ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಕಂಟಕ, ಈ ದುರಭ್ಯಾಸವೇ ನಿಮ್ಮ ಜೀವಕ್ಕೆ ಮುಳುವಾಗಬಹುದು..

  • TV9 Web Team
  • Published On - 8:33 AM, 1 Nov 2020
ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಕಂಟಕ, ಈ ದುರಭ್ಯಾಸವೇ ನಿಮ್ಮ ಜೀವಕ್ಕೆ ಮುಳುವಾಗಬಹುದು..

ಬೆಂಗಳೂರು: ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಗಂಭೀರ ಸಮಸ್ಯೆ ಎದುರಾಗಲಿದೆ. ಮದ್ಯಪ್ರಿಯರ ಲಿವರ್ ಮೇಲೆ ‘ಕೊರೊನಾ’ ಪ್ರಭಾವ ಅಪಾರವಾಗಿರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸೋಂಕಿನಿಂದ ಮೃತಪಟ್ಟ ಕೆಲವರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಮದ್ಯಪಾನ ಮಾಡುವವರಿಗೆ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಸೋಂಕಿತರು ಲಿವರ್ ಮೇಲಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶ್ವಾಸಕೋಶದೊಂದಿಗೆ ವಿವಿಧ ಅಂಗಗಳ ಮೇಲೂ ಪರಿಣಾಮ ಬೀರುತ್ತೆ.

ಮದ್ಯಪಾನ ಮಾಡುವವರ ಲಿವರ್ ದುರ್ಬಲವಾಗುವ ಹಿನ್ನೆಲೆಯಲ್ಲಿ ‘ಕೊರೊನಾ’ ಸೋಂಕಿನಿಂದ ಲಿವರ್ ಮೇಲೆ ಅಡ್ಡ ಪಾರಿಣಾಮ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಶೇಕಡ 20-35ರಷ್ಟು ಸೋಂಕಿತರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದೆ. ಲಿವರ್ ಮೇಲೆ ವೈರಸ್ ದಾಳಿಯಿಂದ ಸುಸ್ತು, ವಾಂತಿ ಸಮಸ್ಯೆಗಳು ಉಂಟಾಗುತ್ತವೆ. ಮದ್ಯ ಪ್ರಿಯರಿಗೆ ‘ಕೊರೊನಾ’ ಗಂಭೀರ ಸಮಸ್ಯೆ ತಂದೊಡ್ಡಿದೆ. ಕೊರೊನಾ ಸೋಂಕಿತರು ಸ್ವಲ್ಪ ಯಾಮಾರಿದರೂ ಗಂಡಾಂತರ ಕಟ್ಟಿಟ್ಟ ಬುತ್ತಿ.