ಬಸವನಗುಡಿ ಅಪಾರ್ಟ್​ಮೆಂಟ್​ನಲ್ಲಿ ಉಗ್ರ ವೈದ್ಯ ರೆಹಮಾನ್​ನನ್ನ NIA ಹೊಂಚುಹಾಕಿ ಹಿಡಿಯಿತು!

ಬೆಂಗಳೂರು: ಶಂಕಿತ ಉಗ್ರ ಅಬ್ದುರ್ ರೆಹಮಾನ್​ನನ್ನ NIA ಅಧಿಕಾರಿಗಳು ನಿನ್ನೆ ಬಸವನಗುಡಿಯಲ್ಲಿರುವ ಆರೋಪಿಯ ಫ್ಲಾಟ್​ಗೆ ಬಂದು ಆತನ ನಿವಾಸದಲ್ಲಿದ್ದ ಸಂಶಯಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದರು. ಇದರ ಸಿಸಿಟಿವಿ ದೃಶ್ಯಾವಳಿ ಟಿವಿ 9ಗೆ ಲಭ್ಯವಾಗಿದೆ. ಅಬ್ದುರ್ ರೆಹಮಾನ್​ನನ್ನ NIA ತಂಡ ಬಂಧಿಸಿದ್ದು ಹೇಗೆ ಗೊತ್ತಾ? ಕಳೆದ ಕೆಲವು‌ ತಿಂಗಳಿಂದ ರಾಷ್ಟ್ರೀಯ ತನಿಖಾ ದಳದ ತಂಡದವರು ಬಸವನಗುಡಿಯಲ್ಲಿ ಬೀಡು ಬಿಟ್ಟು ಶಂಕಿತ ಉಗ್ರ ಹಾಗೂ ನೇತ್ರ ವೈದ್ಯನಾಗಿದ್ದ ಅಬ್ದುರ್ ರೆಹಮಾನ್​ನ ಮೇಲೆ ಹದ್ದಿನ ಕಣ್ಣಿಟ್ಟು ಆತನ ಚಲನವಲನಗಳನ್ನು ಕಲೆ ಹಾಕಿದ್ದರು. […]

ಬಸವನಗುಡಿ ಅಪಾರ್ಟ್​ಮೆಂಟ್​ನಲ್ಲಿ ಉಗ್ರ ವೈದ್ಯ ರೆಹಮಾನ್​ನನ್ನ NIA ಹೊಂಚುಹಾಕಿ ಹಿಡಿಯಿತು!
KUSHAL V

|

Aug 19, 2020 | 4:53 PM

ಬೆಂಗಳೂರು: ಶಂಕಿತ ಉಗ್ರ ಅಬ್ದುರ್ ರೆಹಮಾನ್​ನನ್ನ NIA ಅಧಿಕಾರಿಗಳು ನಿನ್ನೆ ಬಸವನಗುಡಿಯಲ್ಲಿರುವ ಆರೋಪಿಯ ಫ್ಲಾಟ್​ಗೆ ಬಂದು ಆತನ ನಿವಾಸದಲ್ಲಿದ್ದ ಸಂಶಯಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದರು. ಇದರ ಸಿಸಿಟಿವಿ ದೃಶ್ಯಾವಳಿ ಟಿವಿ 9ಗೆ ಲಭ್ಯವಾಗಿದೆ. ಅಬ್ದುರ್ ರೆಹಮಾನ್​ನನ್ನ NIA ತಂಡ ಬಂಧಿಸಿದ್ದು ಹೇಗೆ ಗೊತ್ತಾ? ಕಳೆದ ಕೆಲವು‌ ತಿಂಗಳಿಂದ ರಾಷ್ಟ್ರೀಯ ತನಿಖಾ ದಳದ ತಂಡದವರು ಬಸವನಗುಡಿಯಲ್ಲಿ ಬೀಡು ಬಿಟ್ಟು ಶಂಕಿತ ಉಗ್ರ ಹಾಗೂ ನೇತ್ರ ವೈದ್ಯನಾಗಿದ್ದ ಅಬ್ದುರ್ ರೆಹಮಾನ್​ನ ಮೇಲೆ ಹದ್ದಿನ ಕಣ್ಣಿಟ್ಟು ಆತನ ಚಲನವಲನಗಳನ್ನು ಕಲೆ ಹಾಕಿದ್ದರು.

