ಮೊದಲ ಬಾರಿಗೆ 21 ಲಕ್ಷ ರೂ. ಮೌಲ್ಯ ದಾಟಿದ ಬಿಟ್​ ಕಾಯಿನ್​ ಬೆಲೆ: ಓಟ ಇನ್ನೂ ಮುಂದುವರಿಯಲಿದೆ

ಮುಂದಿನ ದಿನಗಳಲ್ಲಿ ಜನರು ಹೂಡಿಕೆ ಮಾಡಲು ಚಿನ್ನದ ಬದಲಿಗೆ ಬಿಟ್​ ಕಾಯಿನ್​ನತ್ತ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ. ಸಂಸ್ಥೆಗಳು ಬಿಟ್​ ಕಾಯಿನ್​ ಮೇಲೆ ಹೂಡಿಕೆ ಮಾಡಲು ಮುಂದೆ ಬಂದರೆ ಇದರ ಬೆಲೆ ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು. 

  • Publish Date - 4:42 pm, Fri, 1 January 21 Edited By: sadhu srinath
ಮೊದಲ ಬಾರಿಗೆ 21 ಲಕ್ಷ ರೂ. ಮೌಲ್ಯ ದಾಟಿದ ಬಿಟ್​ ಕಾಯಿನ್​ ಬೆಲೆ: ಓಟ ಇನ್ನೂ ಮುಂದುವರಿಯಲಿದೆ
ಸಾಂದರ್ಭಿಕ ಚಿತ್ರ

ಮುಂಬೈ: ಕೊರೊನಾ ವೈರಸ್​ ಮಧ್ಯೆಯೂ ಬಿಟ್​ ಕಾಯಿನ್​ ಬೆಲೆ ಮಿತಿ ಮೀರಿ ಏರಿಕೆ ಕಂಡಿದೆ. ಒಂದು ಬಿಟ್​ ಕಾಯಿನ್​ನ ಬೆಲೆ 29 ಸಾವಿರ ಡಾಲರ್​ (ಭಾರತೀಯ ಕರೆನ್ಸಿಯಲ್ಲಿ 21.26 ಲಕ್ಷ ರೂಪಾಯಿ) ಆಗಿದೆ. ಇತಿಹಾಸದಲ್ಲಿ ಬಿಟ್​ ಕಾಯಿನ್​ ಬೆಲೆ ಇಷ್ಟು ದೊಡ್ಡ ಮಟ್ಟಕ್ಕೆ ಏರಿಕೆ ಆಗಿದ್ದು ಇದೇ ಮೊದಲು.

ವಿಶ್ವದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಿಜಿಟಲ್​ ಕರೆನ್ಸಿಗಳಲ್ಲಿ ಬಿಟ್​ ಕಾಯಿನ್​ ಮೊದಲ ಸ್ಥಾನದಲ್ಲಿದೆ. ಬಿಟ್​ ಕಾಯಿನ್​ ಬೆಲೆ ನಿನ್ನೆ $ 29,300 ಆಗಿತ್ತು. ನಂತರ ಬೆಲೆ ಶೇ.0.67 ಇಳಿಕೆ ಕಂಡು 28,774.36 ಡಾಲರ್ ಆಗಿದೆ.

ಡಿಸೆಂಬರ್​ 16ರಂದು 19 ಸಾವಿರ ಡಾಲರ್​ ಆಸುಪಾಸಿನಲ್ಲಿದ್ದ ಬಿಟ್​ ಕಾಯಿನ್​ ಬೆಲೆ ಏಕಾಏಕಿ ಏರಿಕೆ ಕಂಡಿದೆ. ಬಿಟ್​ ಕಾಯಿನ್​ನಲ್ಲಿ ಸಾಂಸ್ಥಿಕ ದತ್ತು ಪ್ರಕ್ರಿಯೆ (institutional adoption) ನಡೆಯುತ್ತಿದೆ. ಈ ಕಾರಣಕ್ಕೆ ಈ ಡಿಜಿಟಲ್​ ಕರೆನ್ಸಿಯಲ್ಲಿ ನಾಗಾಲೋಟ ಆರಂಭವಾಗಿದೆ. ಬಿಟ್​ ಕಾಯಿನ್​ ಬೆಲೆ $ 50,000 (36 ಲಕ್ಷ ರೂಪಾಯಿ) ತಲುಪಲಿದೆ ಎಂದು ಮಾರುಕಟ್ಟೆ ತಜ್ಞರ ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಜನರು ಹೂಡಿಕೆ ಮಾಡಲು ಚಿನ್ನದ ಬದಲಿಗೆ ಬಿಟ್​ ಕಾಯಿನ್​ನತ್ತ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ. ಸಂಸ್ಥೆಗಳು ಬಿಟ್​ ಕಾಯಿನ್​ ಮೇಲೆ ಹೂಡಿಕೆ ಮಾಡಲು ಮುಂದೆ ಬಂದರೆ ಇದರ ಬೆಲೆ ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

ಏನಿದು ಬಿಟ್​ ಕಾಯಿನ್​?
ಬಿಟ್​ ಕಾಯಿನ್​ ಸಂಪೂರ್ಣವಾಗಿ ವರ್ಚುವಲ್​ ಕರೆನ್ಸಿ. ಇದು ಮೊದಲಿಗೆ ಆರಂಭವಾಗಿದ್ದು 2009ರಲ್ಲಿ. ಸತೋಷೋ ನಾಕಮೋಟಿ ಎಂಬುವವರು ಬಿಟ್ ಕಾಯಿನ್​ ಜನಕ. ಇದನ್ನು​ ನೀವು ನೇರವಾಗಿ ಅಂಗಡಿಗಳಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ. ಇದನ್ನು ಆನ್​ಲೈನ್​ ಪ್ಲಾಟ್​ಫಾರ್ಮ್​ಗಳ ಮೂಲಕವೇ ಚಲಾವಣೆ ಮಾಡಬೇಕು. ಈ ಹಣ ಚಲಾವಣೆಗೆ ಯಾವುದೇ ನಿರ್ಬಂಧ ಇಲ್ಲ. ಈ ರೀತಿಯ ಸುಮಾರು 800 ಡಿಜಿಟಲ್​ ಕರೆನ್ಸಿ ಲಭ್ಯವಿದೆ. ಇದು ಆನ್​ಲೈನ್​ನಲ್ಲೇ ಇರುವುದರಿಂದ ವೈರಸ್​ ದಾಳಿಗೆ ತುತ್ತಾಗಿ, ಸುಲಭವಾಗಿ ಹ್ಯಾಕ್​ ಆಗಬಹುದು. ಬಿಟ್​ ಕಾಯಿನ್​ಗಳಿಗೆ ಭಾರತದಲ್ಲಿ ಮಾನ್ಯತೆ ಇಲ್ಲ.

 

ಉಜಿರೆ ಬಾಲಕನ ಕಿಡ್ನ್ಯಾಪ್ ಕೇಸ್: ​ಪರಿಚಿತನೇ ಹಾಕಿದ್ದ ಸ್ಕೆಚ್.. ಬಿಟ್ ಕಾಯಿನ್ ಪಡೆಯೋಕೆ ಇದೆಲ್ಲಾ ಸರ್ಕಸ್