ವಾಟ್ಸ್​ಆ್ಯಪ್ ವೆಬ್​ ಬಳಕೆ ಮಾಡುತ್ತಿದ್ದೀರಾ? ನಿಮ್ಮ ಚಾಟ್​ ಲೀಕ್​ ಆಗಬಹುದು ಎಚ್ಚರ!

ವಾಟ್ಸಾಪ್​ ವೆಬ್​ನಿಂದ ಕೆಲ ಚ್ಯಾಟ್​ಗಳು ಲೀಕ್​ ಆಗಿರುವ ಬಗ್ಗೆ ವರದಿ ಆಗಿದೆ. ವೆಬ್​ನಲ್ಲಿರುವ ಸಮಸ್ಯೆಯಿಂದ ಈ ಸೋರಿಕೆ ಉಂಟಾಗಿದೆ. ಕೇವಲ ಒಂದು ಸರ್ಚ್​ನಿಂದ ಖಾಸಗಿ ಚ್ಯಾಟ್​ಗಳು ಸಾರ್ವಜನಿಕರಿಗೆ ಸಿಗುವಂತಾಗಿದೆ.

  • TV9 Web Team
  • Published On - 16:47 PM, 17 Jan 2021
ವಾಟ್ಸ್​ಆ್ಯಪ್ ವೆಬ್​ ಬಳಕೆ ಮಾಡುತ್ತಿದ್ದೀರಾ? ನಿಮ್ಮ ಚಾಟ್​ ಲೀಕ್​ ಆಗಬಹುದು ಎಚ್ಚರ!
ಸಾಂದರ್ಭಿಕ ಚಿತ್ರ

ವಾಟ್ಸ್​ಆ್ಯಪ್​​ ತನ್ನ ಪಾಲಿಸಿಯನ್ನು ಬದಲಾಯಿಸಿದ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಸಂಸ್ಥೆ ಯಾವುದೇ ಕಾರಣ ವೈಯಕ್ತಿಕ ಚ್ಯಾಟ್​ಗಳು ಸೋರಿಕೆ ಆಗುವುದಿಲ್ಲ ಎಂದು ಹೇಳಿತ್ತು. ಹೀಗಿರುವಾಗಲೇ ಗೂಗಲ್​ನಲ್ಲಿ ವಾಟ್ಸ್​ಆ್ಯಪ್ ಚಾಟ್​ ಸೋರಿಕೆ ಆಗಿರುವ ವಿಚಾರ ಬಯಲಾಗಿದೆ.

ವಾಟ್ಸ್​ಆ್ಯಪ್​ ವೆಬ್​ನಿಂದ ಕೆಲ ಚಾಟ್​ಗಳು ಲೀಕ್​ ಆಗಿರುವ ಬಗ್ಗೆ ವರದಿ ಆಗಿದೆ. ವೆಬ್​ನಲ್ಲಿರುವ ಸಮಸ್ಯೆಯಿಂದ ಈ ಸೋರಿಕೆ ಉಂಟಾಗಿದೆ. ಕೇವಲ ಒಂದು ಸರ್ಚ್​ನಿಂದ ಖಾಸಗಿ ಚ್ಯಾಟ್​ಗಳು ಸಾರ್ವಜನಿಕರಿಗೆ ಸಿಗುವಂತಾಗಿದೆ. ಇದು ವಾಟ್ಸ್​ಆ್ಯಪ್ ಭದ್ರತೆ ಬಗ್ಗೆ ಪ್ರಶ್ನೆ ಮಾಡಿದೆ.

ಒಂದು ಗೂಗಲ್​ ಸರ್ಚ್​​ನಿಂದ ವಾಟ್ಸ್​ಆ್ಯಪ್​ ಚಾಟ್ ಹಾಗೂ ಕಾಂಟ್ಯಾಕ್ಟ್​ಗಳು ಲಭ್ಯವಾಗುತ್ತಿದೆ. ಸೈಬರ್​ ಕಳ್ಳರು ಈ ಮಾಹಿತಿ ಬಳಕೆ ಮಾಡಿಕೊಂಡು ಸುಲಭವಾಗಿ ಫಿಶಿಂಗ್​ ನಡೆಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನು, ಈ ಬಗ್ಗೆ ವಾಟ್ಸ್​ಆ್ಯಪ್ ವೆಬ್​ನಲ್ಲಿ ಕಾಣಿಸಿಕೊಂಡಿರುವ ಈ ಸಮಸ್ಯೆ ಬಗ್ಗೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಮಸ್ಯೆ ಶೀಘ್ರವೇ ಪರಿಹಾರ ಆಗದಿದ್ದರೆ ಮತ್ತಷ್ಟು ಚಾಟ್​ಗಳು ಲೀಕ್​ ಆಗುವ ಭಯ ಕಾಡಿದೆ.

ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್‌ ಆ್ಯಪ್​ಗಿಂತ ಸುಧಾರಿತವಾದ ಆ್ಯಪ್​ ಬಳಸ್ತಿದ್ದಾರೆ ಉಗ್ರರು; IP ವಿಳಾಸವೂ ಇರುವುದಿಲ್ಲ! NIA ತನಿಖೆಯಿಂದ ಬಹಿರಂಗ