ತೋಟದಲ್ಲಿ ಹೂ ಕಿತ್ತಿದ್ದಕ್ಕೆ ಮಕ್ಕಳಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡೋದಾ? ಛೇ!

  • Publish Date - 6:43 pm, Sat, 5 September 20
ತೋಟದಲ್ಲಿ ಹೂ ಕಿತ್ತಿದ್ದಕ್ಕೆ ಮಕ್ಕಳಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡೋದಾ? ಛೇ!

ಕೋಲಾರ: ತೋಟದಲ್ಲಿ ಹೂ ಕಿತ್ತಿದ್ದಾರೆಂದು ಇಬ್ಬರು ಮಕ್ಕಳನ್ನ ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ಸೀಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣಾರೆಡ್ಡಿಯವರ ಮಗ ನವೀನ್ ಹಾಗೂ ರಾಜು ಎಂಬ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ.

ಮಕ್ಕಳನ್ನು ಮರಕ್ಕೆ ಕಟ್ಟಿ ವೈಯರ್​ನಲ್ಲಿ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವ ತೋಟದ ಮಾಲಿಕ ಪ್ರಕಾಶ್ 3 ಸೇವಂತಿ ಹೂ ಕಿತ್ತಿದ್ದಕ್ಕೆ ಅಮಾನವೀಯವಾಗಿ ಮಕ್ಕಳಿಗೆ ಬಾರಿಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಮಕ್ಕಳಿಗೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Click on your DTH Provider to Add TV9 Kannada