ಸಿಖ್ ಯಾತ್ರಾರ್ಥಿಗಳಿದ್ದ ಬಸ್​ಗೆ ರೈಲು ಡಿಕ್ಕಿ, 19 ಮಂದಿ ದುರ್ಮರಣ

  • TV9 Web Team
  • Published On - 18:04 PM, 3 Jul 2020
ಸಿಖ್ ಯಾತ್ರಾರ್ಥಿಗಳಿದ್ದ ಬಸ್​ಗೆ ರೈಲು ಡಿಕ್ಕಿ, 19 ಮಂದಿ ದುರ್ಮರಣ

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಬಸ್​ ಹಾಗೂ ರೈಲು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 19 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪಾಕ್​ನ ಶೇಖುಪುರದಲ್ಲಿ ಸಿಖ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್​ಗೆ ರೈಲು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಅಪಘಾತದಲ್ಲಿ 19 ಮಂದಿ ಮೃತಪಟ್ಟಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾಚಿಯಿಂದ ಲಾಹೋರ್​ಗೆ ರೈಲು ಹೊರಡುತ್ತಿತ್ತು. ಫಾರೂಕಾಬಾದ್ ಸಮೀಪ ಹಳಿ ದಾಟುತ್ತಿದ್ದಾಗ ಬಸ್​ಗೆ ಟೈನ್ ಡಿಕ್ಕಿಯೊಡೆದಿದೆ. ಗುರುದ್ವಾರದಿಂದ ಸಿಖ್ ಯಾತ್ರಿಗಳು ಮರಳುತ್ತಿದ್ದರು ಎನ್ನಲಾಗಿದೆ.