ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್​ ಫ್ರಮ್ ಹೋಮ್​ಗೆ ಒಂದು ವರ್ಷ

Work from home: ಕೊವಿಡ್-19 ಹಾಗೂ ಲಾಕ್​ಡೌನ್ ಬಳಿಕ ಇಂದಿಗೆ ವರ್ಕ್ ಫ್ರಮ್ ಹೋಮ್ ಪದ್ದತಿಯೇ ಬಹುಜನಪ್ರಿಯವಾಗುತ್ತಿದೆ. ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಮೊದಮೊದಲು ವರ್ಕ್ ಫ್ರಮ್ ಹೋಮ್​ಗೆ ವಿರೋಧ ವ್ಯಕ್ತಪಡಿಸಿದರೂ ಈಗ ಇದೇ ವಿಧಾನದಿಂದ ಕೆಲಸದಲ್ಲಿ ಉತ್ತಮ ಫಲಿತಾಂಶ ಕಾಣುತ್ತಿದ್ದಾರೆ.

ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್​ ಫ್ರಮ್ ಹೋಮ್​ಗೆ ಒಂದು ವರ್ಷ
ಪ್ರಾತಿನಿಧಿಕ ಚಿತ್ರ
Follow us
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 03, 2021 | 5:21 PM

ಭಾರತದಲ್ಲಿ ಮೊದಲ ಕೊರೊನಾ ವೈರಾಣು ಸೋಂಕಿತ ವ್ಯಕ್ತಿ ಪತ್ತೆಯಾಗಿ ಇಂದಿಗೆ ಒಂದು ವರ್ಷವಾಯಿತು. ಕೊರೊನಾ ಜತೆಗೆ ವರ್ಕ್ ಫ್ರಮ್ ಹೋಂನಂಥಾ ಪದ್ಧತಿ ಆರಂಭವಾಗಿ, ಹೊಸ ಜೀವನ ಕ್ರಮಗಳಿಗೆ ನಾವು ಚಡಪಡಿಸುತ್ತಾ ಹೊಂದಿಕೊಳ್ಳಲು ಆರಂಭಿಸಿಯೂ ಒಂದು ವರ್ಷವಾಯಿತು. ಅಷ್ಟು ದಿನಗಳವರೆಗೆ ಕೆಲಸ ಎಂದರೆ ಕಚೇರಿ, ಎಸಿ ಕೋಣೆ, ಹತ್ತಾರು ಮಂದಿ ಜನರು, ಒಂದಷ್ಟು ಮಾತು, ಬಹಳಷ್ಟು ಕೆಲಸ, ಆಗಾಗ ರಿಂಗಣಿಸುವ ಫೋನು, ತಲೆ ಕೆಳಗೆತ್ತಲು ಆಗದ ಭಾವ.. ಹೀಗೆ ನಗರೀಕೃತ ಬದುಕಿನ ಕೆಲಸದ ಜೀವನ ಎಂಬುದು ಸಾಗುತ್ತಿತ್ತು. ಆದರೆ, ಅಚಾನಕ್ ಆಗಿ ಎದುರಾದ ಕೊವಿಡ್-19 ಎಂಬ ವೈರಾಣು ಜನಜೀವನದ ಬುಡವನ್ನೇ ಅಲ್ಲಾಡಿಸಿಬಿಟ್ಟಿತು. ಕೆಲಸ ಎಂದರೆ ಮನೆ, ಚಡ್ಡಿ ಹಾಕಿ ಬಿದ್ದುಕೊಂಡ ನೆಲ, ಆಗಾಗ ಕಾಣುವ ಮಡದಿ, ಬೆನ್ನ ಮೇಲೆ ಹಾರುವ ಮಕ್ಕಳು, ಈ ನಡುವೆ ಆನ್​ಲೈನ್ ಮೀಟಿಂಗ್, ತುಸು ಹೆಚ್ಚೇ ಮೌನ, ಸ್ವಲ್ಪ ಆರಾಮ.. ಹೀಗೆ ಬದಲಾವಣೆಗಳ ಮೇಲೆ ಬದಲಾವಣೆಗಳು ತೂರಿ ಬಂದವು.

