ಬ್ಯಾನ್ ಆದರೂ ಹೊಸ ದಾಖಲೆ ಬರೆದ ಚೀನಾ ಮೂಲದ ಟಿಕ್​ಟಾಕ್​

ಭಾರತ, ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಬ್ಯಾನ್​ ಆಗಿರುವುದು ಇದಕ್ಕೆ ದೊಡ್ಡ ಹೊಡೆತ ನೀಡಿದೆ. ಆದಾಗ್ಯೂ ಟಿಕ್​ಟಾಕ್​ ದೊಡ್ಡ ಮಟ್ಟದಲ್ಲಿ ಏಳ್ಗೆ ಕಾಣುತ್ತಿದೆ.

ಬ್ಯಾನ್ ಆದರೂ ಹೊಸ ದಾಖಲೆ ಬರೆದ ಚೀನಾ ಮೂಲದ ಟಿಕ್​ಟಾಕ್​
ಟಿಕ್​ಟಾಕ್
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 13, 2020 | 4:15 PM

ಭಾರತ, ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಈಗಾಗಲೇ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಆಗಿದೆ. ಆದಾಗ್ಯೂ, ಟಿಕ್​ಟಾಕ್​ ಈ ಬಾರಿ ಹೊಸ ದಾಖಲೆ ಬರೆದಿದೆ. 2020ರಲ್ಲಿ ಅತಿ ಹೆಚ್ಚು ಡೌನ್​ಲೋಡ್​ ಕಂಡ ಆ್ಯಪ್​ಗಳ ಸಾಲಿನಲ್ಲಿ ಟಿಕ್​ಟಾಕ್​ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಸೋಷಿಯಲ್​ ಮೀಡಿಯಾ ದಿಗ್ಗಜ ಫೇಸ್​​ಬುಕ್​​ಅನ್ನು ಕೂಡ ಹಿಂದಿಕ್ಕಿದೆ.

ಭಾರತ, ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಬ್ಯಾನ್ ಟಿಕ್​ಟಾಕ್​ ಆಗಿರುವುದು ಇದಕ್ಕೆ ದೊಡ್ಡ ಹೊಡೆತ ನೀಡಿದೆ. ಆದಾಗ್ಯೂ ಟಿಕ್​ಟಾಕ್​ ದೊಡ್ಡ ಮಟ್ಟದಲ್ಲಿ ಏಳ್ಗೆ ಕಾಣುತ್ತಿದೆ. ಮುಂದಿನ ವರ್ಷದ ವೇಳೆಗೆ ಟಿಕ್​​ಟಾಕ್​ 100 ಕೋಟಿ ಆ್ಯಕ್ಟಿವ್​ ಬಳಕೆದಾರರನ್ನು ಹೊಂದುವ ಸಾಧ್ಯತೆ ಇದೆ.

ಆ್ಯಪ್​ ಆ್ಯನ್ನಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ. ಕೊರೊನಾ ವೈರಸ್​ ಬಂದಿದ್ದರಿಂದ ಎಲ್ಲರೂ ಮನೆಯಲ್ಲೇ ಇದ್ದರು. ಹೀಗಾಗಿ, ಮೊಬೈಲ್​ ಬಳಕೆ ಹೆಚ್ಚಿದೆ. ಇದರಿಂದ ಸಹಜವಾಗಿಯೇ, ಟಿಕ್​ಟಾಕ್​, ಫೇಸ್​​ಬುಕ್​ ಬಳಕೆ ಹೆಚ್ಚಾಗಿದೆ ಎಂದು ಆ್ಯಪ್​ ಆ್ಯನ್ನಿ ವರದಿ ಹೇಳಿದೆ.

ಅತಿ ಹೆಚ್ಚು ಡೌನ್​ಲೋಡ್ ಆದ ಆ್ಯಪ್​ಗಳಲ್ಲಿ ಮೊದಲು ಟಿಕ್​ಟಾಕ್​, ಎರಡನೇ ಫೇಸ್​ಬುಕ್​ ಇದೆ. ವಾಟ್ಸಾಪ್​ (3), ಜೂಮ್​ (4), ಇನ್​ಸ್ಟಾಗ್ರಾಂ (5), ಫೇಸ್​ಬುಕ್​ ಮೆಸೆಂಜರ್ (6) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಆ್ಯಕ್ಟಿವ್​ ಬಳಕೆದಾರ ವಿಚಾರಕ್ಕೆ ಬರೋದಾದರೆ ಫೇಸ್​ಬುಕ್​ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ವಾಟ್ಸಾಪ್​ ಎರಡು ಹಾಗೂ ಫೇಸ್​ಬುಕ್​ ಮೆಸೆಂಜರ್​ ಮೂರನೇ ಸ್ಥಾನದಲ್ಲಿದೆ.

ಗಡಿಯಲ್ಲಿ ಡ್ರ್ಯಾಗನ್ ದೇಶದ ಉಪಟಳ ಹೆಚ್ಚಿದ ನಂತರದಲ್ಲಿ ಭಾರತ ಚೀನಾದ ಆ್ಯಪ್​​ಗಳನ್ನು ಬ್ಯಾನ್​ ಮಾಡಿತ್ತು. ಈ ವೇಳೆ ಟಿಕ್​ಟಾಕ್​ ಸೇರಿ ಸಾಕಷ್ಟು ಆ್ಯಪ್​ಗಳ ಮೇಲೆ ನಿಷೇಧ ಬಿದ್ದಿತ್ತು. ನಂತರ ಅಮೆರಿಕ ಕೂಡ ಇದೇ ಮಾದರಿಯ ನಿರ್ಧಾರವನ್ನು ಕೈಗೊಂಡಿತ್ತು.

ಫೇಸ್​ಬುಕ್​ ವಿರುದ್ಧ ಅಮೆರಿಕ​ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada