ರಾಜ್ಯ BJP ನಾಯಕರಿಗೆ ಹೈಕಮಾಂಡ್‌ನಿಂದ ಭರ್ಜರಿ ಸಂಕ್ರಾಂತಿ ಗಿಫ್ಟ್: ಆ ಸ್ಪೆಷಲ್​ ‘ಕಡ್ಡಾಯ’ ಉಡುಗೊರೆ ಏನು ಗೊತ್ತಾ?

ರಾಜ್ಯದಲ್ಲಿ ಪಕ್ಷಕ್ಕಾಗಿ ಹಗಲುರಾತ್ರಿ ಕೆಲಸ ಮಾಡಿದ ಬಿಜೆಪಿ ನಾಯಕರಿಗೆ ಹಾಗೂ ಪದಾಧಿಕಾರಿಗಳಿಗೆ ಹೈಕಮಾಂಡ್‌ನಿಂದ ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ.

ರಾಜ್ಯ BJP ನಾಯಕರಿಗೆ ಹೈಕಮಾಂಡ್‌ನಿಂದ ಭರ್ಜರಿ ಸಂಕ್ರಾಂತಿ ಗಿಫ್ಟ್: ಆ ಸ್ಪೆಷಲ್​ ‘ಕಡ್ಡಾಯ’ ಉಡುಗೊರೆ ಏನು ಗೊತ್ತಾ?
ಗೃಹ ಸಚಿವ ಅಮಿತ್​ ಶಾ
KUSHAL V

|

Dec 26, 2020 | 2:21 PM

ಬೆಂಗಳೂರು: ರಾಜ್ಯದಲ್ಲಿ ಪಕ್ಷಕ್ಕಾಗಿ ಹಗಲುರಾತ್ರಿ ಕೆಲಸ ಮಾಡಿದ ಬಿಜೆಪಿ ನಾಯಕರಿಗೆ ಹಾಗೂ ಪದಾಧಿಕಾರಿಗಳಿಗೆ ಹೈಕಮಾಂಡ್‌ನಿಂದ ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ.

ಹೌದು, ರಾಜ್ಯ ಬಿಜೆಪಿ ಪದಾಧಿಕಾರಿಗಳು ಪಿಕ್‌ನಿಕ್ ಹೋಗಬೇಕು. ಒಂದು ದಿನ ಕಡ್ಡಾಯವಾಗಿ ಪಿಕ್‌ನಿಕ್ ಹೋಗಲೇಬೇಕು. ಸಂಕ್ರಾಂತಿ ಕಳೆದ ಕೂಡಲೇ ಒಂದು ದಿನ ಜಾಲಿ ಟ್ರಿಪ್​ಗೆ ತೆರಳಬೇಕು ಎಂದು ಹೈಕಮಾಂಡ್‌ ಸೂಚಿಸಿದೆ.

ರಾಜ್ಯದ ಯಾವುದಾದರೊಂದು ಸ್ಥಳಕ್ಕೆ ಟ್ರಿಪ್ ಹೋಗಬೇಕು ಎಂದು ಹೇಳಿರುವ ಹೈಕಮಾಂಡ್​ ಜನವರಿ 17ರಂದು ಜಾಲಿ ಟ್ರಿಪ್‌ಗೆ ದಿನಾಂಕ ನಿಗದಿ ಮಾಡಿದೆ. ಜೊತೆಗೆ, ಎಲ್ಲಾ ಪದಾಧಿಕಾರಿಗಳು ಎಲ್ಲಿಗೆ ಟ್ರಿಪ್ ಹೋಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಅಂದ ಹಾಗೆ, ರಾಜ್ಯದ ಎಲ್ಲಾ ಬಿಜೆಪಿ ಮಂಡಲ, ತಾಲೂಕು, ಜಿಲ್ಲಾ ಪದಾಧಿಕಾರಿಗಳು, ಜನವರಿಯಲ್ಲಿ 1 ದಿನ ಕಡ್ಡಾಯ ಟ್ರಿಪ್ ಹೋಗಬೇಕು ಎಂದು ಬಿಜೆಪಿ ಹೈಕಮಾಂಡ್‌ನಿಂದ ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಬಂದಿದೆ. ಜನವರಿ 3ರಂದು ಪಿಕ್‌ನಿಕ್ ತೆರಳುವ ಸ್ಥಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಅಮಿತ್​ ಶಾ ಭೇಟಿಯಿಂದ.. ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು -ಯತ್ನಾಳ್ ಹೊಸ ಬಾಂಬ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada