ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರನಾ ಸೋಂಕು

  • TV9 Web Team
  • Published On - 1:03 AM, 12 Jul 2020
ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರನಾ ಸೋಂಕು

[lazy-load-videos-and-sticky-control id=”BqqGZvONVl4″]

ಬೆಂಗಳೂರು: ಬಾಲಿವುಡ್‌ ಶೆಹನ್‌ಶಾ ಅಮಿತಾಬ್‌ ಬಚ್ಚನ್‌ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಬಂಧ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದ ಬಿಗ್‌ ಬಿ ತಮಗೆ ಕೊರೋನಾ ಪಾಸಿಟಿವ್‌ ಇರೋದು ಪರೀಕ್ಷೆಯಲ್ಲಿ ದೃಡಪಟ್ಟಿದೆ ಎಂದು ಟ್ವಿಟ್‌ ಮಾಡಿದ್ದಾರೆ. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಬಿಗ್‌ ಬಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೇನೇ ತಮ್ಮ ಜತೆ ಸಂಪರ್ಕಕ್ಕೆ ಬಂದ ಹಿತೈಷಿಗಳು ಮತ್ತ ಸ್ನೇಹಿತರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಅಭಿಷೇಕ್‌ ಬಚ್ಚನ್‌ಗೂ ಕೊರೊನಾ ಸೋಂಕು

ಇಷ್ಟೇ ಅಲ್ಲ ಬಿಗ್‌ ಬಿ ಪುತ್ರ ಅಭಿಷೇಕ್‌ ಬಚ್ಚನ್‌ಗೆ ಕೂಡಾ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಅಭಿಷೇಕ್‌ ಬಚ್ಚನ್‌ ಕೂಡಾ ಟ್ವಿಟ್‌ ಮಾಡಿದ್ದಾರೆ.  ನಾನು ಮತ್ತು ನಮ್ಮ ತಂದೆ ಅಮಿತಾಭ್‌ ಬಚ್ಚನ್‌ ಅವರ ಕೊರೊನಾ ಟೆಸ್ಟ್‌ ಪಾಸಿಟಿವ್‌ ಬಂದಿದೆ. ಈ ಬಗ್ಗೆ ಸಂಬಂಧ ಪಟ್ಟ ಬಿಎಂಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಇವರ ಜೊತೆ ಬಿಗ್‌ ಬಿಯ ಇತರ ಕುಟುಂಬ ಸದಸ್ಯರು, ಮನೆಯ ಮತ್ತು ಕಚೇರಿಯ ಸಿಬ್ಬಂದಿಗೂ ಕೋವಿಡ್‌ ಟೆಸ್ಟ್‌ ಮಾಡಲಾಗಿದ್ದು, ಟೆಸ್ಟ್‌ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.