ಕೊವಿಡ್-19 ಹಾಗೂ ಲಾಕ್​ಡೌನ್ ಬಳಿಕ ವರ್ಕ್ ಫ್ರಮ್ ಹೋಮ್ ಪದ್ದತಿ ಜನಪ್ರಿಯವಾಗುತ್ತಿದೆ. ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಮೊದಮೊದಲು ವರ್ಕ್ ಫ್ರಮ್ ಹೋಮ್​ಗೆ ವಿರೋಧ ವ್ಯಕ್ತಪಡಿಸಿದರೂ ಈಗ ಇದೇ ವಿಧಾನದಿಂದ ಕೆಲಸದಲ್ಲಿ ಉತ್ತಮ ಫಲಿತಾಂಶ ಕಾಣುತ್ತಿದ್ದಾರೆ. ಕೆಲಸಗಾರರು ಕೂಡ ಮನೆಯಲ್ಲಿದ್ದುಕೊಂಡು, ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಾ ಉತ್ತಮ ಜೀವನ ಶೈಲಿಯನ್ನೇ ಇಲ್ಲಿ ಕಂಡುಕೊಂಡಿದ್ದಾರೆ. ಹಲವರು ಈ ವ್ಯವಸ್ಥೆಯಿಂದ ರೋಸಿ ಹೋಗಿರುವುದೂ ಇದೆ.

ವರ್ಕ್ ಫ್ರಮ್ ಹೋಮ್ ಎಂದರೇನು? ಕಚೇರಿಯಲ್ಲಿ ಕುಳಿತು ಮಾಡುವ ಕೆಲಸವನ್ನು ಡಿಜಿಟನ್ ಸಂಪರ್ಕದ ಮೂಲಕ ಪರಸ್ಪರ ಸಂಪರ್ಕ ಸಾಧಿಸಿ ಮನೆಯಲ್ಲಿದ್ದುಕೊಂಡೇ ನಿರ್ವಹಿಸುವುದನ್ನು ವರ್ಕ್ ಫ್ರಮ್ ಹೋಮ್ ಎಂದು ಹೇಳುತ್ತಾರೆ. ಸಾಂಪ್ರದಾಯಿಕ ವ್ಯವಸ್ಥೆಯಂತೆ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಎಂಬ ಸಿದ್ಧ ಸಮಯದ ಬದಲಾಗಿ, ನಮಗೆ ಸರಿಹೊಂದುವ ಸಮಯದಲ್ಲಿ ನಿಗದಿತ ಕೆಲಸ ಮಾಡಿ ಮುಗಿಸುವುದು ಹಲವು ಬಹುರಾಷ್ಟ್ರೀಯ ಕಂಪೆನಿಗಳ ವರ್ಕ್ ಫ್ರಮ್ ಹೋಮ್ ಪದ್ಧತಿ.

ಆದ ಒಳಿತೇನು? ವರ್ಕ್ ಫ್ರಮ್ ಹೋಮ್ ವಿಧಾನದಿಂದಾಗಿ ಕೆಲಸಗಾರರಿಗೆ ಉಳಿತಾಯವಾಗುವ ಸಮಯದ ಪ್ರಮಾಣ ಹೆಚ್ಚಳವಾಗಿದೆ. ಅದರಿಂದ ತಮಗೆ ತಾವು ಹೆಚ್ಚಿನ ಸಮಯವನ್ನು ನೀಡಬಹುದು. ಕೆಲಸಗಾರರು ತಮಗೆ ತಕ್ಕುದಾದ ಸಮಯವನ್ನು ಹೊಂದಿಸಿಕೊಂಡು ಕಂಪೆನಿಗಾಗಿ ದುಡಿಯಬಹುದು. ವರ್ಕ್ ಫ್ರಮ್ ಹೋಮ್ ಪದ್ಧತಿಯಿಂದ ಮನೆಯ ಹಿರಿಯರಿಗೆ ಅಥವಾ ಮಕ್ಕಳಿಗೆ ಹೆಚ್ಚು ಖುಷಿ ಸಿಗುತ್ತಿದೆ. ಅವರ ಜತೆಗೆ ಸಮಯ ಕಳೆಯುವ ಅವಕಾಶ ಸಿಕ್ಕಿದ್ದರಿಂದ ಮನೋಲ್ಲಾಸ ಹೆಚ್ಚಾಗಿದೆ. ಕೆಲಸ ಮಾಡುವಾತ ಹೀಗೆಯೇ ಇರಬೇಕು, ಇದೇ ಉಡುಗೆ ತೊಡಬೇಕು ಎಂಬ ವಿಷಯಗಳೆಲ್ಲಾ ಬೆಲೆ ಕಳೆದುಕೊಂಡಿದೆ. ಮನೆಯ ಬಟ್ಟೆ, ಕೆಲಸ ಮಾಡುತ್ತಲೇ ಊಟ, ತಿಂಡಿ.. ಹೀಗೆ ತಮ್ಮ ಇಷ್ಟದಂತೆ ಕಳೆಯುವ ಸಮಯ ಸಿಗುತ್ತಿದೆ.

