ಇಬ್ಬರ ಹೆಂಡಿರ ಮುದ್ದಿನ ಗಂಡ!

ಈಗಿನ ಕಾಲದಲ್ಲಿ ಒಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸುವುದೇ ದುರ್ಭರವಾಗಿದ್ದಾಗ ಈ ಮಹಾಶಯ ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸಿ ಒಂದೇ ಮಂಟಪದಡಿ ಶಾಸ್ತ್ರೋಕ್ತವಾಗಿ ಮದುವೆಯನ್ನೂ ಆಗಿದ್ದಾನೆ. ಗ್ರಾಮಸ್ಥರ ಉಪಸ್ಥಿತಿಯಲ್ಲಿ, ಪೋಷಕರ ಅನುಪಸ್ಥಿತಿಯಲ್ಲಿ ಈ ಮದುವೆ ಸಾವಧಾನದಿಂದ ನೆರವೇರಿದೆ.

  • TV9 Web Team
  • Published On - 17:08 PM, 8 Jan 2021
ಇಬ್ಬರ ಹೆಂಡಿರ ಮುದ್ದಿನ ಗಂಡ!
ಮದುವೆಯ ದೃಶ್ಯ

ಛತ್ತೀಸಗಡ: ಈಗಿನ ಕಾಲದಲ್ಲಿ ಒಬ್ಬರನ್ನು ಮದುವೆಯಾಗಿ ಸಂಸಾರ ಸಾಗಿಸುವುದೇ ದುರ್ಭರವಾಗಿದ್ದಾಗ ಈ ಮಹಾಶಯ ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸಿ ಮದುವೆಯೂ ಆಗಿದ್ದಾನೆ!

ಈ ಅಪರೂಪದ ಮದುವೆ ಛತ್ತೀಸಗಡದ ಬಸ್ತಾರ್ ಗ್ರಾಮವೊಂದರಲ್ಲಿ ಜ. 3ರಂದು ನಡೆದಿದೆ. ಸಮಾಜವು ಹುಬ್ಬೇರಿಸಿ ನೋಡುವ ಸಂಗತಿ ಇದಾದರೂ, ಪ್ರೀತಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಗ್ರಹಿಸಬಹುದೆ?

ಹಸೀನಾ ಮತ್ತು ಸುಂದರಿ ಎಂಬ ಸ್ನೇಹಿತರಿಬ್ಬರೂ ಚಂದು ಮೌರ್ಯ ಎಂಬುವವನನ್ನು ಪ್ರೀತಿಸಿ ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ಹಸೀನಾಗೆ 19 ವರ್ಷ, ಸುಂದರಿಗೆ 21 ವರ್ಷ. ಇಬ್ಬರೂ 12 ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ‘ನಾನು ಅವರಿಬ್ಬರನ್ನೂ ಇಷ್ಟಪಡುತ್ತಿದ್ದೆ ಮತ್ತು ಅವರು ಕೂಡ ನನ್ನನ್ನು ಇಷ್ಟಪಡುತ್ತಿದ್ದರು. ನಾವು ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿಯೇ ಒಮ್ಮತದಿಂದ ವಿವಾಹವಾದೆವು. ಆದಾಗ್ಯೂ, ನನ್ನ ಹೆಂಡತಿಯರ ಕುಟುಂಬ ಸದಸ್ಯರು ನಮ್ಮ ವಿವಾಹಕಾರ್ಯಕ್ಕೆ ಬರಲಿಲ್ಲ’ ಎಂದು ಚಂದು ಬೇಸರಿಸಿದ್ದಾನೆ.

ಗ್ರಾಮಸ್ಥರೆಲ್ಲರೂ ಪಾಲ್ಗೊಂಡಿದ್ದ ಮದುವೆ ಸುಗಮವಾಗಿ ನಡೆದಿದೆ ಎನ್ನುವುದೇ ವಿಶೇಷ. ಬಸ್ತಾರ್ ಗ್ರಾಮದಲ್ಲಿ ಮೊದಲ ಸಲ ಇಂಥ ಮದುವೆ ಅದ್ದೂರಿಯಾಗಿ ಜರುಗಿದ್ದು ವಿಶೇಷವಾಗಿದೆ. ಆದರೆ ಹಿಂದೂ ವಿವಾಹ ಕಾಯ್ದೆಯಡಿ ಈ ಮದುವೆ ಅಪರಾಧ. ಆದರೆ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಸದ್ಯಕ್ಕಂತೂ ಇವರ ಮದುವೆಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.