ಗೋವಾದಲ್ಲಿ ರಾಗಿಣಿ ಜೊತೆ ಫೋಟೋ.. ಕಾಂಗ್ರೆಸ್​ ಮುಖಂಡನಿಗೆ CCB ಬುಲಾವ್​

ಗೋವಾದಲ್ಲಿ ರಾಗಿಣಿ ಜೊತೆ ಫೋಟೋ.. ಕಾಂಗ್ರೆಸ್​ ಮುಖಂಡನಿಗೆ CCB ಬುಲಾವ್​

ಧಾರವಾಡ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ CCBಯಿಂದ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ನಟಿ ರಾಗಿಣಿ ದ್ವಿವೇದಿ ಜೊತೆ ಸಂಪರ್ಕ ಹೊಂದಿದ್ದ ಗಿರೀಶ್ ಗದಿಗೆಪ್ಪಗೌಡರ ನಟಿಯ ಜೊತೆ ಗೋವಾಕ್ಕೆ ತೆರಳಿದ್ದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಸಂಬಂಧ ಗಿರೀಶ್​ರನ್ನು CCB ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಗಿರೀಶ್ ಗದಿಗೆಪ್ಪಗೌಡರ ಭಾವಚಿತ್ರ ರಾಗಿಣಿ ಮೊಬೈಲ್‌ನಲ್ಲಿ ದೊರೆತಿದೆ. ಹೀಗಾಗಿ, ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಮನೆಯಲ್ಲಿ ತಪಾಸಣೆ ಸಹ ನಡೆಸಲಾಗಿದೆ.

Click on your DTH Provider to Add TV9 Kannada