ರಾಜಧಾನಿಯಲ್ಲಿ ಸೈಕಲ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ರಾಜಧಾನಿಯಲ್ಲಿ ಸೈಕಲ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಕೊರೊನಾದಿಂದ ಜನ ಸಾರಿಗೆಯಲ್ಲಿ ಓಡಾಡಲು ಭಯ ಬೀಳ್ತಿದ್ದಾರೆ. ಮತ್ತೊಂದ್ಕಡೆ ಇಂಧನ ಬೆಲೆ ದುಬಾರಿಯಾಗುತ್ತಿದೆ. ಹೀಗಾಗಿ, ಪರ್ಯಾಯ ಮಾರ್ಗ ಕಂಡುಕೊಂಡಿರೋ ದೆಹಲಿ ಜನರೆ ಸೈಕಲ್ ಖರೀದಿಯಲ್ಲಿ ತೊಡಗಿದ್ದಾರೆ. ಲಾಕ್​ಡೌನ್ ಸಡಿಲಿಕೆ ಬಳಿಕ ಸೈಕಲ್ ವ್ಯಾಪಾರ ದುಪ್ಪಟ್ಟಾಗಿದೆ ಅಂತೆ.

ಭಾರತ-ಚೀನಾ ಅಧಿಕಾರಿಗಳ ಚರ್ಚೆ
ಪೂರ್ವ ಲಡಾಖ್​​ನಲ್ಲಿ ಮತ್ತೆ ಭಾರತ-ಚೀನಾ ನಡುವೆ ಮಾತುಕತೆ ನಡೆದಿದೆ. ಸೇನೆ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿದ್ದು, ಈ ಮೂಲಕ ಗಡಿ ವಿವಾದ ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಆಸಕ್ತಿ ತೋರಿಸುತ್ತಿವೆ. ಇದು ಗಡಿಯಲ್ಲಿ ಪರಿಸ್ಥಿತಿಯನ್ನ ತಿಳಿಗೊಳಿಸಿದೆ.

ಸವಾರರಿಗೆ ಇಂಧನ ಬೆಲೆ ಏರಿಕೆ ಬಿಸಿ
ಲಾಕ್​ಡೌನ್​ನಿಂದ ತೈಲ ಬೆಲೆ ಮೇಲೂ ಹೊಡೆತ ಬಿದ್ದಿದೆ. ದೇಶದಲ್ಲಿ ಸತತವಾಗಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ವಾಹನ ಸವಾರರನ್ನ ಕಂಗೆಡಿಸಿದೆ. ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೇ, ಸಂಬಳವೂ ಇಲ್ಲದೇ ಕಂಗಾಲ್ ಆಗಿದ್ದ ಜನರಿಗೆ ತೈಲ ಬೆರೆ ಏರಿಕೆ ಗಾಯದ ಮೇಲೆ ಬರೆ ಎಲೆದಂತಾಗಿದೆ.

ಮೃಗಾಲಯಗಳ ಬಾಗಿಲು ಓಪನ್!
ಕೊರೊನಾ ಸಂಕಷ್ಟದಿಂದ ಪರದಾಡುತ್ತಿರುವ ನಡುವೆ ಬ್ರಿಟನ್​ನಲ್ಲಿ ಲಾಕ್​ಡೌನ್ ಅನ್ನ ನಿಧಾನವಾಗಿ ಹಿಂಪಡೆಯಲಾಗ್ತಿದೆ. ಈಗಾಗಲೇ ಮಾರುಕಟ್ಟೆಗಳನ್ನ ತೆರೆಯಲು ಅನುಮತಿ ನೀಡಲಾಗಿದ್ದು, ಝೂಗಳಿಗೂ ಗ್ರೀನ್​ಸಿಗ್ನಲ್ ನೀಡಲಾಗಿತ್ತು. ಸದ್ಯ ಝೂ ಬಾಗಿಲು ತೆಗೆಯುತ್ತಿದ್ದ ಬ್ರಿಟನ್​ನಲ್ಲಿ ಪ್ರವಾಸಿಗರ ದಂಡೇ ಹರಿದು ಬರ್ತಿದೆ.