ದಕ್ಷಿಣ ಭಾರತದ ಪ್ರಮುಖ ಪುಷ್ಕರಗಳಲ್ಲಿ ಒಂದಾಗಿರುವ ತುಂಗಭದ್ರಾ ಪುಷ್ಕರ ನಾಳೆಯಿಂದ ಆರಂಭವಾಗಲಿದೆ. ಆದರೆ ಕೊರೊನಾ ಸೋಂಕು ಈಗಾಗಲೇ ಉಂಟುಮಾಡಿರುವ ಹಿನ್ನೆಲೆ ಮತ್ತು ಅದು ಇನ್ನಷ್ಟು ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ತುಂಗಭದ್ರ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.
ಮಂತ್ರಾಲಯದ ಮೂಲಕ ಹಾದುಹೋಗುವ ತುಂಗಭದ್ರ ನದಿಯಲ್ಲಿ ಭಕ್ತಾದಿಗಳು ಪುಣ್ಯಸ್ನಾನ ಮಾಡುವುದನ್ನು ಕರ್ನೂಲ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಆದರೆ, ನದಿ ನೀರಿನ ಪ್ರೋಕ್ಷಣೆ ಮತ್ತು ನದಿ ತಟದಲ್ಲಿ ಪಿಂಡ ಪ್ರದಾನಕ್ಕೆ ಮಾತ್ರ ಅವಕಾಶವನ್ನು ಜಿಲ್ಲಾಡಳಿತ ನೀಡಿದೆ. ಪೂಜೆ ಸಲ್ಲಿಸುವ ಸಮಯಕ್ಕೂ ನಿರ್ಬಂಧ ಹೇರಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ಎಚ್ಚರಿಕೆ ವಹಿಸಲು ಮಂತ್ರಾಲಯದಲ್ಲಿರುವ ಶ್ರೀಗಳ ಮಠಕ್ಕೆ ಸೂಚನೆಯನ್ನು ನೀಡಲಾಗಿದೆ.
ನದಿ ತಟದಲ್ಲಿರುವ ಸ್ನಾನ ಘಟ್ಟದಲ್ಲಿ ಬ್ಯಾರಿಕೇಡ್ ಹಾಕಿ ಜನ ನದಿಗೆ ಇಳಿಯದಂತೆ ವ್ಯವಸ್ಥೆ ಮಾಡಲಾಗಿದೆ.