ಉಡುಪಿ: ರಾಜಕೀಯ ಜಂಜಾಟದ ಮಧ್ಯೆ ಕರಾವಳಿ ಪ್ರವಾಸ ಮಾಡ್ತಿದ್ದೇನೆ. 3 ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿ B.S.ಯಡಿಯೂರಪ್ಪ ಹೇಳಿದರು.
ಸಮಾಧಾನ, ನೆಮ್ಮದಿ, ತೃಪ್ತಿಯಿದ್ದರೆ ಮಾತ್ರ ಸುಗಮ ಆಡಳಿತ ಸಾಧ್ಯ. ಕರಂಬಳ್ಳಿ ವೆಂಕಟರಮಣ ಕ್ಷೇತ್ರಕ್ಕೆ 4 ಕೋಟಿ ನೀಡುತ್ತೇವೆ. ಇನ್ನೊಂದು ವಾರದಲ್ಲಿ 4 ಕೋಟಿ ಹಣ ಬಿಡುಗಡೆ ಮಾಡುವೆ ಎಂದು ಕರಂಬಳ್ಳಿ ದೇವಸ್ಥಾನದಲ್ಲಿ ಸಿಎಂ BSY ಹೇಳಿದರು.
ಈ ಮುಂಚೆ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಸಿಎಂ ಚಾಲನೆ ನೀಡಿದರು. ಕರಂಬಳ್ಳಿಯಲ್ಲಿ ಗೋಪೂಜೆ ನಡೆಸುವ ಮೂಲಕ ಸಿಎಂ ಚಾಲನೆ ನೀಡಿದರು.
ಕರ್ನಾಟಕದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಐತಿಹಾಸಿಕ ನಿರ್ಣಯ ಎಂದು ಮುಖ್ಯಮಂತ್ರಿ B.S.ಯಡಿಯೂರಪ್ಪ ಹೇಳಿದರು. ಇನ್ನು ಮುಂದೆ ರಾಜ್ಯದಲ್ಲಿ ಗೋಹತ್ಯೆ ಮಾಡಲು ಅವಕಾಶವಿಲ್ಲ. ರಾಜ್ಯದ ಜನರ ಅಪೇಕ್ಷೆಯಂತೆ ಗೋಹತ್ಯೆ ನಿಷೇಧ ಜಾರಿಯಾಗಿದೆ. ಇಂದಿನಿಂದ ರಾಜ್ಯದಲ್ಲಿ ಎಲ್ಲೂ ಗೋಹತ್ಯೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ B.S.ಯಡಿಯೂರಪ್ಪ ಹೇಳಿದರು.
ಬಳಿಕ ಜಿಲ್ಲೆಯ ಶ್ರೀಕೃಷ್ಣ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿಕೊಟ್ಟು ವಿಶ್ವಪಥ ಕ್ಯೂ ಕಾಂಪ್ಲೆಕ್ಸ್ ಕಟ್ಟಡ ಉದ್ಘಾಟಿಸಿದರು. ನಂತರ, ಪಱಯ ಅದಮಾರು ಮಠಾಧೀಶರು ಮತ್ತು ಇತರ ಅಷ್ಟಮಠಾಧೀಶರ ಜೊತೆ ಮಾತುಕತೆ ನಡೆಸಿದರು. ಈ ವೇಳೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಭಾಗಿಯಾದರು.
ಅಂದ ಹಾಗೆ, ನಾಳೆ ಸಿಎಂ ಯಡಿಯೂರಪ್ಪ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡಕ್ಕೆ ಭೇಟಿ ನೀಡಲಿದ್ದಾರೆ. ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡೆಗೆ ಸಿಎಂ ಭೇಟಿಕೊಡುತ್ತಿದ್ದಾರೆ.
ಸಿಎಂ ಯಡಿಯೂರಪ್ಪನವರ ಆಪ್ತ ಹಾಗೂ ಹಾಸನದವರಾದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದಿಂದ ದೇವಸ್ಥಾನದಲ್ಲಿ ಯಾಗ ನಡೆಯಲಿದೆ. ಮೂಲತಃ ಕುಂದಾಪುರದ ಗೋಪಾಡಿಯ ನಿವಾಸಿಯಾದ ರಾಘವೇಂದ್ರ ರಾವ್ ಸಹಸ್ರ ನಾರಿಕೇಳ ಗಣಯಾಗ ನಡೆಸಲಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ 1,008 ಗಣಯಾಗ ನಡೆಸಲಿದ್ದಾರೆ.
ಅಂದ ಹಾಗೆ, ರಾಘವೇಂದ್ರ ರಾವ್ 5 ವರ್ಷದ ಹಿಂದೆ ಸಹ ಗಣಹೋಮ ನಡೆಸಿದ್ದರು. ಈ ವೇಳೆ, ಸಹ ಯಾಗದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಹಾಗಾಗಿ, ನಾಳೆ ಯಾಗದಲ್ಲಿ ಭಾಗವಹಿಸಿ ಸಿಎಂ ಯಡಿಯೂರಪ್ಪ ದೇವರ ದರ್ಶನ ಪಡೆಯಲಿದ್ದಾರೆ.