ಕಾರ್ಯದರ್ಶಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮೆರಾ ಡಿವಿಆರ್ ಹಾನಿಗೊಳಿಸದಂತೆ ಕಚೇರಿಗೆ ಬೀಗ ಹಾಕಿದ್ದಾರೆ.

10ರೂಪಾಯಿ ಇದ್ರೆ ನೀವು ಹೈ ಪೈ ಆಗಿ ಕೆಂಪೇಗೌಡ ಏರ್ಪೋರ್ಟ್​ಗೆ ಹೋಗಿ ಒಂದು ರೌಂಡ್ ಹಾಕಿ ಬರಬಹುದು..