ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ರಾತ್ರಿ ಹೃದಯಾಘಾತದಿಂದ ಸಾವು

ನಗರದ ಸಾರಿಗೆ ಬಸ್​ ಚಾಲಕರಾದ ದತ್ತಾ ನಿನ್ನೆ ಪ್ರತಿಭಟನೆ ಮುಗಿಸಿ ವಡಗಾವಿಯ ಮನೆಗೆ ತೆರಳಿದ್ದರು.

ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ರಾತ್ರಿ ಹೃದಯಾಘಾತದಿಂದ ಸಾವು
ಮೃತ ಚಾಲಕ
Lakshmi Hegde

| Edited By: sadhu srinath

Dec 12, 2020 | 12:23 PM

ಬೆಳಗಾವಿ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ಬಸ್​ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ವಡಗಾವಿಯಲ್ಲಿ ನಡೆದಿದೆ. ದತ್ತಾ ಮಂಡೋಲ್ಕರ್​ (58) ಮೃತರು.

ನಗರದ ಸಾರಿಗೆ ಬಸ್​ ಚಾಲಕರಾದ ದತ್ತಾ ನಿನ್ನೆ ಪ್ರತಿಭಟನೆ ಮುಗಿಸಿ ವಡಗಾವಿಯ ಮನೆಗೆ ತೆರಳಿದ್ದರು. ಆದರೆ ರಾತ್ರಿ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಇನ್ನು ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ನಿನ್ನೆಯಿಂದ ಪ್ರತಿಭಟನೆ ನಡೆಯುತ್ತಿದ್ದು, ಇಂದು ಬೆಂಗಳೂರಿನಲ್ಲಿ ಕುಟುಂಬದವರ ಜತೆಗೇ ಕುಳಿತು ಧರಣಿ ನಡೆಸುತ್ತಿದ್ದಾರೆ.

ರಾತ್ರಿ ಊಟಕ್ಕಾಗಿ ಹಣ ಸಂಗ್ರಹಿಸಲು.. ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಸಾರಿಗೆ ಸಿಬ್ಬಂದಿ

Follow us on

Related Stories

Most Read Stories

Click on your DTH Provider to Add TV9 Kannada