ಸೋಂಕಿತರ ಜೊತೆ ಕುಳಿತು ಊಟ ಮಾಡಿದ ಶಾಸಕ ರೇಣುಕಾಚಾರ್ಯ

ಸೋಂಕಿತರ ಜೊತೆ ಕುಳಿತು ಊಟ ಮಾಡಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಕೊರೊನಾ ಸೋಂಕು ಅಟ್ಟಹಾಸದಲ್ಲಿರುವಾಗ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲೇ ಇದ್ದು, ಜನರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಎರಡು ಬಾರಿ ಕೊರೊನಾ ವಾರಿಯರ್ಸ್​ಗೆ ಹೋಳಿಗೆ ಊಟ ಹಾಕಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಜೆಪಿ ಶಾಸಕ ರೇಣುಕಾಚಾರ್ಯ ಜನಸೇವೆಯಲ್ಲಿ ತೊಡಗಿದ್ದಾರೆ.

ಧನ್ಯತಾಭಾವದೊಂದಿಗೆ ಅಲ್ಲಿಂದ ಮರಳಿದ ರೇಣುಕಾಚಾರ್ಯ ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೊನ್ನಾಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿದ್ದಾರೆ.

ಅಲ್ಲಿ, ಸೋಂಕಿತರ ಜೊತೆಗೆ ಒಟ್ಟಿಗೇ ಕುಳಿತು, ಊಟ ಮಾಡಿದ್ದಾರೆ ಮಾಜಿ ಸಚಿವ ರೇಣುಕಾಚಾರ್ಯ. ಸೋಂಕಿತರ ಆರೋಗ್ಯ ವಿಚಾರಿಸಿ ಮೂಲಭೂತ ಸೌಲಭ್ಯಗಳ ಬಗ್ಗೆ ವಿಚಾರಿಸಿದ್ದಾರೆ. ಕೊರೊನಾ ಸೋಂಕಿಗೆ ಒಳಗಾದ ಜನ ಹಾಗೂ ಸಿಬ್ಬಂದಿಯ ಆರೋಗ್ಯ ವಿಚಾರಿಸಿ, ಸಾಮಾಜಿಕ ಅಂತರದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಕುಳಿತು ಊಟ ಮಾಡಿ ಧನ್ಯತಾಭಾವದೊಂದಿಗೆ ಅಲ್ಲಿಂದ ಮರಳಿ ಬಂದಿದ್ದಾರೆ.

Click on your DTH Provider to Add TV9 Kannada