Bigg Boss 14 | ಸ್ಪರ್ಧಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ತಾರೆ ಸಲ್ಮಾನ್ ಖಾನ್

ಭಾನುವಾರ 9 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಎಪಿಸೋಡ್​ನಲ್ಲಿ ಸಲ್ಮಾನ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವಿರಲಿದೆ. ರವೀನಾ ಟಂಡನ್ ಮತ್ತು ಜಾಕ್ವಲಿನ್ ಫರ್ನಾಂಡೀಸ್ ನೃತ್ಯ ಕಾರ್ಯಕ್ರಮ ಸಲ್ಲು ಹುಟ್ಟುಹಬ್ಬದ ಆಚರಣೆಗೆ ಮೆರಗು ನೀಡಲಿದೆ.

Bigg Boss 14 | ಸ್ಪರ್ಧಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ತಾರೆ ಸಲ್ಮಾನ್ ಖಾನ್
ಬಿಗ್ ಬಾಸ್ ಸೆಟ್​ನಲ್ಲಿ ಸಲ್ಮಾನ್ ಖಾನ್ ಹುಟ್ಟುಹಬ್ಬದ ಸಂಭ್ರಮ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 27, 2020 | 6:32 PM

ಬಿಗ್ ​ಬಾಸ್ ಮನೆಯಲ್ಲಿ ಕಳೆದ ವಾರ ಭಾರೀ ಜಗಳ ನಡೆದ ನಂತರ ಸದ್ಯ ವಾತಾವರಣ ತಣ್ಣಗಾಗಿದೆ. ಅಭಿನವ್ ಶುಕ್ಲಾ, ಇಜಾಸ್ ಖಾನ್, ರಾಹುಲ್ ಮಹಾಜನ್ ಈ ಮೂವರು ಸ್ಪರ್ಧಿಗಳಲ್ಲಿ ಒಬ್ಬರು ಭಾನುವಾರ ಬಿಗ್ ​ಬಾಸ್ ಸ್ಪರ್ಧೆಯಿಂದ ಔಟ್ ಆಗಲಿದ್ದಾರೆ. ಬಿಗ್​ ಬಾಸ್ ಮನೆಯಿಂದ ಹೊರಹೋಗುವವರ ಪಟ್ಟಿಗೆ ಮನು ಪಂಜಾಬಿ ನಾಮನಿರ್ದೇಶನವಾಗಿದೆ. ಆರೋಗ್ಯ ಸಮಸ್ಯೆಯಿಂದಾಗಿ ಮನು ಬಿಗ್ ಬಾಸ್​ನಿಂದ ಹೊರ ನಡೆದಿದ್ದಾರೆ.

ಮನೆಯಿಂದ ಸ್ಪರ್ಧಿಗಳು ಹೊರಹೋಗುತ್ತಿದ್ದಂತೆ ಹೊಸ ಸ್ಪರ್ಧಿಗಳು ಮನೆಗೆ ಪ್ರವೇಶಿಸಲಿದ್ದಾರೆ. ಆರ್ಷಿಯನ್ನು ಸ್ವಿಮಿಂಗ್ ಪೂಲ್​ಗೆ ದೂಡಿದ್ದಕ್ಕೆ ವಿಕಾಸ್ ಗುಪ್ತಾ ಹೊರನಡೆದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಾಜಕಾರಣಿ ಸೊನಾಲಿ ಫೋಗಟ್ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.

ಭಾನುವಾರ 9 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಎಪಿಸೋಡ್​ನಲ್ಲಿ ಸಲ್ಮಾನ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವಿರಲಿದೆ. ರವೀನಾ ಟಂಡನ್ ಮತ್ತು ಜಾಕ್ವಲಿನಾ ಫರ್ನಾಂಡೀಸ್ ನೃತ್ಯ ಕಾರ್ಯಕ್ರಮ ಸಲ್ಲು ಹುಟ್ಟುಹಬ್ಬದ ಆಚರಣೆಗೆ ಮೆರಗು ನೀಡಲಿದೆ.

ಸಲ್ಮಾನ್ ಹುಟ್ಟುಹಬ್ಬಕ್ಕೆ ಸ್ಪರ್ಧಿಗಳಿಂದ ಕಾರ್ಯಕ್ರಮ ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ. ರಾಹುಲ್ ಮಹಾಜನ್ ಮತ್ತು ರಾಖಿ ಸಾವಂತ್ ‘ಟಿಪ್ ಟಿಪ್ ಬರ್ ಸಾ ಪಾನೀ’ ಹಾಡಿಗೆ ಕುಣಿಯಲಿದ್ದಾರೆ. ಆರ್ಷಿ ಖಾನ್ ಮತ್ತು ವಿಕಾಸ್ ಗುಪ್ತಾ ‘ಕಬೂತರ್ ಜಾ ಜಾ ಜಾ’ ಹಾಡಿಗೆ ತಮಾಷೆಯ ನೃತ್ಯ ಮಾಡಲಿದ್ದು, ಎಲ್ಲ ಸ್ಪರ್ಧಿಗಳು ಜತೆಯಾಗಿ ‘ಸ್ವಾಗ್ ಸೇ ಸ್ವಾಗತ್’ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ಬಾಲಿವುಡ್​ ‘ಭಾಯ್’ ಸಲ್ಮಾನ್ ಖಾನ್​ಗೆ 55ರ ಹುಟ್ಟುಹಬ್ಬ ಸಂಭ್ರಮ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada