ಸಂಪುಟ ವಿಸ್ತರಣೆಗೂ, ಅಮಿತ್‌ ಶಾ ಭೇಟಿಗೂ ಸಂಬಂಧವಿಲ್ಲ -ಸಿ.ಟಿ.ರವಿ ಸ್ಪಷ್ಟನೆ

ಜ.16, 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ, ಸಂಪುಟ ವಿಸ್ತರಣೆಗೂ, ಅಮಿತ್‌ ಶಾ ಭೇಟಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

  • TV9 Web Team
  • Published On - 19:16 PM, 9 Jan 2021
ಸಂಪುಟ ವಿಸ್ತರಣೆಗೂ, ಅಮಿತ್‌ ಶಾ ಭೇಟಿಗೂ ಸಂಬಂಧವಿಲ್ಲ -ಸಿ.ಟಿ.ರವಿ ಸ್ಪಷ್ಟನೆ
C.T.ರವಿ (ಎಡ); ಅಮಿತ್ ಶಾ (ಬಲ)

ಬೆಂಗಳೂರು: ಜ.16, 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ, ಸಂಪುಟ ವಿಸ್ತರಣೆಗೂ, ಅಮಿತ್‌ ಶಾ ಭೇಟಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ರಾಜ್ಯ BJPಯಲ್ಲಿ ಯಾವುದೇ ರೀತಿಯ ಜಗಳವಿಲ್ಲ. ರೋಗವಿದ್ದವರು ಮಾತ್ರ ಔಷಧ ತೆಗೆದುಕೊಳ್ಳುತ್ತಾರೆ. ರೋಗವಿಲ್ಲದಿದ್ರೆ ಯಾವುದೇ ರೀತಿಯ ಔಷಧ ಬೇಕಾಗುವುದಿಲ್ಲ. ಸಾಮರ್ಥ್ಯವಿರುವವರು ಹೆಚ್ಚಿದ್ದಾಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತೆ ಎಂದು ರವಿ ಹೇಳಿದರು.

ಈ ಹಿಂದೆ ಮಾತುಕೊಟ್ಟಂತೆ ಸಿಎಂ BSY ನಡೆದುಕೊಂಡಿದ್ದಾರೆ. ಮುಂದೆಯೂ ಸಿಎಂ ಬಿಎಸ್‌ವೈ ಇದೇ ರೀತಿ ನಡೆದುಕೊಳ್ಳುತ್ತಾರೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದರು.

ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಬೈ ಪೋಲ್ಸ್​: ಅಭ್ಯರ್ಥಿ ಆಯ್ಕೆ ಹೈಕಮಾಂಡ್​ಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್