ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

  • TV9 Web Team
  • Published On - 15:18 PM, 29 Jun 2020
ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ.

Fruit Bomb..

ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. ಅತೀವ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿರುವ ಗೋವು ಈಗ ಸಾವು ಬದುಕಿನ‌ ಮಧ್ಯೆ ಹೋರಾಡುತ್ತಿದೆ. ಈ ಘಟನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು ದುಷ್ಕರ್ಮಿಗಳ‌ ಮೇಲೆ‌ ಕ್ರಮಕ್ಕೆ ಆಗ್ರಹಿಸಿದ್ದಾರೆ.