BJP ಜೊತೆ JDS ವಿಲೀನ?.. ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂದ HDK

ಬಿಜೆಪಿ ಜೊತೆ ವಿಲೀನವಾಗಲು ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಅಚ್ಚರಿ ಮೂಡಿಸುವಂಥ ಹೇಳಿಕೆ ನೀಡಿದ್ದಾರೆ.

BJP ಜೊತೆ JDS ವಿಲೀನ?.. ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂದ HDK
ಮಾಜಿ ಸಿಎಂ H.D.ಕುಮಾರಸ್ವಾಮಿ
Rajesh Duggumane

| Edited By: KUSHAL V

Dec 12, 2020 | 3:39 PM

ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದ ನಂತರ ಜೆಡಿಎಸ್​ ಹಾಗೂ ಕಾಂಗ್ರೆಸ್​ ಪರಸ್ಪರ ಕೆಸರೆರಚಾಟ ನಡೆಸುತ್ತಾ ಬಂದಿವೆ. ಇದರ ಫಲವಾಗಿ ಮಾಜಿ ಮುಖ್ಯಮಂತ್ರಿ H.D. ಕುಮಾರಸ್ವಾಮಿ ಇತ್ತೀಚೆಗೆ ಬಿಜೆಪಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಈ ಮಧ್ಯೆ, ಬಿಜೆಪಿ ಜೊತೆ ವಿಲೀನವಾಗಲು ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಅಚ್ಚರಿ ಮೂಡಿಸುವಂಥ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದ್ದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷ ಬಿಜೆಪಿಯ B ಟೀಂ ಎಂದು ಕರೆದವರು ನನ್ನ ಮನೆಗೆ ಬಂದರು. ಕೊನೆಗೆ ನಮ್ಮ ಜೊತೆಯೇ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಮುಂದೆ ರಾಜ್ಯಕ್ಕೆ HDK ಅನಿವಾರ್ಯತೆ ಬರಬಹುದು ಎಂದು ಹೇಳಿದರು.

ಬಿಜೆಪಿ ಜೊತೆ ಜೆಡಿಎಸ್​ ವಿಲೀನವಾಗಲಿದೆಯೇ ಎನ್ನುವ ಪ್ರಶ್ನೆಗೆ ನಾನು ನಮ್ಮ ಪಕ್ಷವನ್ನು ಎಂದಿಗೂ ವಿಲೀನ ಮಾಡುವುದಿಲ್ಲ. 2021ರಲ್ಲಿ ನಾನು ಸಿಎಂ ಆಗುತ್ತೇನೆಂದು ಭವಿಷ್ಯ ಕೂಡ ಹೇಳುವುದಿಲ್ಲ. ರಾಜಕಾರಣದಲ್ಲಿ ಬದಲಾವಣೆ ‌ಆಗುತ್ತಲೇ ಇರುತ್ತದೆ. ಬಿಜೆಪಿ ಸರ್ಕಾರಕ್ಕೆ ಸಂಖ್ಯಾಬಲ ಅಗತ್ಯದಷ್ಟಿದೆ. ಸದ್ಯಕ್ಕಂತೂ ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

‘ಬಿಜೆಪಿಗೆ ಗೋಮಾತೆ ಹೆಸರಲ್ಲಿ ಮತ ಪಡೆಯಬೇಕಿದೆ’ ಗೋಹತ್ಯೆ ನಿಷೇಧ ಬಿಲ್​​ಗೆ ಜೆಡಿಎಸ್ ಬೆಂಬಲಿಸಲ್ಲ ಎಂಬ ಕಾರಣಕ್ಕೆ ಅದು ಅಧಿವೇಶನದಲ್ಲಿ ಮಂಡನೆ ಆಗಲಿಲ್ಲ. 2010ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು. ನಾವು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಕಾಯ್ದೆ ವಿರೋಧಿಸಿದ್ದೆವು. ದೇವೇಗೌಡರು, ನಾನು ಈ ಕಾಯ್ದೆ ವಿರುದ್ಧವಾಗಿದ್ದೇವೆ. ಬಿಜೆಪಿಗೆ ಗೋಮಾತೆ ಹೆಸರಲ್ಲಿ ಮತ ಪಡೆಯಬೇಕಿದೆ ಎಂದು HDK ಆರೋಪಿಸಿದರು.

‘ಬಿಜೆಪಿ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲ’ ಇತ್ತೀಚೆಗೆ ಬಿಜೆಪಿ ಪರವಾಗಿ ಕುಮಾರಸ್ವಾಮಿ ಒಲವು ತೋರುತ್ತಿದ್ದಾರೆ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ HDK  ಬಿಜೆಪಿ ಬಗ್ಗೆ ನಮಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣ ಕೇವಲ ವಿರೋಧ ಮಾಡುವುದಲ್ಲ. ನಾಡಿನ ಬೆಳವಣಿಗೆಗೆ ಸಹಕಾರ ನೀಡುವುದು ಕೂಡ ವಿರೋಧ ಪಕ್ಷದ ಕೆಲಸ ಎಂದರು. ಈ ಮೂಲಕ ಕೆಲ ವಿಚಾರಗಳಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದೇಕೆ ಎಂಬ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯಗೆ ಎಚ್ಚರಿಕೆ ಸಿದ್ದರಾಮಯ್ಯನವರೇ  ಪದೇಪದೆ ನನ್ನ ಬಗ್ಗೆ ಮಾತನಾಡಬೇಡಿ. ಪದೇಪದೆ ಮಾತನಾಡಿ ಮುಖಭಂಗ ಅನುಭವಿಸಬೇಡಿ. ನೀವು ದುಡ್ಡು ಲೂಟಿ‌‌ ಮಾಡಿ ಚುನಾವಣೆ ಗೆಲ್ಲೋದನ್ನ ಕಲಿತಿದ್ದೀರಿ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ದೊಡ್ಡಗೌಡ್ರು ಕೃಷಿ ಮಾಡಿದ್ದಾರೆ, ಸಗಣಿ ಬಾಚಿದ್ದಾರೆ.. ನಿನಗೇನು ಗೊತ್ತು ಅವರ ಇತಿಹಾಸ? -HDK ಏಕವಚನದಲ್ಲಿ ವಾಗ್ದಾಳಿ

HD ಕುಮಾರಸ್ವಾಮಿಗೆ ನಾಚಿಕೆಯಾಗಬೇಕು -ಸಿದ್ದರಾಮಯ್ಯ ಕೆಂಡಾಮಂಡಲ

Follow us on

Related Stories

Most Read Stories

Click on your DTH Provider to Add TV9 Kannada