ಬೆಂಗಳೂರು: ಭಕ್ತಿಗೆ ಬೆಲೆ ಕಟ್ಟಲಾಗುವುದಿಲ್ಲ. ಹಾಗೇನೆ ಅದನ್ನು ವ್ಯಕ್ತಪಡಿಸೋಕೆ ಇಂಥದ್ದೇ ಅಂತಾ ನಿರ್ಧಿಷ್ಟವಾದ ಮಾರ್ಗವಿಲ್ಲ. ಭಕ್ತಿಗೆ ಹಲವು ಮಾರ್ಗ. ಈ ಮಾತು ಯಾಕೆ ಹೇಳಬೇಕಾಯಿತೆಂದ್ರೆ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ರೆ, ಇತ್ತ ಬೆಂಗಳೂರಿನಲ್ಲಿ ರಾಮಭಕ್ತರೊಬ್ಬರು ಶ್ರೀರಾಮನ ಚಿತ್ರವನ್ನು ಟೈಪ್ರೈಟರ್ನಲ್ಲಿ ಬಿಡಿಸಿದ್ದಾರೆ.
ಹೌದು ಬೆಂಗಳೂರಿನ ಎ ಸಿ ಗುರುಮೂರ್ತಿ ಎಂಬ ರಾಮಭಕ್ತರೊಬ್ಬರು, ತಮ್ಮ ಟೈಪ್ರೈಟರ್ನಲ್ಲಿ ಶ್ರೀರಾಮಚಂದ್ರನ ಚಿತ್ರವನ್ನು ಬಿಡಿಸಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರವನ್ನು ಶ್ರೀರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. ಇದು ಶ್ರೀರಾಮನಿಗೆ ನನ್ನ ಪುಟ್ಟ ಕಾಣಿಕೆ ಅಂತಾರೆ ಗುರುಮೂರ್ತಿ.
ಇವತ್ತು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಇದರೊಂದಿಗೆ ವಿಶ್ವ ಭಾರತದ ಸಂಸ್ಕೃತಿ ಮತ್ತು ಧರ್ಮವನ್ನು ಗುರುತಿಸುತ್ತೆ ಅಂತಾ ಭರವಸೆ ವ್ಯಕ್ತಪಡಿಸಿದ್ದಾರೆ ಗುರುಮೂರ್ತಿ. ಹಾಗೇನೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನೆರವೇರಿದ ದಿನವೇ ತಮ್ಮ ವಿಶೇಷ ಕಲೆಯನ್ನು ಪ್ರದರ್ಶಿಸಿ ರಾಮಮಂದಿರಕ್ಕೆ ಅರ್ಪಿಸಿರೋದು ವಿಶೇಷವಾಗಿದೆ.
Karnataka: AC Gurumurthy, an artist from Bengaluru creates a portrait of Lord Ram using a manual typewriter. He says,"I dedicate this portrait to Ram Temple. I hope world recognises our culture & religion."
Foundation stone laying event of #RamMandir was held in Ayodhya today. pic.twitter.com/MRPLtKolLz
— ANI (@ANI) August 5, 2020