ಹಾಸನ: ಚಿರತೆಗಳನ್ನ ಸೆರೆಹಿಡಿಯುವಂತೆ ಆಗ್ರಹಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆ ಗ್ರಾಮದ ಬಳಿ ನಡೆದಿದೆ.
ಹೊರ ಜಿಲ್ಲೆಗಳಲ್ಲಿ ಸೆರೆಹಿಡಿದ ಚಿರತೆಗಳನ್ನ ನಮ್ಮ ಗ್ರಾಮದ ಬಳಿ ಬಿಟ್ಟಿದ್ದಾರೆ. ಹಾಗಾಗಿ, ಕಳೆದ ಕೆಲವು ದಿನಗಳಿಂದ ಗ್ರಾಮದ ವ್ಯಾಪ್ತಿಯಲ್ಲಿ ಈ ಚಿರತೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಮ್ಮ ಸಾಕು ಪ್ರಾಣಿಗಳನ್ನು ಚಿರತೆಗಳು ಬೇಟೆಯಾಡುತ್ತಿವೆ. ಆದ್ದರಿಂದ, ಕೂಡಲೇ ಚಿರತೆಗಳನ್ನ ಸೆರೆಹಿಡಿಯಲು ಬಿಸಿಲೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬಿಸಿಲೆ ಗ್ರಾಮದ ಬಳಿಯಿರುವ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಹೆಚ್ಚಿದ ಚಿರತೆ ಹಾವಳಿಗಳು.. ಪ್ರವಾಸಿ ತಾಣಗಳಲ್ಲಿ ಜನ ಸಂಚಾರಕ್ಕೆ ಬ್ರೇಕ್! ಎಲ್ಲೆಲ್ಲಿ?