ಬೈಕ್​ ಮೇಲೆ ಪೊಲೀಸ್​ ಅಂತಾ ಬರೆಸಿ, cityಗೆ ಎಂಟ್ರಿ ಕೊಟ್ಟ ತೆಲುಗು ಬಿಡ್ಡ.. ಕೊನೆಗೆ ಸಿಕ್ಕಿಬಿದ್ದ!

  • Publish Date - 6:52 pm, Sun, 6 September 20
ಬೈಕ್​ ಮೇಲೆ ಪೊಲೀಸ್​ ಅಂತಾ ಬರೆಸಿ, cityಗೆ ಎಂಟ್ರಿ ಕೊಟ್ಟ ತೆಲುಗು ಬಿಡ್ಡ.. ಕೊನೆಗೆ ಸಿಕ್ಕಿಬಿದ್ದ!

ಬೆಂಗಳೂರು: ಬೈಕ್​ ಮೇಲೆ ನಂಬರ್​ ಪ್ಲೇಟ್​ ಬದಲು ಪೊಲೀಸ್ ಅಂತಾ ಬರೆಸಿಕೊಂಡಿದ್ದ ಸವಾರನಿಗೆ ಪೊಲೀಸರು ದಂಡ ವಿಧಿಸಿರುವ ಸ್ವಾರಸ್ಯಕರ ಘಟನೆ ಕೆ.ಆರ್.ಪುರಂನಲ್ಲಿ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ಯುವಕ ಕುಮಾರ ಕಳೆದ ಕೆಲವು ದಿನಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಈ ನಡುವೆ, ಬೈಕ್​ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿದ್ದ. ಇದನ್ನ ಎಲ್ಲಾ ಕಡೆ ತೋರಿಸಿ ಅನಂತಪುರದಿಂದ ಬೆಂಗಳೂರಿನವರೆಗೆ ಆರಾಮಾಗಿ ಗಾಡಿ ಓಡಿಸಿಕೊಂಡು ಬಂದಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಿಗೆ ಬಂದಾಗ ಇದನ್ನು ಗಮನಿಸಿದ ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ಆತನನ್ನು ಅಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ಕುಮಾರ ನಿಜಾಂಶವನ್ನ ಬಾಯಿಬಿಟ್ಟಿದ್ದಾನೆ. ಹಾಗಾಗಿ, ಸಂಚಾರಿ ನಿಯಮದ ಉಲ್ಲಂಘನೆ ಅಡಿಯಲ್ಲಿ ಕುಮಾರನಿಗೆ ಪೊಲೀಸರು 2,000 ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ, ಬೈಕ್​ ಮೇಲೆ ಇದ್ದ ಪೊಲೀಸ್​ ಪ್ಲೇಟ್​ನ ಸಹ ತೆಗೆಸಿದ್ದಾರೆ.

Click on your DTH Provider to Add TV9 Kannada