ಧಾರವಾಡ: ಸಿಮೆಂಟ್ ಮಿಕ್ಸರ್ ಲಾರಿ ನುಗ್ಗಿ 2 ಮನೆಗಳು ಸಂಪೂರ್ಣ ಜಖಂ ಆಗಿರುವ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.
ಕಲಬುರಗಿಯಿಂದ ಕುಂದಾಪುರಕ್ಕೆ ಹೊರಟಿದ್ದ ಟ್ಯಾಂಕರ್, ರಸ್ತೆ ಬದಿಯಲ್ಲಿದ್ದ ಹೆಬಸೂರ್ ಮತ್ತು ತೋಟದ್ ಎನ್ನುವವರ ಮನೆಗಳಿಗೆ ನುಗ್ಗಿದ್ದು, ತಕ್ಷಣ ಪ್ರಾಣ ಉಳಿಸಿಕೊಳ್ಳಲು ನಿವಾಸಿಗಳು ಹೊರಗೆ ಓಡಿ ಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಾಹನದ ಮುಂಭಾಗದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸದ್ಯ ಈ ಸಂಬಂಧ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮತ್ತು ಲಾರಿ ಜಖಂ
ಯಮರೂಪದಲ್ಲಿ ಬಂದ ಸರ್ಪ.. ವ್ಯರ್ಥವಾಯ್ತು ಅಮ್ಮನ ಹೋರಾಟ; ಉಳಿಯಲೇ ಇಲ್ಲ ನಾಲ್ಕು ಜೀವಗಳು