ವರ್ಕ್ ಫ್ರಮ್ ಹೋಮ್​ನಿಂದ ಕಷ್ಟಗಳೂ ಎದುರಾಗಿವೆ ಮನೆಯಿಂದಲೇ ಕೆಲಸ ಮಾಡುವ ವಿಧಾನ ಕೆಲವರಿಗೆ ಕಿರಿಕಿರಿ ಎಂದೂ ಅನಿಸಿದೆ. ಮ್ಯಾಕ್ಸ್ ಬುಪಾ ಹೆಲ್ತ್ ಇನ್ಶೂರೆನ್ಸ್ ಅಧ್ಯಯನದ ಪ್ರಕಾರ ಶೇ 55.2ರಷ್ಟು ಜನರು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಶೇ 91ರಷ್ಟು ಜನರು ಹೆಚ್ಚುವರಿ ಕೆಲಸ ಮಾಡಿದ್ದಕ್ಕೆ ಪ್ರೋತ್ಸಾಹ ಧನ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಶೇ 59ರಷ್ಟು ಮಂದಿ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ವರ್ಕ್ ಫ್ರಮ್ ಹೋಮ್ ಸಮಸ್ಯೆಗಳೇನು? ಪ್ರಾಯೋಗಿಕವಾಗಿ ಅಸಾಧ್ಯವಾದ ಡೆಡ್​ಲೈನ್​ಗಳನ್ನು ಕೊಡುವ ಮೂಲಕ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಕೆಲಸ ಮತ್ತು ದಿನನಿತ್ಯ ಜೀವನದ ಹೊಂದಾಣಿಕೆ ಕಷ್ಟವಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಜತೆಗೆ, ಕೊರೊನಾ ಕಾರಣದಿಂದ ಕೆಲಸ ಕಳೆದುಕೊಳ್ಳುವ ಭಯವೂ ಒತ್ತಡ ಹೆಚ್ಚಳಕ್ಕೆ ಕಾರಣವಾಗಿದೆ.

ಕೆಲಸಗಾರರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದರಿಂದ ರಜೆ ಮಂಜೂರು ಮಾಡುವ ವಿಚಾರದಲ್ಲಿ ಕಂಪೆನಿಗಳು ಹಿಂದೇಟು ಹಾಕುತ್ತಿವೆ. ಹೇಗೂ ಮನೆಯಲ್ಲೇ ಇರುವಾಗ ಮತ್ತೆ ರಜೆ ಯಾಕೆ ಎಂಬ ಯೋಚನೆಯನ್ನು ಕಂಪೆನಿಗಳು ತಾಳುತ್ತಿವೆ. ಆರೋಗ್ಯ ಸಮಸ್ಯೆ ಇದ್ದರೂ ರಜೆ ಸಿಗುತ್ತಿಲ್ಲ ಎಂದು ಕೆಲಸಗಾರರು ಅಭಿಪ್ರಾಯಪಡುತ್ತಿದ್ದಾರೆ. ಕೆಲಸದ ಒತ್ತಡವನ್ನು ಎಲ್ಲಾ ಕಾರ್ಮಿಕರಿಗೆ ಹಂಚುವಲ್ಲಿ ಕಂಪೆನಿ ವಿಫಲವಾಗುತ್ತಿದೆ.

