ಹುಣಸೂರು ತಾಲೂಕಿನ ಜಮೀನಿನಲ್ಲಿ ಕೆಲಸ ಮಾಡುವಾಗ JCB ಗೆ ಗುದ್ದಿದ ಕಾಡಾನೆ!

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಲು ಹೋಗಿ ಜೆಸಿಬಿಗೆ ಆನೆ ಗುದ್ದಿದೆ. ಈ ಘಟನೆ ಹುಣಸೂರು ತಾಲೂಕಿನ ಮುದಗನೂರಿನಲ್ಲಿ ನಡೆದಿದೆ.

  • TV9 Web Team
  • Published On - 17:47 PM, 17 Feb 2021
ಹುಣಸೂರು ತಾಲೂಕಿನ ಜಮೀನಿನಲ್ಲಿ ಕೆಲಸ ಮಾಡುವಾಗ JCB ಗೆ ಗುದ್ದಿದ ಕಾಡಾನೆ!
ಆನೆ ದಾಳಿ

ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಲು ಹೋಗಿ ಜೆಸಿಬಿಗೆ ಆನೆ ಗುದ್ದಿದೆ. ಈ ಘಟನೆ ಹುಣಸೂರು ತಾಲೂಕಿನ ಮುದಗನೂರಿನಲ್ಲಿ ನಡೆದಿದೆ. ನಂತರ ಅರಣ್ಯ ಇಲಾಖೆ ಜೀಪ್​ ಸೈರನ್ ಶಬ್ದ ಕೇಳಿ ಕಾಡಾನೆ ವಾಪಸ್​ ಹೋಗಿದೆ.

ಮುದಗನೂರಿನ ನಾಗೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಡಾನೆಯೊಂದು ಜಮೀನಿಗೆ ನುಗ್ಗಿದೆ. ಕಾರ್ಮಿಕರಿಗೆ ತೊಂದರೆ ಕೊಡಲು ಯತ್ನಿಸಿದೆ. ಗಾಬರಿಗೊಂಡ ಕೆಲಸಗಾರರು ಜೆಸಿಬಿ ಮೇಲೆ ಹತ್ತಿ ಕುಳಿತಿದ್ದಾರೆ. ರೊಚ್ಚಿಗೆದ್ದ ಆನೆ ಕಾರ್ಮಿಕರ ಮೇಲೆ ದಾಳಿ ನಡೆಸಲು ಹೋಗಿ ಜೆಸಿಬಿಗೆ ಗುದ್ದಿದೆ.

elephant attack in shimoga

ಆನೆ ದಾಳಿ

ಇದನ್ನೂ ಓದಿ: ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?

ಗಾಬರಿಗೊಂಡ ಕಾರ್ಮಿಕರು ಕಿರುಚಲು ಪ್ರಾರಂಭಿದರು. ಇದನ್ನು ನೋಡಿದ ಆನೆ ಮತ್ತೂ ರೊಚ್ಚಿಗೆದ್ದು, ಕಾರ್ಮಿಕರನ್ನು ಭಯಗೊಳಿಸಿದೆ. ಅದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಅರಣ್ಯ ಇಲಾಖೆಯ ಜೀಪ್​ ಸೈರನ್​ ಶಬ್ದ ಕೇಳಿದಾಕ್ಷಣ ಆನೆ ನಾಗಪುರ ಹಾಡಿಯ ಮೂಲಕ ಅರಣ್ಯದೊಳಕ್ಕೆ  ವಾಪಸಾಗಿದೆ.