ಸಿಬಿಐ ಅಧಿಕಾರ ವ್ಯಾಪ್ತಿಯನ್ನು ಅನುಮತಿಯಿಲ್ಲದೆ ರಾಜ್ಯಗಳಿಗೆ ವಿಸ್ತರಿಸುವಂತಿಲ್ಲ: ಸುಪ್ರೀಮ್ ಕೋರ್ಟ್ | CBI’s jurisdiction can’t be extended without concerned state’s permission: SC

ಸಿಬಿಐ ಅಧಿಕಾರ ವ್ಯಾಪ್ತಿಯನ್ನು ಅನುಮತಿಯಿಲ್ಲದೆ ರಾಜ್ಯಗಳಿಗೆ ವಿಸ್ತರಿಸುವಂತಿಲ್ಲ: ಸುಪ್ರೀಮ್ ಕೋರ್ಟ್ | CBI's jurisdiction can't be extended without concerned state's permission: SC
ಸುಪ್ರೀಂ ಕೋರ್ಟ್​

ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ಉತ್ತರ ಪ್ರದೇಶದ ಕೆಲ ಅಧಿಕಾರಿಗಳು ಸಲ್ಲಿಸಿರುವ ಮನವಿಯೊಂದರ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, ರಾಜ್ಯಗಳ ಒಪ್ಪಿಗೆಯಿಲ್ಲದೆ ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರ ವ್ಯಾಪ್ರಿಯನ್ನು ಕೇಂದ್ರ ಸರ್ಕಾರ ಯಾವುದೇ ರಾಜ್ಯದಲ್ಲಿ ವಿಸ್ತರಿಸುವಂತಿಲ್ಲ ಎಂದು ಬುಧವಾರದಂದು ತಾನು ಹೊರಡಿಸಿರುವ ಆದೇಶವೊಂದರಲ್ಲಿ ಹೇಳಿದೆ. ಕಾನೂನಿನ ಅನುಗುಣವಾಗಿ ಕೇಂದ್ರವು ಸಿಬಿಐನ ಅಧಿಕಾರ ವ್ಯಾಪ್ತಿಯನ್ನು ಸಂಬಂಧಪಟ್ದ ರಾಜ್ಯದ ಅನುಮತಿಯಿಲ್ಲದೆ ವಿಸ್ತರಿಸುವಂತಿಲ್ಲ. ಈ ಕಾನೂನು ಸಂವೈಧಾನಿಕ ಒಕ್ಕೂಟ ರಚನೆಯ ಭಾಗವಾಗಿದೆ,’’ ಎಂದು ಸರ್ವೋಚ್ಛ ನ್ಯಾಯಲಯವು ರೂಲಿಂಗ್ ನೀಡಿದೆ. ಭಾರತದ ಹಲವು […]

Arun Belly

|

Nov 19, 2020 | 6:26 PM

ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ಉತ್ತರ ಪ್ರದೇಶದ ಕೆಲ ಅಧಿಕಾರಿಗಳು ಸಲ್ಲಿಸಿರುವ ಮನವಿಯೊಂದರ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, ರಾಜ್ಯಗಳ ಒಪ್ಪಿಗೆಯಿಲ್ಲದೆ ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರ ವ್ಯಾಪ್ರಿಯನ್ನು ಕೇಂದ್ರ ಸರ್ಕಾರ ಯಾವುದೇ ರಾಜ್ಯದಲ್ಲಿ ವಿಸ್ತರಿಸುವಂತಿಲ್ಲ ಎಂದು ಬುಧವಾರದಂದು ತಾನು ಹೊರಡಿಸಿರುವ ಆದೇಶವೊಂದರಲ್ಲಿ ಹೇಳಿದೆ.

ಕಾನೂನಿನ ಅನುಗುಣವಾಗಿ ಕೇಂದ್ರವು ಸಿಬಿಐನ ಅಧಿಕಾರ ವ್ಯಾಪ್ತಿಯನ್ನು ಸಂಬಂಧಪಟ್ದ ರಾಜ್ಯದ ಅನುಮತಿಯಿಲ್ಲದೆ ವಿಸ್ತರಿಸುವಂತಿಲ್ಲ. ಈ ಕಾನೂನು ಸಂವೈಧಾನಿಕ ಒಕ್ಕೂಟ ರಚನೆಯ ಭಾಗವಾಗಿದೆ,’’ ಎಂದು ಸರ್ವೋಚ್ಛ ನ್ಯಾಯಲಯವು ರೂಲಿಂಗ್ ನೀಡಿದೆ.

ಭಾರತದ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವುದರಿಂದ ಅಪೆಕ್ಸ್ ಕೋರ್ಟಿನ ಈ ರೂಲಿಂಗ್ ಹೆಚ್ಚಿನ ಮಹತ್ವ ಪಡೆದುಕೊಂಸಿದೆ. ರಾಜಸ್ತಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಛತ್ತೀಸ್​ಗಢ್, ಪಂಜಾಬ್ ಮತ್ತು ಮಿಜೊರಾಂ ರಾಜ್ಯದ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಸಿಬಿಐ ತನಿಖೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿವೆ. ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಎಮ್ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ಸಿಬಿಐಯನ್ನು ನಿಯಂತ್ರಿಸುವ ದೆಹಲಿ ವಿಶೇಷ ಪೊಲೀಸ್ ಸಂಸ್ಥೆಗೆ (ಡಿಎಸ್​ಪಿಈ) ಈ ಆದೇಶವನ್ನು ರೆಫರ್ ಮಾಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಡಿಎಸ್​ಪಿಈ ಹತೋಟಿಯಲ್ಲಿರುವ ಸಂಸ್ಥೆಗಳಿಗೆ (ಸಿಬಿಐ) ಅಧಿಕಾರ ಮತ್ತು ಅಧಿಕಾರ ವ್ಯಾಪ್ತಿಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೆಕ್ಷನ್ 5 ಅನ್ವಯ ವಿಸ್ರಿಸುವ ಅವಕಾಶವಿದೆಯಾದರೂ, ಡಿಎಸ್​ಪಿಈ ಕಾಯ್ದೆ ಸೆಕ್ಷನ್ 6ರ ಅನ್ವಯ, ಸಂಬಂಧಪಟ್ಟ ರಾಜ್ಯದ ಅನುಮತಿಯನ್ನು ಪಡೆಯದೆ ಕೇಂದ್ರ ಸರ್ಕಾರ ಹಾಗೆ ಮಾಡುವಂತಿಲ್ಲ. ಇದು ಈ ಕಾನೂನು ಒಕ್ಕೂಟ ರಚನೆಯ ಸಂವಿಧಾನದ ಭಾಗವೂ ಆಗಿದೆ,’’ ಎಂದು ನ್ಯಾಯಾಲಯವು ರೂಲಿಂಗ್ ನೀಡಿದೆ.

Follow us on

Related Stories

Most Read Stories

Click on your DTH Provider to Add TV9 Kannada