Amazon Offer: ಕಡಿಮೆ ದರದಲ್ಲಿ ಅತ್ಯುತ್ತಮ ಸ್ಮಾರ್ಟ್​ಫೋನ್​, ಇಲ್ಲಿದೆ ಸುವರ್ಣಾವಕಾಶ

Amazon Fab Phones Fest Sale 2021: ಮೊಬೈಲ್​ ಕೊಳ್ಳಲು ಯೋಚಿಸುತ್ತಿರುವವರಿಗೆ ಈ ಆಫರ್​ ಅತ್ಯುತ್ತಮ ಅವಕಾಶವಾಗಲಿದೆ. ಕಡಿಮೆ ದರದಲ್ಲಿ ಉತ್ತಮ ಫೋನ್​ ಕೊಳ್ಳಬಹುದಾಗಿದೆ.

  • TV9 Web Team
  • Published On - 22:36 PM, 23 Feb 2021
Amazon Offer: ಕಡಿಮೆ ದರದಲ್ಲಿ ಅತ್ಯುತ್ತಮ ಸ್ಮಾರ್ಟ್​ಫೋನ್​, ಇಲ್ಲಿದೆ ಸುವರ್ಣಾವಕಾಶ
ಸಂಗ್ರಹ ಚಿತ್ರ

ಆನ್​ಲೈನ್ ಮಾರುಕಟ್ಟೆಗಳು (Online Market) ಪ್ರತಿವರ್ಷವೂ ತರಹೇವಾರಿ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುತ್ತವೆ. ಕಳೆದ ಬಾರಿ ಕೊರೊನಾ ಕಾರಣದಿಂದ ಆನ್​ಲೈನ್​ ಮಾರುಕಟ್ಟೆಗಳಿಗೆ ಹೊಸ ಗ್ರಾಹಕರು ಕೂಡಾ ಸಿಕ್ಕಿದ್ದಾರೆ ಎನ್ನುವ ಲೆಕ್ಕಾಚಾರವೂ ಇದೆ. ಹೀಗಾಗಿ ಈಗ ಕೊರೊನಾ ಹೊಡೆತಕ್ಕೆ ಸಿಕ್ಕು ನಲುಗಿದ್ದ ಜನ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಅಮೆಜಾನ್​ ಭರ್ಜರಿ ಆಫರ್​ ಒಂದನ್ನು ಘೋಷಿಸಿದೆ. ಟಾಪ್ ಸ್ಮಾರ್ಟ್​ಫೋನ್​ಗಳ ಮೇಲೆ ಅಧಿಕ ರಿಯಾಯಿತಿ ನೀಡಿರುವ ಅಮೆಜಾನ್​ ಫ್ಯಾಬ್​ ಫೋನ್ಸ್ ಫೆಸ್ಟ್ 2021ರಲ್ಲಿ (Amazon Fab Phones Fest Sale 2021) ಪ್ರಮುಖ ಬ್ರಾಂಡ್​ಗಳಾದ ಶಿಯೋಮಿ (Xiaomi) ರೆಡ್​ ಮಿ (RedMi), ಸ್ಯಾಮ್​ಸಂಗ್, ಒಪ್ಪೋ ಹಾಗೂ ಮತ್ತಿತರ ಕಂಪೆನಿಗಳ ಫೋನ್​ ಲಭ್ಯವಿರಲಿವೆ.

ಪ್ರಮುಖ ಸ್ಮಾರ್ಟ್​ಫೋನ್​ಗಳ ಮೇಲೆ ಉತ್ತಮ ರಿಯಾಯಿತಿ ನೀಡಿರುವ ಕಾರಣ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಸ್ಪಂದಿಸಬಹುದೆಂಬ ನಿರೀಕ್ಷೆಯಲ್ಲಿ ಅಮೆಜಾನ್ ಸಂಸ್ಥೆ ಇದೆ. ಶಿಯೋಮಿ ಸಂಸ್ಥೆಯ Redmi Note 9, Redmi Note 9 Pro ಹಾಗೂ Redmi 9 ಕಡಿಮೆ ದರದಲ್ಲಿ ಗ್ರಾಹಕರ ಕೈ ಸೇರಲಿವೆ. ಜೊತೆಗೆ, ಒನ್​ಪ್ಲಸ್​ ಸಂಸ್ಥೆಯ OnePlus 8T ಸ್ಮಾರ್ಟ್​ಫೋನ್​ ಮೇಲೆ ಕೂಡ ರಿಯಾಯಿತಿ ಇರಲಿದ್ದು, ₹36,999ಕ್ಕೆ ಲಭ್ಯವಿರಲಿದೆ ಎನ್ನಲಾಗುತ್ತಿದೆ.

ಇನ್ನು ಸ್ಯಾಮ್​ಸಂಗ್​ ಕಂಪೆನಿಯ Samsung Galaxy Note 20 Ultra 5G ಫೋನ್​ ಮೇಲೆ ಶೇ.9ರಷ್ಟು ರಿಯಾಯಿತಿ ಸಿಕ್ಕರೆ, Samsung Galaxy S20 FE ಫೋನ್​ಗೆ ಶೇ.38ರಷ್ಟು ಭರ್ಜರಿ ರಿಯಾಯಿತಿ ಇರಲಿದೆ. ಜೊತೆಗೆ ಹೊಸದಾಗಿ ಮಾರುಕಟ್ಟೆಗೆ ಬಂದ Samsung Galaxy S21 Plus 5G ಸ್ಮಾರ್ಟ್​ಫೋನ್​ ಮೇಲೆ ಸಹ ಶೇ 18ರಷ್ಟು ದರ ಕಡಿತ ಇರಲಿದೆ ಎಂದು ಅಮೆಜಾನ್ ತಿಳಿಸಿದೆ.

ಅಂತೆಯೇ, ಇವೆಲ್ಲದರೊಟ್ಟಿಗೆ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಯೆ ಮೂಡಿಸಿರುವ ಒಪ್ಪೋ ಸಂಸ್ಥೆಯ Oppo A31, Oppo F17 Pro ಕೂಡ ಗಮನ ಸೆಳೆಯುತ್ತಿವೆ. ವಿಶೇಷವೆಂದರೆ ಈ ಆಫರ್​ ಅಡಿಯಲ್ಲಿ Apple iPhone 12 Mini ಸಹ ಇರಲಿದೆ. ಸದ್ಯ ಮೊಬೈಲ್​ ಕೊಳ್ಳಲು ಯೋಚಿಸುತ್ತಿರುವವರಿಗೆ ಈ ಆಫರ್​ ಅತ್ಯುತ್ತಮ ಅವಕಾಶವಾಗಲಿದ್ದು ಕಡಿಮೆ ದರದಲ್ಲಿ ಉತ್ತಮ ಫೋನ್​ ಕೊಳ್ಳಬಹುದಾಗಿದೆ. ಫೆಬ್ರವರಿ 21ರಿಂದ ಆರಂಭವಾಗಿರುವ ಫೆಬ್ರವರಿ 25ರ ತನಕ ಇರಲಿದೆ. ಹೆಚ್ಚಿನ ವಿವರಗಳು ಅಮೆಜಾನ್​ ಆ್ಯಪ್​ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಅಮೆಜಾನ್​ ಸಂಸ್ಥೆಯಿಂದ ಚೀನಾಗೆ ಶಾಕ್​: ಭಾರತದಲ್ಲೇ ಡಿವೈಸ್​ ಉತ್ಪಾದನೆ!