ನೂತನ ಸಚಿವರ ಒತ್ತಡಕ್ಕೆ ಮಣಿದ BSY ಖಾತೆ ಬದಲಾವಣೆ ಮಾಡಿ ಆದೇಶ: ಅಬಕಾರಿ ಕಹಿ ಮರೆತು, ಸಕ್ಕರೆ ಸವಿದ MTB

ಜೆ.ಸಿ.ಮಾಧುಸ್ವಾಮಿ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ  ಹಜ್ ಮತ್ತು ವಕ್ಫ್​ ಖಾತೆ ನೀಡಲಾಗಿದೆ.  ಅಬಕಾರಿ ಖಾತೆ ನಿರಕಾರಿಸಿದ್ದ ಎಂಟಿಬಿ ನಾಗರಾಜ್​ಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ.

  • TV9 Web Team
  • Published On - 14:13 PM, 22 Jan 2021
ನೂತನ ಸಚಿವರ ಒತ್ತಡಕ್ಕೆ ಮಣಿದ BSY ಖಾತೆ ಬದಲಾವಣೆ ಮಾಡಿ ಆದೇಶ: ಅಬಕಾರಿ ಕಹಿ ಮರೆತು, ಸಕ್ಕರೆ ಸವಿದ MTB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ನೂತನ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿತ್ತು. ಈಗ ಸಚಿವರ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಮಣಿದಿದ್ದಾರೆ. ನೂತನ ಸಚಿವರಾದ ಎಂಟಿಬಿ ನಾಗರಾಜ್​ ಸೇರಿ ಅನೇಕರ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಜೆ.ಸಿ.ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ  ಹಜ್ ಮತ್ತು ವಕ್ಫ್​ ಖಾತೆ ನೀಡಲಾಗಿದೆ.  ಅಬಕಾರಿ ಖಾತೆ ನಿರಕಾರಿಸಿದ್ದ ಎಂಟಿಬಿ ನಾಗರಾಜ್​ಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ.   ಅಸಮಾಧಾನಿತ ಕೆ. ಗೋಪಾಲಯ್ಯಗೆ ಅಬಕಾರಿ ಖಾತೆ ನೀಡಲಾಗಿದೆ.

ಆರ್.ಶಂಕರ್​​ಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಕೆ.ಸಿ.ನಾರಾಯಣಗೌಡಗೆ ಯುವ ಸಬಲೀಕರಣ & ಕ್ರೀಡೆ, KCN​-ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ ಜವಾಬ್ದಾರಿ ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ ಹಂಚಿಕೆ ಮಾಡಲಾಗಿದೆ.

ಪಟ್ಟಿಯಲ್ಲಿ ಸಚಿವರ ಖಾತೆಗಳು ಹೀಗಿವೆ:

1. ಜೆ.ಸಿ.ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ ಇಲಾಖೆ
2. ಜೆ.ಸಿ.ಮಾಧುಸ್ವಾಮಿ -ಹಜ್ ಮತ್ತು ವಕ್ಫ್​ ಖಾತೆ
3. ಎಂಟಿಬಿ ನಾಗರಾಜ್ -ಪೌರಾಡಳಿತ ಮತ್ತು ಸಕ್ಕರೆ ಖಾತೆ
4. ಕೆ.ಗೋಪಾಲಯ್ಯ -ಅಬಕಾರಿ ಖಾತೆ
5. ಆರ್.ಶಂಕರ್ -ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
6. ಕೆ.ಸಿ. ನಾರಾಯಣಗೌಡ -ಯುವ ಸಬಲೀಕರಣ & ಕ್ರೀಡೆ
ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ
7. ಅರವಿಂದ ಲಿಂಬಾವಳಿ -ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ

ಅಬಕಾರಿಯಲ್ಲಿ ಮಾಡೋಕೆ ಏನಿದೆ?: ಚಿಯರ್ಸ್​ ಹೇಳದೆ.. ಅಸಮಾಧಾನದ ಬುಗ್ಗೆ ಚಿಮ್ಮಿಸಿದ MTB ನಾಗರಾಜ್​