ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಹೆಚ್ಚಾಗುತ್ತಿದೆ. ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿಂದು ಹೊಸದಾಗಿ 7,330 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 2,71,876ಕ್ಕೇರಿದೆ.
ರಾಜ್ಯದ್ಯಂತ ಕೊವಿಡ್–19 ಇಂದು 93 ಜನರನ್ನು ಬಲಿ ಪಡೆದಿದ್ದು, ಸೋಂಕಿನಿಂದ ಸತ್ತವರ ಸಂಖ್ಯೆ 4,615 ತಲುಪಿದೆ.
ಸೋಂಕಿತರ ಪೈಕಿ 1,84,568 ಜನ ಚೇತರಿಸಿಕೊಂಡು ರಾಜ್ಯದ ಬೇರೆ ಬೇರೆ ಆಸ್ಪತ್ರೆ ಹಾಗೂ ಕೊವಿಡ್ ಕೇರ್ ಸೆಂಟರ್ಗಳಿಂದ ಡಿಸ್ಚಾರ್ಜ್ ಆಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ. ಉಳಿದ 82,677 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳನ್ನು ಕಾಣುತ್ತಿಲ್ಲ. ಇಂದು 2,979 ಜನ ಸೋಂಕಿತರ ಪಟ್ಟಿಗೆ ಸೇರಿದ್ದಾರೆ. ಶನಿವಾರ ರಾಜಧಾನಿಯಲ್ಲಿ ವೈರಸ್ಗೆ 28 ಜನ ಬಲಿಯಾಗಿದ್ದು ಮೃತರ ಒಟ್ಟು ಸಂಖ್ಯೆ 1,663ಕ್ಕೇರಿದೆ.