ಕೆಲಸದಲ್ಲಿ ಡಿಜಿಟನ್ ಉಪಕರಣ-ಸಂಪರ್ಕದ ಬಳಕೆ ಹೆಚ್ಚಾದಂತೆ ಸಾಮಾಜಿಕ ಸಂವಹನ ಕಡಿಮೆಯಾಗಿದೆ. ಸಂಪೂರ್ಣ ಡಿಜಿಟಲ್ ಉಪಕರಣಗಳ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿದೆ. ಮೊಬೈಲ್, ಲ್ಯಾಪ್​ಟಾಪ್ ಮುಂದೆ ಜನರು ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಕೆಲಸಗಾರರಿಗೆ ಕಣ್ಣು, ತಲೆ ನೋವು ಸಮಸ್ಯೆಗಳು ಎದುರಾಗಿದೆ. ಬೆನ್ನು ನೋವು, ಕಡಿಮೆ ನಿದ್ರೆಯ ತೊಂದರೆಗಳು ಕೂಡ ಎದುರಾಗಿವೆ. ಈ ಮೊದಲು ದಿನವೂ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದ್ದವರು ಈಗ ಮನೆಯೊಳಗೇ ಕೂರುವಂತಾಗಿದೆ. ಮಾನವ ಸಂಪರ್ಕ, ಸಂವಹನ ಕಡಿಮೆಯಾಗಿದೆ.

ಬ್ಯಾಚುಲರ್​ಗಳಿಗೆ ಒಳ್ಳೇದಾಗಿದೆ, ವಿವಾಹಿತರಿಗೆ ಕಷ್ಟ ‘ವರ್ಕ್​ ಫ್ರಮ್ ಹೋಮ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ಡೆಲಾಯ್ಟ್​ ಸಂಸ್ಥೆಯ ಉದ್ಯೋಗ ಮೇಘಾ ಎಚ್.ಆರ್. ಅವರನ್ನು ಕೇಳಿದಾಗ ಅವರು, ವಿವಾಹಿತರು-ಅವಿವಾಹಿತರು ಎಂಬ ಎರಡು ವಿಂಗಡನೆಗಳಲ್ಲಿ ಅನಿಸಿಕೆ ಹಂಚಿಕೊಂಡರು. ಸ್ವತಃ ಮೇಘಾ ಅವರಿಗೆ ವರ್ಕ್​ ಫ್ರಮ್​ ಹೋಮ್​ ಬಗ್ಗೆ ಒಳ್ಳೆಯ ಭಾವನೆಯಿದೆ.

‘ವರ್ಕ್ ಫ್ರಮ್ ಹೋಮ್​ನಿಂದ ನನ್ನಂಥ ಬ್ಯಾಚುಲರ್​ಗಳಿಗೆ ಒಳ್ಳೆಯದಾಗಿದೆ ಎಂದೇ ಹೇಳಬೇಕು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ರೂಂ ಬಾಡಿಗೆ ಕಟ್ಟಬೇಕಿತ್ತು. ಇತರ ಖರ್ಚುಗಳು ಬರುತ್ತಿದ್ದವು. ಆದರೆ, ಈಗ ಖರ್ಚಿನ ಪ್ರಮಾಣ ಕಡಿಮೆ ಆಗಿದೆ. ಆರೋಗ್ಯ ಉತ್ತಮವಾಗಿರಿಸಲು ಕೂಡ ಸಹಕಾರಿಯಾಗಿದೆ. ಆದರೆ, ಎಲ್ಲಾ ಬ್ಯಾಚುಲರ್​ಗಳಿಗೂ ಇದೇ ಅಭಿಪ್ರಾಯ ಇದೆ ಎಂದಲ್ಲ. ಕೆಲವರು ಪಾರ್ಟಿ ಮಾಡೋಕೆ ಆಗ್ತಿಲ್ಲ. ಮನೆಯಿಂದ ಹೊರಗೆ ಹೋಗೋಕೆ ಬಿಡ್ತಿಲ್ಲ ಎಂದು ದೂರುತ್ತಿದ್ದಾರೆ. ಇಂತಹ ಅಭಿಪ್ರಾಯ ಬಿಟ್ಟರೆ ಯುವಸಮುದಾಯಕ್ಕೆ ವರ್ಕ್ ಫ್ರಮ್ ಹೋಮ್​ನಿಂದ ಏನೋ ಸಮಸ್ಯೆ ಆಗಿದೆ ಎಂದು ನನಗೆ ಅನಿಸುವುದಿಲ್ಲ. ಕೆಲಸ ಕಳೆದುಕೊಳ್ಳುವ ಭಯ, ಓವರ್​ಟೈಮ್ ಒತ್ತಡ ಯುವಸಮುದಾಯವನ್ನು ಬಹಳಷ್ಟು ಕಾಡಿದೆ ಎಂದೂ ನನಗೆ ಬಲವಾಗಿ ಹೇಳಲಾಗುತ್ತಿಲ್ಲ. ವಿವಾಹಿತ ಸಹೋದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನೇ ಹೆಚ್ಚು ಹೊಂದಿದ್ದಾರೆ. ಮನೆಯಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಮಕ್ಕಳು, ಸಂಸಾರ ಕಷ್ಟವೂ ಹೆಚ್ಚಾಗಿ ಕಣ್ಣು ಕುಕ್ಕುತ್ತಿದೆ ಎಂದು ಹೇಳುತ್ತಿದ್ದಾರೆ’ ಎನ್ನುತ್ತಾರೆ ಅವರು.

