ಬೆಂಗಳೂರಿಗರ ಮೇಲೆ ತೆರಿಗೆ ಬರೆ; ಕಾಂಗ್ರೆಸ್ ನಾಯಕರಿಂದ ಬಿಬಿಎಂಪಿ ಚಲೋ

ಸರ್ಕಾರ ಮತ್ತು ಬಿಬಿಎಂಪಿ ಜನರ ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾಗರಿಕರ ಮೇಲೆ ಅನೇಕ ತೆರಿಗೆ ಹೊರೆಯನ್ನು ವಿಧಿಸುತ್ತಿರುವುದನ್ನು ಖಂಡಿಸಿ ಬಿಬಿಎಂಪಿ ಮುತ್ತಿಗೆ ಹಾಕಲು ಕಾಂಗ್ರೆಸ್ ಮುಂದಾಗಿದೆ.

ಬೆಂಗಳೂರಿಗರ ಮೇಲೆ ತೆರಿಗೆ ಬರೆ; ಕಾಂಗ್ರೆಸ್ ನಾಯಕರಿಂದ ಬಿಬಿಎಂಪಿ ಚಲೋ
ಕಾಂಗ್ರೆಸ್ ನಾಯಕರಿಂದ ಬಿಬಿಎಂಪಿ ಚಲೋ.. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್
Ayesha Banu

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 04, 2021 | 1:55 PM

ಬೆಂಗಳೂರು: ಸರ್ಕಾರ ಮತ್ತು ಬಿಬಿಎಂಪಿ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್, ತೆರಿಗೆ ಹೆಚ್ಚಳ ಖಂಡಿಸಿ ಬಿಬಿಎಂಪಿ ಚಲೋ ಚಳವಳಿ ಹಮ್ಮಿಕೊಂಡಿದೆ. ಸಂಕಷ್ಟದ ಕಾಲದಲ್ಲಿ ಜನರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ ಎಂದು ದೂರಿರುವ ಕಾಂಗ್ರೆಸ್​ ನಾಯಕರು ಮೈಸೂರು ಬ್ಯಾಂಕ್ ವೃತ್ತದಿಂದ ಬಿಬಿಎಂಪಿ ಚಲೋ ಆರಂಭಿಸಲು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಸದರು, ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್​ ಸಮಿತಿ ಬಿಬಿಎಂಪಿ ಆಡಳಿತಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಿವೆ. ಬಿಬಿಎಂಪಿ ಚಲೋ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.

ನೂಕಾಟದಲ್ಲಿ ಕೆಳಗೆ ಬಿದ್ದ ಸೌಮ್ಯಾ ರೆಡ್ಡಿ: ಇನ್ನು ಕಾಂಗ್ರೆಸ್‌ ಕಾರ್ಯಕರ್ತರಿಂದ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಬಿಬಿಎಂಪಿ ಕಚೇರಿ ಭದ್ರತಾ ಸಿಬ್ಬಂದಿ ಗೇಟ್‌ಗೆ ಬೀಗ ಹಾಕಿದ್ದಾರೆ. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಗೇಟ್ ಹತ್ತಿ ಒಳಗೆ ನುಗ್ಗಿದ್ದಾರೆ. ನೂಕಾಟದಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೆಳಗೆ ಬಿದ್ದಿದ್ದಾರೆ.

ಕಾಂಗ್ರೆಸ್ ನಿಂದ ಹಕ್ಕೊತ್ತಾಯಗಳು -ಹೈದರಾಬಾದ್ ಪಾಲಿಕೆ ಮಾದರಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ -ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ವಿಧಿಸುವ ಶುಲ್ಕ ಕಡಿತ -ಕಸದ ಮೇಲೆ ವಿಧಿಸಿರುವ ಸೆಸ್ 200 ರೂ. ರದ್ದು ಮಾಡಬೇಕು -ರಸ್ತೆ ಸಾರಿಗೆಗೆ ವಿಧಿಸಿರುವ ಶೇ.2ರಷ್ಟು ತೆರಿಗೆ ರದ್ದು ಮಾಡಬೇಕು -3 ಸಾವಿರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು -ಇಂದಿರಾ ಕ್ಯಾಂಟೀನ್​ ಮುಂದುವರಿಸಬೇಕು -ಸಾರ್ವಜನಿಕರ ಅಗತ್ಯಕ್ಕೆ ಬೇಕಾದಷ್ಟು ಶೌಚಾಲಯ ನಿರ್ಮಿಸಬೇಕು -ಪ್ಲ್ಯಾಸ್ಟಿಕ್ ಮುಕ್ತ, ಕಸ ಮುಕ್ತ ಬೆಂಗಳೂರು ಮಾಡಬೇಕು -ಲಾಕ್​ಡೌನ್​ ವೇಳೆ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ -ಕೊರೊನಾಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ -ಮಳೆಹಾನಿ ತಡೆಗೆ ವಿಶೇಷ ಕಾರ್ಯಪಡೆ ಸ್ಥಾಪಿಸಬೇಕು

ಸಾರ್ವಜನಿಕ ಶೌಚಾಲಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ನಿರ್ದೇಶನಕ್ಕೆ ಬಿಬಿಎಂಪಿ ಸಿದ್ಧತೆ ಹೇಗಿದೆ ಗೊತ್ತಾ?

ಬೆಂಗಳೂರಿನಲ್ಲಿ ಕಸ ಸಂಗ್ರಹ ಶುಲ್ಕ ಮತ್ತಷ್ಟು ದುಬಾರಿ: ಒಪ್ಪುವರೇ ಜನ BBMP ನಿರ್ಣಯವಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada