ಟಿ20 ಕ್ರಿಕೆಟ್ ಅನಭಿಷಿಕ್ತ ದೊರೆ ಯಾರಂತ ನಿಮಗೆ ಗೊತ್ತಲ್ಲ. ಜಮೈಕಾದ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅಪರೂಪಕ್ಕೆ ತನ್ನ ತವರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಟಿ20 ಕ್ರಿಕೆಟ್ನಂತೆ ವಿಶ್ವದ ಹಲವು ಭಾಗಗಲ್ಲಿ ನಡೆಯುವ ಟಿ10 ಟೂರ್ನಿಗಳಲ್ಲೂ ಕ್ರಿಸ್ ಗೇಲ್ ಪಾಲ್ಗೊಳ್ಳುತ್ತಾರೆ. ಜನೆವರಿ 28 ರಿಂದ ಫೆಬ್ರುವರಿ 6ರವರೆಗೆ ಅಬು ಧಾಬಿಯಲ್ಲಿ ನಡೆಯಲಿರುವ ಟಿ10 ಲೀಗ್ನಲ್ಲಿ ಗೇಲ್ ಟೀಮ್ ಅಬು ಧಾಬಿಗೆ ಆಡಲಿದ್ದಾರೆ. ಟಿ10 ಕ್ರಿಕೆಟ್ ಕುರಿತು ಉತ್ಸುಕತೆಯಿಂದ ಮಾತಾಡುವ ಗೇಲ್ ಅದನ್ನು ಒಲಂಪಿಕ್ಸ್ನಲ್ಲಿ ಸೇರಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ.
‘ಸದ್ಯಕ್ಕೆ ನಾನು ದೇಹಕ್ಕೆ ಅತ್ಯಂತ ಅವಶ್ಯಕವಾಗಿದ್ದ ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ. ಆದರೆ ತಲೆಯಲ್ಲಿ ಅಬು ಧಾಬಿಯಲ್ಲಿ ನಡೆಯಲಿರುವ ಟಿ20 ಲೀಗ್ ಬಗ್ಗೆ ಯೋಚನೆ ತುಂಬಿಕೊಂಡಿದೆ. ಇಷ್ಟರಲ್ಲೇ ಟ್ರೇನಿಂಗ್ ಶುರುಮಾಡಿ ಟೂರ್ನಮೆಂಟ್ಗೆ ತಯಾರಾಗುತ್ತೇನೆ. ಕೈರನ್ ಪೊಲ್ಲಾರ್ಡ್ ಸೇರಿದಂತೆ ಹಲವಾರು ಪ್ರತಿಭಾವಂತ ಅಂತರರಾಷ್ಟ್ರೀಯ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ,’ ಎಂದು ಗೇಲ್ ಸುದ್ದಿಸಂಸ್ಥೆಯೊಂದರೆ ಜೊತೆ ಮಾತಾಡುವಾಗ ಗೇಲ್ ಹೇಳಿದ್ದಾರೆ.
‘ದಕ್ಷಿಣ ಆಫ್ರಿಕಾದ ಕ್ರಿಸ್ ಮೊರಿಸ್ ನನ್ನ ತಂಡದಲ್ಲಿದ್ದಾರೆ. ಇದಕ್ಕೆ ಮೊದಲು ಅವರೊಂದಿಗೆ ಆಡಿದ್ದೇನೆ. ಅವರು ಮತ್ತು ಇತರ ಆಟಗಾರರರೊಂದಿಗೆ ಪುನಃ ಆಡಲಿರುವುದು ಖುಷಿ ನೀಡುವ ಸಂಗತಿಯಾಗಿದೆ. ಹಾಗಾಗಿ ಟೂರ್ನಿ ಆರಂಭಗೊಳ್ಳುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ,’ ಎಂದು ಗೇಲ್ ಹೇಳಿದ್ದಾರೆ. ಟಿ10 ಕ್ರಿಕೆಟ್ ಬಹಳ ರೋಚಕವಾಗಿರುವ ಜೊತೆ ಕೇವಲ್ಲ 90 ನಿಮಿಷಗಳಲ್ಲಿ ಮುಗಿದು ಹೋಗುವುದರಿಂದ ಅದನ್ನು ಒಲಂಪಿಕ್ಸ್ಗೆ ಸೇರಿಸಬೇಕೆಂದು ಗೇಲ್ ಹೇಳುತ್ತಾರೆ.
ಟಿ10 ಕ್ರಿಕೆಟ್ ಲೀಗ್ ಲೊಗೊ
‘ಟಿ10 ಕ್ರಿಕೆಟ್ ಆವೃತ್ತಿಯನ್ನು ಒಲಂಪಿಕ್ಸ್ಗೆ ಸೇರಿಸಬೇಕೆಂದು ಆಗ್ರಹಿಸುತ್ತೇನೆ. ಹಾಗೆ ಮಾಡುವುದಾರೆ ಅದಕ್ಕಿಂತ ದೊಡ್ಡ ಸಂಗತಿ ಕ್ರಿಕೆಟ್ ಮತ್ತು ಒಲಂಪಿಕ್ಸ್ಗೆ ಮತ್ತೊಂದಿಲ್ಲ. ನಾನಂದುಕೊಳ್ಳುವ ಹಾಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಟಿ10 ಕ್ರಿಕೆಟ್ಗೆ ಬಹಳ ದೊಡ್ಡ ವೇದಿಕೆ ದೊರೆಯುತ್ತದೆ. ಅಮೆರಿಕಾದಲ್ಲಿ ಕ್ರಿಕೆಟ್ ಅಂದರೆ ಜನ ಮೂಗು ಮುರಿಯುತ್ತಾರೆ. ಆದರೆ ಟಿ10 ಟೂರ್ನಿ ಆಯೋಜಿಸಲು ಆ ದೇಶ ಅತ್ಯಂತ ಸೂಕ್ತವಾಗಿದೆ. ಅದು ಬಹಳಷ್ಟು ಆದಾಯವನ್ನು ಜನರೇಟ್ ಮಾಡಬಲ್ಲದೆಂದು ಖಚಿತವಾಗಿ ಹೇಳಬಲ್ಲೆ,’ ಎಂದು ಗೇಲ್ ಹೇಳಿದ್ದಾರೆ.