ಯಾವ ಆಧಾರದ ಮೇಲೆ ಆರೋಪ ಮಾಡಿದ್ದೀರಿ? -ಸಂಬರಗಿಗೆ CCB ಪ್ರಶ್ನೆಗಳ ಸುರಿಮಳೆ

  • Updated On - 3:09 pm, Sat, 12 September 20
ಯಾವ ಆಧಾರದ ಮೇಲೆ ಆರೋಪ ಮಾಡಿದ್ದೀರಿ? -ಸಂಬರಗಿಗೆ CCB ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ CCB ಅಧಿಕಾರಿಗಳಿಂದ ಪ್ರಶಾಂತ್ ಸಂಬರಗಿ ವಿಚಾರಣೆ ನಡೆಯುತ್ತಿದೆ. CCB ಕಚೇರಿಯಲ್ಲಿ ಸತತ 2 ಗಂಟೆಗಳಿಂದ ಸಂಬರಗಿ ವಿಚಾರಣೆ ನಡೆಸಲಾಗುತ್ತಿದೆ.

ಪ್ರಶಾಂತ್ ಸಂಬರಗಿ ಯಾರು, ನಿಮ್ಮ ಹುಟ್ಟೂರು ಯಾವುದು? ಪ್ರಶಾಂತ್ ಸಂಬರಗಿ ಮಾಡುತ್ತಿರುವ ಕೆಲಸ ಯಾವುದು? ಸಂಬರಗಿ ಬೆಂಗಳೂರಿಗೆ ಬಂದಿದ್ದು ಯಾವಾಗ ಮತ್ತು ಏಕೆ? ಎಂದು ಹೀಗೆ ಹಲವು ಪ್ರಶ್ನೆಗಳನ್ನ ಕೇಳಿ ಮಾಹಿತಿ ಪಡೆದ ಅಧಿಕಾರಿಗಳು ಬಳಿಕ ಪ್ರಶಾಂತ್ ಸಂಬರಗಿ ತಂದ ದಾಖಲೆಗಳನ್ನು ಸಹ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್​ಸ್ಪೆಕ್ಟರ್ ಸಿರಾಜ್ ದಾಖಲೆ ಪರಿಶೀಲನೆ ಮಾಡಿದ್ದು ACP ಗೌತಮ್‌ರಿಂದ ಪ್ರಶಾಂತ್ ಸಂಬರಗಿ ವಿಚಾರಣೆ ನಡೆಸಲಾಯಿತು.

ಮಾಧ್ಯಮಗಳ ಮುಂದೆ ನೀವು ಹಲವು ಹೇಳಿಕೆ ನೀಡಿದ್ದೀರಿ? ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದೀರೆಂದು ಪ್ರಶ್ನೆ ಮಾಡಿದ್ದಾರಂತೆ. ನೀವು ಮಾತನಾಡಿರುವುದಕ್ಕೆ ದಾಖಲೆಗಳು ಇವೆಯಾ?

ಚಿತ್ರರಂಗದಲ್ಲಿ ಕೆಲವರು ಡ್ರಗ್ಸ್ ಸೇವಿಸುತ್ತಾರೆಂಬ ಆರೋಪ ಮಾಡಿದ್ರೀ. ಯಾವ ಆಧಾರದ ಮೇಲೆ ನೀವು ಆರೋಪ ಮಾಡಿದ್ದೀರಿ? ಎಂದು ಅಧಿಕಾರಿಗಳು ಪ್ರಶಾಂತ್ ಸಂಬರಗಿಗೆ ಪ್ರಶ್ನೆಗಳ ಸುರಮಳೆಗೈದಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ, ಡ್ರಗ್ಸ್ ತೆಗೆದುಕೊಳ್ಳುತ್ತಾರೆಂದು ನಾನು ಹಲವೆಡೆ ಕೇಳಿದ್ದೇನೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆ, ಫೋಟೋಗಳು ಇಲ್ಲ. ನನ್ನ ಬಳಿ ದಾಖಲೆಗಳು, ಫೋಟೋಗಳಿಲ್ಲವೆಂದು ವಿಚಾರಣೆಯ ವೇಳೆ ಪ್ರಶಾಂತ್ ಸಂಬರಗಿ ಉತ್ತರ ಕೊಟ್ಟಿದ್ದಾರಂತೆ. ಆದರೆ, ಕೆಲವು ನಟ, ನಟಿಯರ ಫೋಟೋ ತೋರಿಸಿದ್ದಾರಂತೆ.

ರಾಹುಲ್ ಶೆಟ್ಟಿ ಜತೆ ಪ್ರಶಾಂತ್ ಶೆಟ್ಟಿ ಫೋಟೋ ವಿಚಾರವಾಗಿ ಈ ಬಗ್ಗೆಯೂ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ನಿಮಗೆ ರಾಹುಲ್ ಶೆಟ್ಟಿ ಹೇಗೆ ಪರಿಚಯ ಎಂದು ಒಂದರ ಮೇಲೊಂದು ACP ಗೌತಮ್‌ ಪ್ರಶ್ನೆ ಕೇಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಸಂಜನಾ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ -ವಿಚಾರಣೆ ಬಳಿಕ ಸಂಬರಗಿ ಫಸ್ಟ್​ ರಿಯಾಕ್ಷನ್​

Click on your DTH Provider to Add TV9 Kannada