ರಿಮೋಟ್ ಸೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಸಾವು

ರಿಮೋಟ್ ಸೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಸಾವು

ಮೈಸೂರು: ರಿಮೋಟ್‌ಗೆ ಬಳಸುವ ಸೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ.

ಆಗಸ್ಟ್ 31 ರಂದು ಮನೆಯಲ್ಲಿ ಆಟವಾಡುವ ವೇಳೆ ಒಂದೂವರೆ ವರ್ಷದ ಹೇಮಂತ್ ಸ್ಕಂದಮಣಿ ರಾಜು ಸೆಲ್ ನುಂಗಿದ್ದ. ತಕ್ಷಣವೇ ಮಗುವನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click on your DTH Provider to Add TV9 Kannada