ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಧೋನಿ ನಿವೃತ್ತಿಗೆ ಅಮಿತ್‌ ಶಾ, ಸಚಿನ್‌ ಏನಂದ್ರು ಗೊತ್ತಾ?

  • TV9 Web Team
  • Published On - 23:09 PM, 15 Aug 2020
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಧೋನಿ ನಿವೃತ್ತಿಗೆ ಅಮಿತ್‌ ಶಾ, ಸಚಿನ್‌ ಏನಂದ್ರು ಗೊತ್ತಾ?

ಭಾರತದ ಖ್ಯಾತ ಕ್ರಿಕೆಟ್‌ರ್‌ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸುತ್ತಿದ್ದಂತೆ, ಹಾಲಿ ಮತ್ತು ಮಾಜಿ ಕ್ರಿಕೆಟರ್ಸ್‌ ಹಾಗೂ ರಾಜಕೀಯ ನಾಯಕರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.

ಕ್ರಿಕೆಟ್‌ ದಂತಕಥೆ ಸಚಿನ್‌ ತಮ್ಮ ಸಂದೇಶದಲ್ಲಿ ಧೋನಿ ಜೊತೆಗಿನ ತಮ್ಮ 2011ರ ವಿಶ್ವಕಪ್‌ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಇದೇ ರೀತಿ ಹಾಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೋಹ್ಲಿ ಕೂಡಾ ಧೋನಿ ನಿವೃತ್ತಿ ಕುರಿತು ತಮ್ಮ ಸಾಮಾಜಿಕ ತಾಣದ ಮೂಲಕ ದೋನಿ ಕೊಡುಗೆಯನ್ನು ಸ್ಮರಿಸಿದ್ದಾರೆ.

ಇಷ್ಟೇ ಅಲ್ಲ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡಾ ಧೋನಿ ರಿಟೈರ್‌ಮೆಂಟ್‌ಗೆ ಪ್ರತಿಕ್ರಿಯೆ ನೀಡಿ ಧೋನಿಯ ಸಾಧನೆಯನ್ನ ಕೊಂಡಾಡಿದ್ದಾರೆ.