ಬೆಂಗಳೂರು: ಸಿಬ್ಬಂದಿಯ ವಿವರ ಕೇಳೋ ನೆಪದಲ್ಲಿ BDA ಉಪಕಾರ್ಯದರ್ಶಿ ಚಿದಾನಂದ್ ಜಾತಿ ವಿವರ ಕೇಳಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ಮಾಹಿತಿ ಹೆಸರಿನಲ್ಲಿ ಜಾತಿ ವಿವರ ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಘಟಕಾಧಿಕಾರಿಗಳಿಗೆ ಪತ್ರ ರವಾನಿಸಿರುವ ಉಪಕಾರ್ಯದರ್ಶಿ ಎಲ್ಲಾ ಸೆಕ್ಷನ್ನಲ್ಲಿ ಕಾರ್ಯನಿರ್ವಹಿಸುವವರ ಬಗ್ಗೆ ಜಾತಿ ಸಮೇತ ಮಾಹಿತಿ ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರಂತೆ.
ಹೆಸರು, ಹುದ್ದೆ, ಜನ್ಮ ದಿನಾಂಕದ ಜೊತೆ ಜಾತಿ ವಿವರ ಸಹ ನೀಡಲು ಸೂಚಿಸಿದ್ದಾರೆ ಎಂಬುದು ಅಲ್ಲಿನ ಸಿಬ್ಬಂದಿಯ ಆರೋಪ. ಹೀಗಾಗಿ, ಜಾತಿ ವಿವರ ಕೇಳಿದಕ್ಕೆ ಸಿಬ್ಬಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊದಲೇ ಎಲ್ಲಾ ದಾಖಲಾತಿಗಳನ್ನ ನೀಡಿ ಸರ್ಕಾರಿ ಕೆಲಸಕ್ಕೆ ಸೇರ್ಪಡೆಯಾಗಿದ್ದೇವೆ. ಮತ್ತೆ ಜಾತಿ ವಿವರ ಯಾಕೆ ಕೇಳುತ್ತಿದ್ದಾರೆ ಅಂತಾ ಪ್ರಶ್ನಿಸಿದ್ದಾರೆ.
ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಬಳಿ ಜಾತಿ ವಿವಿರ ಕೇಳುವಂತಿಲ್ಲ. ಆದ್ರೂ ಮಾಹಿತಿ ನೆಪದಲ್ಲಿ ಹೆಸರಿನಲ್ಲಿ ಜಾತಿ ವಿವರ ಕೇಳಿದಾರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಚಿದಾನಂದ್ರ ಸುತ್ತೋಲೆಗೆ ರಾಜಕೀಯ ತಿರುವು ಸಿಗುವ ಸಾಧ್ಯತೆಯಿದ್ದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಸುತ್ತೋಲೆಗೆ ಆಕ್ರೋಶ ವ್ಯಕ್ತಪಡಿಸಿದೆ.