ಮಂತ್ರಿಗಿರಿ ಬಿಡಲು ನಾಗೇಶ್‌ ಹಿಂದೇಟು; ನಾನು ಮಾಡಿದ ತಪ್ಪಾದರೂ ಏನು ಎಂದು ಸಿಎಂ ಯಡಿಯೂರಪ್ಪಗೆ ನೇರ ಪ್ರಶ್ನೆ..

ನಾನು ಮಾಡಿದ ತಪ್ಪೇನು ಎಂದು ಸಿಎಂ ಅವರನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆ ಮಾಡಿರುವ ಹೆಚ್.ನಾಗೇಶ್, 3 ವರ್ಷ ನೀನು ಮಂತ್ರಿ ಆಗ್ತೀಯಾ ಅಂತ ಹೇಳಿದ್ರಿ. ನೀವು ಕೊಟ್ಟ ಮಾತು ಏನಾಯ್ತು ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ.

  • TV9 Web Team
  • Published On - 13:26 PM, 13 Jan 2021
ಮಂತ್ರಿಗಿರಿ ಬಿಡಲು ನಾಗೇಶ್‌ ಹಿಂದೇಟು; ನಾನು ಮಾಡಿದ ತಪ್ಪಾದರೂ ಏನು ಎಂದು ಸಿಎಂ ಯಡಿಯೂರಪ್ಪಗೆ ನೇರ ಪ್ರಶ್ನೆ..
ಹೆಚ್.ನಾಗೇಶ್‌

ಬೆಂಗಳೂರು: ಅಬಕಾರಿ ಸಚಿವ ಹೆಚ್.ನಾಗೇಶ್‌ಗೆ ರಾಜೀನಾಮೆ ನೀಡಲು ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದು, ಸಿಎಂ ಅವರ ಈ ನಿರ್ಧಾರಕ್ಕೆ ಹೆಚ್.ನಾಗೇಶ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ನಾನು ಮಾಡಿದ ತಪ್ಪೇನು ಎಂದು ಸಿಎಂ ಅವರನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆ ಮಾಡಿರುವ ಹೆಚ್.ನಾಗೇಶ್, 3 ವರ್ಷ ನೀನು ಮಂತ್ರಿ ಆಗ್ತೀಯಾ ಅಂತ ಹೇಳಿದ್ರಿ. ನೀವು ಕೊಟ್ಟ ಮಾತು ಏನಾಯ್ತು ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ.

ಈ ಸರ್ಕಾರ ಬರಲು ನಾನೇ ಕಾರಣ. ಮೊದಲು ರಾಜೀನಾಮೆ ಕೊಟ್ಟಿದ್ದು ನಾನು. ನಿಮ್ಮ ಪರ ಸದಾ ಇದ್ದವನು ನಾನು. ಹೀಗಾಗಿ ನನಗೆ ಹೀಗೆ ಮಾಡಿದ್ದು ಸರಿಯಲ್ಲ ಎಂದು ತಮ್ಮ ರಾಜೀನಾಮೆ ವಿಚಾರದ ಬಗ್ಗೆ ಸಿಎಂ ವಿರುದ್ದ ನಾಗೇಶ್ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಸಚಿವ ಸ್ಥಾನ ತ್ಯಜಿಸಲು ನಾಗೇಶ್​ಗೆ ಸೂಚನೆ; ರಾಜೀನಾಮೆ ಕೊಡೊಲ್ಲ ಎಂದು ಬಿಗಿಪಟ್ಟು ಹಿಡಿದಿರುವ ಅಬಕಾರಿ ಸಚಿವ! ಮುಂದೇನು?