ಸಿಎಂ B.S.ಯಡಿಯೂರಪ್ಪಗೆ ಹೈಕಮಾಂಡ್​ ಬುಲಾವ್: ಸಂಪುಟ ವಿಸ್ತರಣೆಗೆ ಕೂಡಿ ಬಂತಾ ಕಾಲ?

ಸಿಎಂ B.S.ಯಡಿಯೂರಪ್ಪಗೆ ಹೈಕಮಾಂಡ್​ ಬುಲಾವ್: ಸಂಪುಟ ವಿಸ್ತರಣೆಗೆ ಕೂಡಿ ಬಂತಾ ಕಾಲ?
ಸಿಎಂ B.S.ಯಡಿಯೂರಪ್ಪ

ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್​ ಬುಲಾವ್​ ನೀಡಿದೆ. ಹಾಗಾಗಿ, ಸಿಎಂ B.S.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

KUSHAL V

|

Jan 09, 2021 | 8:12 PM

ದೆಹಲಿ: ಸಿಎಂ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್​ ಬುಲಾವ್​ ನೀಡಿದೆ. ಹಾಗಾಗಿ, ಸಿಎಂ B.S.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ದೆಹಲಿ ತಲುಪಲಿರುವ ಬಿಎಸ್​ವೈ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಬಹುದು ಎಂದು ಹೇಳಲಾಗಿದೆ. ಅಮಿತ್​ ಶಾ ಬುಲಾವ್​ ಹಿನ್ನೆಲೆ ದೆಹಲಿಗೆ ತೆರಳ್ತಿರುವ ಸಿಎಂ ನಾಳೆ ಬೆಳಗ್ಗೆ 8.20ಕ್ಕೆ ನವದೆಹಲಿಗೆ ತೆರಳಲಿದ್ದು ಬಸವಕಲ್ಯಾಣ, ಬೆಳಗಾವಿ ಉಪಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರಂತೆ.

ಜೊತೆಗೆ, ಸಂಪುಟ ವಿಸ್ತರಣೆ ವಿಚಾರವಾಗಿಯೂ ಚರ್ಚಿಸಲಿರುವ ಸಿಎಂ ಮುಂದಿನ ವಾರದಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆ ಹಾಗೂ ಬಸವಕಲ್ಯಾಣ ವಿಧಾನಸಭೆ ಬೈಎಲೆಕ್ಷನ್ ಘೋಷಣೆ ನಿರೀಕ್ಷೆ ಇದೆ. ಹಾಗಾಗಿ, ಚುನಾವಣೆ ಘೋಷಣೆಗೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂದು ಅಮಿತ್ ಶಾಗೆ ಮಾಹಿತಿ ನೀಡಬಹುದು ಎಂದು ಹೇಳಲಾಗಿದೆ.

‘ನಿರೀಕ್ಷೆಯಂತೆ ನಾವು ಯಾವುದೇ ಕೆಲಸವನ್ನೂ ಮಾಡಿಲ್ಲ’ ಇತ್ತ, ವರಿಷ್ಠರು ಯಾವಾಗ ಹೇಳುತ್ತಾರೋ ಅಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಇಂದು ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಸಿಎಂ ಬಿಎಸ್​ವೈ ಹೇಳಿದ್ದರು. ಜಿಲ್ಲೆಯಲ್ಲಿ ಟಾಯ್ಸ್ ಕ್ಲಸ್ಟರ್​ಗೆ ಭೂಮಿ ಪೂಜೆ ಮಾಡಿ, ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಮುಖ್ಯಮಂತ್ರಿ ಮಾತನಾಡಿದರು.

ನಿರೀಕ್ಷೆಯಂತೆ ನಾವು ಯಾವುದೇ ಕೆಲಸವನ್ನೂ ಮಾಡಿಲ್ಲ. ಕೊವಿಡ್​, ಅತಿವೃಷ್ಟಿ, ಬರಗಾಲದಿಂದ ಕೆಲಸ ಮಾಡಲಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲದಿದ್ದಕ್ಕೆ ಕೆಲಸ ಮಾಡಲಾಗಿಲ್ಲ ಎಂದು ಬಸಾಪುರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಂಪುಟ ವಿಸ್ತರಣೆಗೂ, ಅಮಿತ್‌ ಶಾ ಭೇಟಿಗೂ ಸಂಬಂಧವಿಲ್ಲ -ಸಿ.ಟಿ.ರವಿ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada