ಕೆರೆ ಕೋಡಿ ಒಡೆದು ನೀರು ಪೋಲು, ಭುಗಿಲೆದ್ದ ಸ್ಥಳೀಯರ ಆಕ್ರೋಶ

ಕೆರೆ ಕೋಡಿ ಒಡೆದು ನೀರು ಪೋಲು, ಭುಗಿಲೆದ್ದ ಸ್ಥಳೀಯರ ಆಕ್ರೋಶ

ರಾಯಚೂರು: ಉತ್ತರ ಕರ್ನಾಟಕ್ಕೆ ಈ ಬಾರಿ ವರುಣನ ಕೃಪೆ ಜೋರಾಗಿಯೇ ಇದೆ. ಹೀಗಾಗಿ, ಸದಾ ಬಿಸಿಲಿನಿಂದ ಬೇಯುವ ಪ್ರದೇಶ ಉತ್ತಮ ವರ್ಷಧಾರೆ ಕಾಣುತ್ತಿದೆ. ಆದರೆ, ಮಳೆ ನೀರಿಂದ ತುಂಬಿ ತುಳುಕ ಬೇಕಿದ್ದ ಕೆರೆಯೊಂದರ ಕೋಡಿ ಒಡೆದು ಲಕ್ಷಾಂತರ ಲೀಟರ್​ ನೀರು ಪೋಲಾಗುತ್ತಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಜಿಲ್ಲೆಯ ಅತ್ಕೂರ ಗ್ರಾಮದ ಬಳಿಯಿರುವ ಕೆರೆಯಲ್ಲಿ. ಕಳೆದ ರಾತ್ರಿ ಸಂಭವಿಸಿದ ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಕೆರೆ ತುಂಬಿದೆ. ಆದರೆ, ನೀರಿನ ರಭಸಕ್ಕೆ ಅದರ ಕೋಡಿ ಒಡೆದು ಅಪಾರ […]

KUSHAL V

| Edited By:

Jul 26, 2020 | 1:36 AM

ರಾಯಚೂರು: ಉತ್ತರ ಕರ್ನಾಟಕ್ಕೆ ಈ ಬಾರಿ ವರುಣನ ಕೃಪೆ ಜೋರಾಗಿಯೇ ಇದೆ. ಹೀಗಾಗಿ, ಸದಾ ಬಿಸಿಲಿನಿಂದ ಬೇಯುವ ಪ್ರದೇಶ ಉತ್ತಮ ವರ್ಷಧಾರೆ ಕಾಣುತ್ತಿದೆ. ಆದರೆ, ಮಳೆ ನೀರಿಂದ ತುಂಬಿ ತುಳುಕ ಬೇಕಿದ್ದ ಕೆರೆಯೊಂದರ ಕೋಡಿ ಒಡೆದು ಲಕ್ಷಾಂತರ ಲೀಟರ್​ ನೀರು ಪೋಲಾಗುತ್ತಿದೆ.

ಅಂದ ಹಾಗೆ, ಈ ಘಟನೆ ನಡೆದಿರೋದು ಜಿಲ್ಲೆಯ ಅತ್ಕೂರ ಗ್ರಾಮದ ಬಳಿಯಿರುವ ಕೆರೆಯಲ್ಲಿ. ಕಳೆದ ರಾತ್ರಿ ಸಂಭವಿಸಿದ ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಕೆರೆ ತುಂಬಿದೆ.

ಆದರೆ, ನೀರಿನ ರಭಸಕ್ಕೆ ಅದರ ಕೋಡಿ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಕೆರೆ ಪ್ರದೇಶ ಒತ್ತುವರಿಯಾಗಿದ್ದರಿಂದ ಅದು ವೇಗವಾಗಿ ತುಂಬಿ ಕೋಡಿ ಒಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada