ಕೊರೊನಾ ಕ್ಷಿಣಿಸುತ್ತಿರೋ ಹೊತ್ತಲ್ಲಿ ಬಿಗ್ ಶಾಕ್, ಕರುನಾಡಿನ 5 ಜಿಲ್ಲೆಗಳು ಹಾಟ್ ಸ್ಪಾಟ್

  • TV9 Web Team
  • Published On - 6:56 AM, 21 Oct 2020
ಕೊರೊನಾ ಕ್ಷಿಣಿಸುತ್ತಿರೋ ಹೊತ್ತಲ್ಲಿ ಬಿಗ್ ಶಾಕ್, ಕರುನಾಡಿನ 5 ಜಿಲ್ಲೆಗಳು ಹಾಟ್ ಸ್ಪಾಟ್
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸವಂತೂ ಕಡಿಮೆಯಾಗೋ ಯಾವ ಲಕ್ಷಣಗಳೂ ಕಾಣ್ತಿಲ್ಲ. ಬದಲಾಗಿ ಪರಿಸ್ಥಿತಿ ಕೈ ಮೀರಿ ಹೋಗೋ ಎಲ್ಲಾ ಲಕ್ಷಣಗಳೂ ಎದ್ದು ಕಾಣ್ತಿದೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ವೈರಸ್ ಎಲ್ಲೆ ಮೀರಿ ಅರ್ಭಟಿಸ್ತಿದೆ.

ಅಟ್ಯಾಕ್.. ಡೆಡ್ಲಿ ಅಟ್ಯಾಕ್‌.. ಯಾರೂ ಊಹಿಸಿಕೊಳ್ಳಲಾಗದಂತಹ ಅಟ್ಯಾಕ್‌.. ಜಿಲ್ಲೆ ಜಿಲ್ಲೆಗಳಲ್ಲಿ.. ನಗರ ನಗರಗಳಲ್ಲಿ.. ಗಲ್ಲಿ ಗಲ್ಲಿಯಲ್ಲಿ ಹೆಮ್ಮಾರಿಯ ಡೆಡ್ಲಿ ದಾಳಿ. ಕರುನಾಡಲ್ಲಿ ಹೆಮ್ಮಾರಿ ವೈರಸ್​ನ ಅಟ್ಟಹಾಸ ಮಿತಿ ಮೀರ್ತಿದೆ. ಸೋಂಕಿನ ವಿಷ ಚಲ್ಲುತ್ತಾ, ಪ್ರಾಣ ತೆಗೆಯುತ್ತಿದೆ.

ಕರುನಾಡಿಗೆ ಕಂಟಕವಾದ ಕ್ರೂರಿ ಕೊರೊನಾ!
ಯಾವ ಜಿಲ್ಲೆಗಳನ್ನೂ ಬಿಡದೆ ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ರಾಜಧಾನಿ ಬೆಂಗಳೂರಿಂದ ಹಿಡಿದು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ವೈರಸ್ ವೀರಾವೇಶದಿಂದ ಅಟ್ಟಹಾಸ ಮೆರೆಯುತ್ತಿದೆ. ಮಳೆ ಒಂದ್ಕಡೆ ಜನರ ಜೀವ ಹಿಂಡುತ್ತಿದ್ದರೆ, ಕೊರೊನಾ ಪ್ರಾಣ ತೆಗೆದು ರಣಕೇಕೆ ಹಾಕುತ್ತಿದೆ.

ರಾಜ್ಯದಲ್ಲಿ 7,76,901 ಜನರಿಗೆ ಸೋಂಕು, 10,608 ಬಲಿ!
ಯೆಸ್‌, ಕಿಲ್ಲರ್ ಕೊರೊನಾ ದಾಳಿಗೆ ಕರುನಾಡು ನಡುಗಿ ಹೋಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 6,297 ಜನರಿಗೆ ಕೊರೊನಾ ದೃಢವಾಗಿದ್ದು, ಸೋಂಕಿತರ ಸಂಖ್ಯೆ 7,76,901ಕ್ಕೆ ಏರಿಕೆಯಾಗಿದೆ. ಹಾಗೆ, ರಕ್ಕಸ ವೈರಸ್ ಬೀಸಿದ ಬಲೆಗೆ ಸಿಲುಕಿ ನಿನ್ನೆ 66 ಜನ ಪ್ರಾಣ ಬಿಟ್ಟಿದ್ದು, ಒಟ್ಟು, 10,608 ಜನ ಸಾವಿನ ಮನೆ ಸೇರಿದ್ದಾರೆ.

