ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿ ಮೊಳಗಲಿದೆ ‘ಕೈ’ ನಾಯಕರ ಕಹಳೆ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್

ಸಿಲಿಕಾನ್ ಸಿಟಿ ಜನರೇ ಎಚ್ಚರ. ಎಂದಿನಂತೆ ಇಂದು ಕೆಲಸಕ್ಕೆ ಅಂತ ತಮ್ಮ ವಾಹನ ಹತ್ತಿ ರಸ್ತೆಗೆ ಇಳಿಯೋ ಮುನ್ನ ಈ ಸ್ಟೋರಿ ನೋಡಿ. ಇಲ್ಲ ಅಂದ್ರೆ ನಡುರಸ್ತೆಯಲ್ಲೇ ಗಂಟೆಗಟ್ಟಲೆ ಲಾಕ್ ಆಗೋದು ಗ್ಯಾರಂಟಿ. ಉರಿ ಬಿಸಿಲಲ್ಲೇ ಗಾಡಿ ಮೇಲೆ ಕೂರೋ ಪರಿಸ್ಥಿತಿ ಎದುರಾಗೋದು ಪಕ್ಕಾ.

  • ಜಗದೀಶ್
  • Published On - 6:40 AM, 20 Jan 2021
ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿ ಮೊಳಗಲಿದೆ ‘ಕೈ’ ನಾಯಕರ ಕಹಳೆ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್
ಕಾಂಗ್ರೆಸ್ ಈ ಸಂಕಷ್ಟವನ್ನು ಹೇಗೆ ಎದುರಿಸಲಿದೆ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇಂದು ಟ್ರಾಫಿಕ್‌ನಲ್ಲಿ ಮುಳುಗಿ ಹೋಗಲಿದೆ. ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್​ಕೈಗೊಂಡಿರುವ ಬೃಹತ್ ಪ್ರತಿಭಟನಾ ಱಲಿ ಅಂಗವಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ದಂಡಿ ದಂಡಿಯಾಗಿ ರಸ್ತೆಗೆ ಇಳಿಯಲಿದ್ದು, ಬೆಂಗಳೂರಿಗರಿಗೆ ಇಂದು ಟ್ರಾಫಿಕ್ ಬಿಸಿ ತಟ್ಟೋದು ಪಕ್ಕಾ ಆಗಿದೆ.

ಱಲಿಯಲ್ಲಿ ಭಾಗಿಯಾಗಲಿದ್ದಾರೆ 10ಸಾವಿರಕ್ಕೂ ಹೆಚ್ಚು ಜನ
ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಇಂದು ನಡೆಯುವ  ಱಲಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಕೋಲಾರ, ದಾವಣಗೆರೆ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ರೈತರು, ಕೈ ಕಾರ್ಯಕರ್ತರು, ರೈತರ ಸಂಘಟನೆಗಳ ಕಾರ್ಯಕರ್ತರು ಱಲಿಯಲ್ಲಿ ಭಾಗಿಯಾಗಲಿದ್ದಾರೆ.

ಯಾವ್ಯಾವ ಜಿಲ್ಲೆಗಳಿಂದ ಎಷ್ಟು ಜನ?
ಕೋಲಾರ ಜಿಲ್ಲೆಯಿಂದ 5000 ಕ್ಕೂ ಹೆಚ್ಚು ಜನ ಬೆಂಗಳೂರಿಗೆ ಆಗಮಿಸಿ ಱಲಿಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯಿಂದ 5000, ರಾಮನಗರ ಜಿಲ್ಲೆಯಿಂದ 5 ಸಾವಿರ, ಬೆಳಗಾವಿ ಜಿಲ್ಲೆಯಿಂದ 2,500,
ಮಂಡ್ಯ ಜಿಲ್ಲೆಯಿಂದ 2 ಸಾವಿರ, ಹಾಸನ ಜಿಲ್ಲೆಯಿಂದ ಸುಮಾರು 1500, ವಿಜಯಪುರ ಜಿಲ್ಲೆಯಿಂದ 1500, ಚಿಕ್ಕಬಳ್ಳಾಪುರ ಜಿಲ್ಲೆಯಿಂದ 1500, ಶಿವಮೊಗ್ಗ  ಜಿಲ್ಲೆಯಿಂದ  1000, ಚಿತ್ರದುರ್ಗ ಜಿಲ್ಲೆಯಿಂದ 1000,
ಗದಗ ಜಿಲ್ಲೆಯಿಂದ 600, ಹಾವೇರಿ‌ ಜಿಲ್ಲೆಯಿಂದ 500, ಧಾರವಾಡ ಜಿಲ್ಲೆಯಿಂದ 400, ಬಾಗಲಕೋಟೆಯಿಂದ 300, ಬಳ್ಳಾರಿ ಜಿಲ್ಲೆಯಿಂದ 200, ಕಲಬುರಗಿ ಜಿಲ್ಲೆಯಿಂದ 200ಕ್ಕೂ ಅಧಿಕ ಜನ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಿಂದ ಸಾವಿರಾರು ಜನರು ಪ್ರತಿಭಟನಾ ಱಲಿಗೆ ಆಗಮಿಸಲಿದ್ದಾರೆ.

ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್.. ಜಾಮ್..!
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಇಂದಿನ ಱಲಿಯಲ್ಲಿ ಭಾಗಿಯಾಗುವ ಸಾಧ್ಯತೆಯಿರೋದ್ರಿಂದ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗೋದು ಪಕ್ಕಾ

ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಕೆ.ಜಿ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಮೈಸೂರ್ ಬ್ಯಾಂಕ್, ಆನಂದ್ ರಾವ್ ಸರ್ಕಲ್, ಫ್ರೀಡಂಪಾರ್ಕ್ ರಸ್ತೆ
ಅಣ್ಣಮ್ಮ ದೇಗುಲದ ರಸ್ತೆ, ಗಾಂಧಿನಗರ, ಮೌರ್ಯ ಸರ್ಕಲ್, ಚಾಲುಕ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ , ಕೆ.ಆರ್ ಸರ್ಕಲ್ ಸೇರಿದಂತೆ ಇನ್ನು ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ.

ಸದ್ಯಕ್ಕೆ ಯಾವುದೇ ಮಾರ್ಗದಲ್ಲಿ ಬದಲಾವಣೆ ಮಾಡಿಲ್ಲ. ಱಲಿ ವೇಳೆ ಪರಿಸ್ಥಿತಿ ನೋಡಿಕೊಂಡು ಮಾರ್ಗ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದಾಗಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

‘ರಾಜಭವನ ಚಲೋಗೆ ಯಾವುದೇ ಅನುಮತಿ ನೀಡಿಲ್ಲ’
ಇನ್ನು ಇಂದು ನಡೆಯಲಿರೋ ರಾಜಭವನ ಚಲೋ ಕುರಿತಂತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ರಾಜಭವನ ಚಲೋಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದ್ರೆ ಱಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೊನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಱಲಿಯಲ್ಲಿ 200 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ನಿಯಮ ಉಲ್ಲಂಘನೆ ಆದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ನಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಇಂದು ನಡೆಯುತ್ತಿರುವ ಱಲಿಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಇವತ್ತು ಸಿಲಿಕಾನ್ ಸಿಟಿ ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟೋದಂತು ನಿಜ.

ಜನವರಿ 29ರಂದು ವಿಧಾನ ಪರಿಷತ್​ನ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