ಮಣಿಕರ್ಣಿಕಾ ಸೀಕ್ವೆಲ್ ಘೋಷಣೆಯ ಬೆನ್ನಲ್ಲೇ ಕಥೆ ಕದ್ದ ಆರೋಪ

ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್ ಪುಸ್ತಕದ ಲೇಖಕ ಆಶೀಶ್ ಕೌಲ್ ತಮ್ಮ ಪುಸ್ತಕವನ್ನು ಅಧರಿಸಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 2018ರಲ್ಲಿ ರೂಪಾ ಪಬ್ಲಿಕೇಶನ್ ಈ ಪುಸ್ತಕ ಪ್ರಕಟಿಸಿತ್ತು. ಒಂದು ಕಾಲು ಪೋಲಿಯೊಗೆ ತುತ್ತಾಗಿದ್ದರೂ ತುರ್ಕಿಶ್ ರಾಜ ಮಹ್ಮೂದ್ ಘಜ್ನವಿಯನ್ನು ಎರಡು ಬಾರಿ ಕಾಶ್ಮೀರದ ರಾಣಿ ಸೋಲಿಸಿದ್ದರು.

  • TV9 Web Team
  • Published On - 19:27 PM, 16 Jan 2021
ಮಣಿಕರ್ಣಿಕಾ ಸೀಕ್ವೆಲ್ ಘೋಷಣೆಯ ಬೆನ್ನಲ್ಲೇ ಕಥೆ ಕದ್ದ ಆರೋಪ
ಕಂಗನಾ ರನೌತ್

ಮುಂಬೈ: 2019 ರಲ್ಲಿ ತೆರೆಕಂಡಿದ್ದ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಸಿನಿಮಾದ ಯಶದ ಹುಮ್ಮಸ್ಸಿನಲ್ಲಿ ಅದೇ ಸರಣಿಯ ಹೊಸ ಚಿತ್ರ ಘೋಷಿಸಿದ್ದಾರೆ ಕಂಗನಾ ರಣಾವತ್​. ಕಾಶ್ಮೀರದ ವೀರ ರಾಣಿಯ ಕತೆಯುಳ್ಳ ‘ಮಣಿಕರ್ಣಿಕಾ ರಿಟರ್ನ್ಸ್​: ದಿ ಲೆಜೆಂಡ್ ಆಫ್ ದಿಡ್ಡಾ’ ಈ ಸರಣಿಯ ಇನ್ನೊಂದು ಸಿನಿಮಾ. ಆದರೆ, ಈ ಸಿನಿಮಾ ಘೋಷಣೆಯ ಬೆನ್ನಲ್ಲೇ ಕಂಗನಾ ರಣಾವತ್ ಮೇಲೆ ಕಥೆ ಕದ್ದ ಆರೋಪ ಕೇಳಿಬಂದಿದೆ.

ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್ ಪುಸ್ತಕದ ಲೇಖಕ ಆಶೀಶ್ ಕೌಲ್ ತಮ್ಮ ಪುಸ್ತಕವನ್ನು ಅಧರಿಸಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 2018ರಲ್ಲಿ ರೂಪಾ ಪಬ್ಲಿಕೇಶನ್ ಈ ಪುಸ್ತಕ ಪ್ರಕಟಿಸಿತ್ತು. ಒಂದು ಕಾಲು ಪೋಲಿಯೊಗೆ ತುತ್ತಾಗಿದ್ದರೂ ತುರ್ಕಿಶ್ ರಾಜ ಮಹ್ಮೂದ್ ಘಜ್ನವಿಯನ್ನು ಎರಡು ಬಾರಿ ಕಾಶ್ಮೀರದ ರಾಣಿ ಸೋಲಿಸಿದ್ದರು.

2020ರ ಸೆಪ್ಟೆಂಬರ್​ನಲ್ಲಿಯೇ ಕಂಗನಾ ರನೌತ್​ಗೆ ತಮ್ಮ ಪುಸ್ತಕದ ಹಿಂದಿ ಆವೃತ್ತಿ ಕಳಿಸಿದ್ದಾಗಿ ಆಶಿಶ್ ಕೌಲ್ ಹೇಳಿದ್ದಾರೆ. ಆದರೆ, ಈವರೆಗೆ ಕಂಗನಾ ರನೌತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಸಂಪರ್ಕಿಸಿದರೂ ನನ್ನ ಆರೋಪವನ್ನು ತಳ್ಳಿಹಾಕಿದ್ದಾರೆ. ಚಲನಚಿತ್ರದ ಘೋಷಣೆಯಾದ ನಂತ ಈ ಸಿನಿಮಾ ನನ್ನ ಪುಸ್ತಕ ಆಧರಿಸಿ ನಿರ್ಮಿಸಲಾಗುತ್ತಿದೆ ಎಂಬುದು ಅರಿವಾಯಿತು ಎಂದು ಆಶಿಶ್ ದೂರಿದ್ದಾರೆ.

ಚಿತ್ರತಂಡ ಮಣಿಕರ್ಣಿಕಾ ರಿಟರ್ನ್ಸ್​: ದಿ ಲೆಜೆಂಡ್ ಆಫ್ ದಿಡ್ಡಾ ಸಿನಿಮಾವನ್ನು 2022ರಲ್ಲಿ ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ.

ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್, ಶಶಿ ತರೂರ್ ಯೋಚನೆಗೆ ಕಂಗನಾ ವಿರೋಧ