ಕೊರೊನಾದಲ್ಲಿ ಬೆಂದು ಹೋಗುತ್ತಿದೆ ಬೆಂಗಳೂರು!
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಸಿಕ್ಕ ಸಿಕ್ಕವರನ್ನ ತನ್ನ ಬಲೆಗೆ ಕೆಡವಿಕೊಂಡು ರಣಕೇಕೆ ಹಾಕುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ನರ್ತನ!
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 2,821 ಜನರಿಗೆ ಸೋಂಕು ತಗಲಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 3,12,842ಕ್ಕೇರಿಕೆಯಾಗಿದೆ. ಹಾಗೇ ನಿನ್ನೆ ಬೆಂಗಳೂರಿನಲ್ಲಿ 36 ಜನ ಸೇರಿ ಈವರೆಗೆ 3,578 ಜನರ ಸಾವಿನ ಮನೆ ಸೇರಿದ್ದಾರೆ. ಇನ್ನು ಯಾವ ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕಿತರು ಇದ್ದಾರೆ ಅನ್ನೋದನ್ನ ನೋಡೋದಾದ್ರೆ..

ಜಿಲ್ಲೆ ಜಿಲ್ಲೆಗಳಲ್ಲಿ ಕೊರೊನಾ ಸವಾರಿ!
ಇನ್ನು ಮೈಸೂರಿನಲ್ಲಿ ಇಲ್ಲಿಯ ತನಕ 45,644 ಜನಕ್ಕೆ ಸೋಂಕು ತಗುಲಿದ್ದು, ಇದರಲ್ಲಿ 929 ಜನ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಬಳ್ಳಾರಿಯಲ್ಲಿ 36,076 ಜನ ಸೋಂಕಿತರಿದ್ರೆ, 513 ಜನ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ 23,630 ಜನ ಸೋಂಕಿತರಲ್ಲಿ, 358 ಜನಕ್ಕೆ ಕೊರೊನಾಕ್ಕೆ ಜೀವ ಕಳೆದು ಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 28,567 ಜನಕ್ಕೆ ಕೊರೊನಾ ದೃಢವಾಗಿದ್ದು, ಇದರಲ್ಲಿ 641 ಜನರ ಪ್ರಾಣ ಹೋಗಿದೆ. ಉಡುಪಿಯಲ್ಲಿ 21,012 ಕೊರೊನಾ ಕೇಸ್ ದೃಢವಾಗಿದ್ರೆ, 176 ಜನ ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ 19,148 ಜನ ಸೋಂಕಿತರಿದ್ದು, 301 ಜನ ಪ್ರಾಣ ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ 19,816 ಜನರ ಮೇಲೆ ಸೋಂಕು ದಾಳಿ ಮಾಡಿದ್ರೆ, 336 ಪ್ರಾಣ ಕಸಿದುಕೊಂಡಿದೆ. ಹೀಗೆ 30 ಜಿಲ್ಲೆಯಲ್ಲೂ ಕ್ರೂರಿ ಅಟ್ಟಹಾಸ ಮೆರೆಯುತ್ತಿದೆ. ಈ ಪೈಕಿ ಬೆಂಗಳೂರು, ಮೈಸೂರು, ಹಾಸನ, ತುಮಕೂರಲ್ಲಿ ಹೆಚ್ಚು ಕೇಸ್​ಗಳಿದ್ದು, ಕರುನಾಡಿನ 5 ಜಿಲ್ಲೆಗಳು ಹಾಟ್ ಸ್ಪಾಟ್ ಆಗಿವೆ.

ಒಟ್ನಲ್ಲಿ ಡೆಡ್ಲಿ ವೈರಸ್ ಆರ್ಭಟಕ್ಕೆ ಕರುನಾಡಿನ ಜನ ನಲುಗಿ ಹೋಗಿದ್ದು, ಯಾವಾಗ ಇದರಿಂದ ಮುಕ್ತಿ ಸಿಗುತ್ತೋ ಅಂತ ಕಾಯುತ್ತಿದ್ದಾರೆ.