ಬಿಜೆಪಿ ಸರ್ಕಾರ ಹಾಸನ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ -ಮಾಜಿ ಪ್ರಧಾನಿ H.D.ದೇವೇಗೌಡ

ತುಮಕೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಹಾಸನದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಬೇರೆ ಜಿಲ್ಲೆಯ ಕೆಲಸದ ಬಗ್ಗೆ ನನಗೆ ಅಸೂಯೆಯಿಲ್ಲ. ಆದ್ರೆ ಯಡಿಯೂರಪ್ಪ ನವರಿಗೆ ಗೌರವಪೂರ್ವಕವಾಗಿಯೇ ಮನವಿ ಮಾಡುತ್ತೇನೆ. ನಮ್ಮ ಜಿಲ್ಲೆಯ ಕೆಲಸಗಳಿಗೂ ಆಧ್ಯತೆ ನೀಡಿ. -HDD

  • TV9 Web Team
  • Published On - 15:00 PM, 24 Jan 2021
ಬಿಜೆಪಿ ಸರ್ಕಾರ ಹಾಸನ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ -ಮಾಜಿ ಪ್ರಧಾನಿ H.D.ದೇವೇಗೌಡ
ಮಾಜಿ ಪ್ರಧಾನಿ H.D.ದೇವೇಗೌಡ

ಹಾಸನ: ಜಿಲ್ಲೆಯನ್ನು ಬಿಜೆಪಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ತುಮಕೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಹಾಸನದಲ್ಲಿ ಇನ್ನೂ ಆರಂಭವೇ ಆಗಿಲ್ಲ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ H.D.ದೇವೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ಅವಧಿಯಲ್ಲಿ ಆಗಿದ್ದು ಇನ್ನೂ ಕೆಲಸ ಆರಂಭ ಆಗಿಲ್ಲ
ತಮ್ಮ ಆಪ್ತ JDS ಮುಖಂಡ ರಘು ಹೊಂಗೆರೆ ಮನೆ ಗೃಹ ಪ್ರವೇಶಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಜೆಪಿ ಸರ್ಕಾರದ ವಿರುದ್ಧ ಪ್ರಹಾರ ಬೀಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕಳೆದ 60 ವರ್ಷದ ರಾಜಕಾರಣದಲ್ಲಿ ನಮಗೆ ಅವಕಾಶ ಸಿಕ್ಕಾಗಲೆಲ್ಲಾ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವೆ. ಬೆಂಗಳೂರಿನ ಜೊತೆಗೆ ಇತರೆ ಕೇಂದ್ರಗಳೂ ಬೆಳೆಯಬೇಕೆಂದು ಸಮಾನವಾಗಿ ನೋಡಿದ್ದೇವೆ. ನಾನು ಹಾಗು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿಕ್ಕ ಅವಕಾಶವನ್ನು ಬಳಸಿ ಕೆಲಸ ಮಾಡಿದ್ದೇವೆ.

ನಾವು ಮಾಡಿದ ಬಹುತೇಕ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದೇವೆ. ಅದರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆಗಬೇಕಂಬ ಕೆಲಸ ಒಂದು ಬಾಕಿಯಾಗಿದೆ. ಹಾಸನದ ಚನ್ನಪಟ್ಟಣ ಕೆರೆಯಲ್ಲಿ ಕೆಲ ಅಭಿವೃದ್ಧಿ ಕೆಲಸ, ಬೇಲೂರು ಬಿಳಿಕೆರೆ ಚತುಷ್ಪಥ ರಸ್ತೆ ಕಾಮಗಾರಿ ಬಾಕಿಯಿದೆ. ಜಿಲ್ಲೆಗೆ ಐಐಟಿ ತರೋದೊಂದು ಬಾಕಿಯಿದೆ. ಕುಮಾರಸ್ವಾಮಿ ಯಡಿಯೂರಪ್ಪ ಸರ್ಕಾರದಲ್ಲಿ ಐಐಟಿ ಮಾಡಲು ಪ್ರಯತ್ನ ಮಾಡಿ ಭೂ ಮಂಜೂರಾತಿಯೂ ಆಗಿತ್ತು. ಆದರೆ ನಂತರದಲ್ಲಿ ಬೇರೆ ಬೇರೆ ಬೆಳವಣಿಗೆಗಳಾದವು. ನಮ್ಮ ಜಿಲ್ಲೆಯ ಕೆಲಸಗಳನ್ನ ಬಿಜೆಪಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