ಸಂಸಾರದಲ್ಲಿ ಅಸಮಾಧಾನ ದಾಂಪತ್ಯದ ಮೇಲೆ ವರ್ಕ್​ ಫ್ರಮ್ ಹೋಮ್ ಪರಿಣಾಮಗಳನ್ನು ಆಪ್ತ ಸಮಾಲೋಚಕಿ ಸೌಜನ್ಯಾ ವಸಿಷ್ಠ ವಿಶ್ಲೇಷಿಸುವುದು ಹೀಗೆ..

‘ವರ್ಕ್ ಫ್ರಮ್ ಹೋಮ್ ಆರಂಭವಾದ ಬಳಿಕ ನನ್ನ ಗಮನಕ್ಕೆ ಬಂದಂತೆ ಸಮಸ್ಯೆಗಳೇ ಹೆಚ್ಚಾಗಿ ತಲೆದೋರಿದೆ. ವಿವಾಹ ವಿಚ್ಛೇದನ ಪ್ರಮಾಣ ಹೆಚ್ಚಿದೆ. ಗಂಡ ಹೆಂಡತಿ ನಡುವೆ ಜಗಳಗಳು, ಅಸಮಾಧಾನಗಳು ಜಾಸ್ತಿ ಕಾಣಿಸುತ್ತಿವೆ. ಸಣ್ಣಸಣ್ಣ ಹಾಗೂ ಬಗೆಹರಿಸಬಹುದಾದ ಅಡೆತಡೆಗಳು ದೊಡ್ಡದಾಗುತ್ತಿವೆ. ಅಕ್ರಮ ಸಂಬಂಧ ಹೊಂದಿರುವ ಆರೋಪ, ಪ್ರತ್ಯಾರೋಪಗಳು ಶುರುವಾಗಿದೆ. ವರ್ಕ್ ಫ್ರಮ್ ಹೋಮ್ ಆರಂಭದ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿತ್ತು. ಇತ್ತೀಚೆಗೆ ಸ್ವಲ್ಪ ಕಡಿಮೆ ಆಗುತ್ತಿರುವಂತೆ ಅನಿಸಿದರೂ, ಹೆಚ್ಚಿನವರು ಆಫೀಸ್​ಗೆ ಮರಳುವುದನ್ನು ಕಾಯುತ್ತಿದ್ದಾರೆ. ಕೆಲಸದ ಒತ್ತಡ, ಕೆಲಸ ಕಳೆದುಕೊಳ್ಳುವ ಭೀತಿಯೂ ಜನರಲ್ಲಿದೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ

Facebook Live| ವರ್ಕ್​ ಫ್ರಮ್ ಹೋಮ್​ನಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಇಲ್ಲಿದೆ ತಜ್ಞರ ಅಭಿಪ್ರಾಯ

Published On - 5:18 pm, Wed, 3 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