ಪಿಂಚಣಿ ತಲುಪಿಸಲು ಮಹತ್ವದ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ

ನವೋದಯ ಆ್ಯಪ್ ಮತ್ತು ತಂತ್ರಾಂಶವನ್ನು ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು

  • TV9 Web Team
  • Published On - 14:52 PM, 27 Jan 2021
ಪಿಂಚಣಿ ತಲುಪಿಸಲು ಮಹತ್ವದ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸಿಗದ ಹಿನ್ನೆಲೆ ಮನೆ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.

ಫಲಾನುಭವಿಗಳ ಮನೆಗೆ ಪಿಂಚಣಿ ತಲುಪಿಸುವ ಸೌಲಭ್ಯವನ್ನು ಒದಗಿಸಲು ‘ಮನೆ ಬಾಗಿಲಿಗೆ ಮಾಸಾಶನ’ ಎಂಬ ನೂತನ ಅಭಿಯಾನಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಚಾಲನೆ ನೀಡಿ, ನವೋದಯ ಆ್ಯಪ್ ಮತ್ತು ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಭಾಗಿಯಾಗಿದ್ದರು.

ವೃದ್ಧಾಪ್ಯ ವರ್ಗಕ್ಕೆ ಮಾತ್ರ ಅನ್ವಯ
ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಯೋಜನೆಗಳು ಜನರಿಗೆ ಸಿಗಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಕೂಡ. ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ತುಂಬಾ ಕಷ್ಟ ಪಡುತ್ತಿದ್ದರು. ಈ ಸಮಸ್ಯೆಯನ್ನು ತಪ್ಪಿಸಲು ಸರ್ಕಾರ ಮಹತ್ವದ ಯೋಜನೆ ಜಾರಿ ಮಾಡಿದೆ. ಪಿಂಚಣಿಗಾಗಿ ಜನರು ಸರ್ಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳ ಬಳಿ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಇದೆಲ್ಲವನ್ನೂ ತಪ್ಪಿಸಲು ಈ  ಯೋಜನೆ ತುಂಬಾ ಸಹಕಾರಿಯಾಗಲಿದೆ. ಸದ್ಯ ಈ ಯೋಜನೆ ವೃದ್ಧಾಪ್ಯ ವರ್ಗಕ್ಕೆ ಮಾತ್ರ ಅನ್ವಯ ಆಗಲಿದ್ದು, ಮುಂದಿನ ದಿನಗಳಲ್ಲಿ ಇದು ಅಂಗವಿಕರು ಮತ್ತು ವಿಧವಾ ವೇತನಕ್ಕೂ ಅನ್ವಯ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಪಿಂಚಣಿ ಹಣ, ಹಳ್ಳಿಕಟ್ಟೆಯಲ್ಲಿ ಡಿಸಿ ಭಾಗಿ: ಸಚಿವ ಆರ್.ಅಶೋಕ್