ನಾನು ಇರುವಾಗಲೇ ಏರ್‌ಪೋರ್ಟ್ ನಿರ್ಮಾಣವಾಗಲಿ
ತುಮಕೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಹಾಸನದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಬೇರೆ ಜಿಲ್ಲೆಯ ಕೆಲಸದ ಬಗ್ಗೆ ನನಗೆ ಅಸೂಯೆಯಿಲ್ಲ. ಆದ್ರೆ ಯಡಿಯೂರಪ್ಪ ನವರಿಗೆ ಗೌರವಪೂರ್ವಕವಾಗಿಯೇ ಮನವಿ ಮಾಡುತ್ತೇನೆ. ನಮ್ಮ ಜಿಲ್ಲೆಯ ಕೆಲಸಗಳಿಗೂ ಆಧ್ಯತೆ ನೀಡಿ. ಈ ಕೆಲಸಗಳಲ್ಲಿ ವೈಯಕ್ತಿಕ ಏನಿಲ್ಲ, ಇದು ಜಿಲ್ಲೆಯ ಅಭಿವೃದ್ಧಿ ವಿಚಾರ. ಹಾಗಾಗಿ ಸ್ವಲ್ಪ ಜಿಲ್ಲೆಯ ಕೆಲಸಗಳಿಗೆ ಗಮನಕೊಡಿ.

ನನಗೆ ಈಗ 88 ವರ್ಷ, ಯಡಿಯೂರಪ್ಪನವರ ಅವದಿ‌ ಮುಗಿಯೋವೇಳೆಗೆ ನನಗೆ 90 ವರ್ಷ ಆಗಿರುತ್ತೆ. ಆಗ ನನಗೆ ನಡೆಯೋಕೆ‌ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಅವರು ತಮ್ಮ ಅವದಿಯನ್ನ ಪೂರೈಸುತ್ತಾರೆ. ನಾನು ಇದನ್ನ ಹಿಂದೆಯೂ ಹೇಳಿದ್ದೆ. ಅವರು ಮುಂದೆ ಮತ್ತೆ ಸಿಎಂ ಆಗ್ತಾರೋ ಇಲ್ಲವೋ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರು ಮತ್ತೆ ಸಿಎಂ ಅದರೂ ನಮಗೇನು ಅಸೂಯೆಯಿಲ್ಲ. ಆದರೆ ಮತ್ತೆ ಸಿಎಂ ಮಾಡುವಾಗ ಏಜ್ ಫ್ಯಾಕ್ಟರ್ ಮತ್ತೊಂದು ಎಲ್ಲವೂ ಲೆಕ್ಕಕ್ಕೆ ಬರುತ್ತೆ ಅಲ್ಲವೇ. ಹಾಗಾಗಿ ನನ್ನ ಜೀವಿತಾವಧಿಯಲ್ಲೇ ಅವರೇ ಈ ಜಿಲ್ಲೆಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿ. ಅವರು ನಾಲ್ಕನೇ ಬಾರಿಗೆ ಸಿಎಂ ಆಗಿದ್ದಾರೆ. ಈ ಜಿಲ್ಲೆಗೆ ಯಾವುದಾದ್ರು ಒಂದೇ ಒಂದು ಶಾಶ್ವತ ಕೆಲಸ ಮಾಡಿದ್ದಾರಾ ಎಂದು ದಯಮಾಡಿ ಹೇಳಲಿ ಎಂದು HDD ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಾನು ಯಡಿಯೂರಪ್ಪರನ್ನ ಭೇಟಿಯಾಗುತ್ತೇನೆ. ಹಿಂದೆ ಸಿದ್ದರಾಮಯ್ಯರನ್ನ ಕೂಡ ಭೇಟಿಯಾಗಿದ್ದೆ. ಅಧಿಕಾರದಲ್ಲಿ ಇರೋರನ್ನ ಭೇಟಿಯಾಗಿ ಕೇಳೋದು ನಮ್ಮ ಧರ್ಮ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ಹಣ ಮೀಸಲಿಟ್ಟು ಆಡಳಿತಾತ್ಮಕ ಒಪ್ಪಿಗೆಯನ್ನೂ ನೀಡಲಾಗಿತ್ತು. ಆದರೆ ಸ್ಥಳೀಯ ಶಾಸಕರು ಇದರಲ್ಲಿ ಇತರೆ 10 ಯೋಜನೆ ಸೇರಿಸಿ ಜಾರಿಗೆ ಮುಂದಾಗಿದ್ದಾರೆ. ಅವರು ಸೇರಿಸಿರೋ ಇತರೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದ್ರೆ 144 ಕೋಟಿಯ ಮೂಲ ಯೋಜನೆ ಜಾರಿಯಾಗಬೇಕು. ಇದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಒಳ್ಳೆಯದಾಗುತ್ತೆ. ಜಿಲ್ಲೆಗೆ ಐಐಟಿ ತರೋ ಬಗ್ಗೆ ಪ್ರಧಾನಿ ಮೋದಿಯವರನ್ನ ಭೇಟಿಯಾಗಿ ಮಾತನಾಡುತ್ತೇನೆ ಎಂದು HDD ಹೇಳಿದ್ರು.

Sira By Election ವಾಗ್ದಾನ ಪೂರೈಸಿದ ಮಾಜಿ ಪ್ರಧಾನಿ ದೇವೇಗೌಡ, ಶಾಲೆಗೆ 1 ಲಕ್ಷ ನೆರವು