ಬೆಣ್ಣೆನಗರಿಯಲ್ಲಿ ಗಾಂಜಾ ಗಬ್ಬುನಾತ.. ಇನೋವಾ ಕಾರ್​ನಲ್ಲಿ ಸಿಕ್ತು 5 KG ಗಾಂಜಾ

ಬೆಣ್ಣೆನಗರಿಯಲ್ಲಿ ಗಾಂಜಾ ಗಬ್ಬುನಾತ.. ಇನೋವಾ ಕಾರ್​ನಲ್ಲಿ ಸಿಕ್ತು 5 KG ಗಾಂಜಾ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದ ಪೊಲೀಸರು ಕಾರ್ಯಾಚರಣ ನಡೆಸಿ ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸುವ ಜೊತೆಗೆ ಒಂದು ಇನೋವಾ ಕಾರ್ ಹಾಗೂ 5.25 ಕೆ.ಜಿ ಗಾಂಜಾ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಷರೀಫ್ ಖಾನ್ (32), ಜಬೀವುಲ್ಲಾ (27), ಫತೇ ಖಾನ್ (29) ತೌಸೀಫ್ ಖಾನ್ (29) ಹಾಗೂ ಚಂದ್ರಶೇಖರ್ (32) ಎಂದು ಗುರುತಿಸಲಾಗಿದೆ. ಇವರೆಲ್ಲಾ ಚನ್ನಗಿರಿ ಸುತ್ತಮುತ್ತಲಿನ ಗ್ರಾಮಗಳ‌ ನಿವಾಸಿಗಳು ಎಂದು ಸಹ ತಿಳಿದುಬಂದಿದೆ.

ಆರೋಪಿಗಳು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

Click on your DTH Provider to Add TV9 Kannada