ಅಕ್ಕಪಕ್ಕದ ಮನೆಗಳ ಮೂಲಕವೂ ಡಾಕ್ಟರ್ ರೆಹಮಾನ್​ಗಾಗಿ ‘ಅಪರೇಶನ್’ ಜೊತೆಗೆ, ಮೂರು ದಿನಗಳ ಹಿಂದೆ ಅಕ್ಕಪಕ್ಕದ ಅಪಾರ್ಟ್​ಮೆಂಟ್​ಗಳ ಸಿಸಿಟಿವಿ ದೃಶ್ಯಾವಳಿಗಳನ್ನ ಕಲೆಹಾಕಿದ್ದ ಅಧಿಕಾರಿಗಳು ಶಂಕಿತ ಉಗ್ರನ ಪಿನ್ ಟು ಪಿನ್ ಮಾಹಿತಿಯನ್ನ ಕಲೆಹಾಕಿದ ಬಳಿಕ ಕಾರ್ಯಾಚರಣೆಗೆ ಇಳಿದರು.

ಆತ ಮನೆಯಲ್ಲಿರೋದನ್ನ ಖಚಿತ ಪಡಿಸಿಕೊಂಡು ದಾಳಿ ನಡೆಸಿದ NIA ತಂಡ ಸ್ಥಳೀಯ ಪೊಲೀಸರು, ಗುಪ್ತಚರ ಇಲಾಖೆ ಹಾಗೂ ಕರ್ನಾಟಕದ ISD ಅಧಿಕಾರಿಗಳೊಂದಿಗೆ ಸೇರಿ ಕಾರ್ಯಾಚರಣೆಗೆ ಇಳಿದರು. 8 ಜನರ NIA ಟೀಂ ಶಂಕಿತ ಉಗ್ರನ ಮನೆಗೆ ಮಧ್ಯಾಹ್ನ 01:30ಕ್ಕೆ ಎಂಟ್ರಿ ಕೊಟ್ಟಿತು. ಆಗ, ಹೊರಗಡೆ ಬಸವನಗುಡಿ ‌ಪೊಲೀಸರು ಬಿಗಿ ಭದ್ರತೆ ಹಾಕಿದ್ದರು. ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ NIA ತಂಡ ಸಂಶಯಾಸ್ಪದ ವಸ್ತುಗಳನ್ನ ವಶಕ್ಕೆ ಪಡೆದ ಬಳಿಕ ಅಬ್ದುರ್ ರಹಮಾನ್​ನನ್ನು ಬಂಧಿಸಿ ದೆಹಲಿಗೆ ಕರೆದೊಯ್ದರು.

ಇದೀಗ, ರೆಹಮಾನ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ರೆಹಮಾನ್​ ವಿಧ್ವಂಸಕ ಕೃತ್ಯಕ್ಕೆ ಸಹಕಾರಿಯಾಗುವ ಅಪ್ಲಿಕೇಷನ್ ಸಿದ್ಧಪಡಿಸುತ್ತಿದ್ದನು ಎಂದು ತಿಳಿದುಬಂದಿದೆ. ತನ್ನ ಬಸವನಗುಡಿ ಫ್ಲ್ಯಾಟ್​ನಲ್ಲಿ ಕೋಡಿಂಗ್​ ಕೆಲಸ ಮಾಡುತ್ತಿದ್ದ ಅಬ್ದುರ್ ರಹಮಾನ್​ಗೆ ಮೂವರು ಸ್ನೇಹಿತರು ನೆರವಾಗುತ್ತಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಭರ್ಜರಿ ಬೇಟೆ: ಬಸವನಗುಡಿಯಲ್ಲಿ ಶಂಕಿತ ಉಗ್ರನ ಅರೆಸ್ಟ್, ದೆಹಲಿ ಕೋರ್ಟ್ ಮೂಲಕ NIA ವಶಕ್ಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada